Authors
ಜನವರಿ 1ರಿಂದ ಆರ್‌ಬಿಐ 2,000 ರೂ. ನೋಟುಗಳನ್ನು ನಿಷೇಧಿಸಿ, ಅದೇ ದಿನ 1,000 ರೂ. ನೋಟುಗಳನ್ನು ಚಲಾವಣೆಗೆ ತರಲಿದೆ ಎಂದು ಆಡಿಯೋ ಕ್ಲಿಪ್ ಒಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ.
ಈ ಕ್ಲೇಮಿನಲ್ಲಿ “ಆರ್‌ಬಿಐ ಜನವರಿ 1 ರಿಂದ ಹೊಸ 1,000 ರೂ. ಚಲಾವಣೆಗೆ ತರಲಿದ್ದು, ಅದೇ ದಿನ 2,000 ರೂ. ನೋಟನ್ನು ನಿಷೇಧಿಸಲಿದೆ. ಕೇವಲ 50,000 ರೂ.ವರೆಗಿನ ಮೊತ್ತವನ್ನು ಮಾತ್ರ ವಿನಿಮಯ ಮಾಡಿಕೊಳ್ಳಬಹುದು” ಎಂದು ವಾಟ್ಸಪ್ ಮೆಸೇಜ್‌ನಲ್ಲಿ ಹೇಳಲಾಗಿದೆ.
ಇದರೊಂದಿಗೆ Pradeep Kumar NK ಐಡಿಯಿಂದ ಪೋಸ್ಟ್ ಮಾಡಲಾದ ರೀಲ್ಸ್ ಅನ್ನು 6.6 ಸಾವಿರ ಜನ ಲೈಕ್ ಮಾಡಿದ್ದು, 4.2 ಸಾವಿರ ಜನ ಈ ರೀಲ್ಸನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದು, 2,000 ರೂ. ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತದೆಯೇ ಎಂದು ಕೇಳಿದ್ದರು. ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ಅವರು ಈ ಪ್ರಶ್ನೆಯನ್ನು ಕೇಳಿದ್ದು, ಅಮೆರಿಕ, ಚೀನ, ಜರ್ಮನಿ ಮತ್ತಿತರ ದೇಶಗಳಲ್ಲಿ 100 ರೂ. ಗಿಂತ ಹೆಚ್ಚು ಮೌಲ್ಯದ ನೋಟುಗಳು ಇಲ್ಲ ಎಂಬುದನ್ನು ಉದಾಹರಣೆಯಾಗಿ ಹೇಳಿದ್ದರು.
Fact Check/Verification
ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೇಳಿಕೊಂಡು ನೋಟು ಮುದ್ರಣವನ್ನು ಮಾಡುತ್ತದೆ. ಅಂತಹ ಸಂದರ್ಭದಲ್ಲಿ ಆರ್‌ಬಿಐ ಅಧಿಕೃತವಾಗಿ ಸುತ್ತೋಲೆಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡುತ್ತದೆ. ಆದರೆ, ಅಂತಹ ಯಾವುದೇ ಸುತ್ತೋಲೆಯನ್ನು ಆರ್‌ಬಿಐ ಹೊರಡಿಸಿದ್ದು ಕಂಡು ಬಂದಿಲ್ಲ. ಜೊತೆಗೆ 2,000 ನೋಟುಗಳನ್ನು ವಾಪಸ್ ಪಡೆದು ಅದೇ ದಿನ ಹೊಸ 1,000 ರೂ. ನೋಟು ಚಲಾವಣೆಗೆ ಬಿಡುಗಡೆ ಮಾಡುವ ಬಗ್ಗೆಯೂ ಯಾವುದೇ ಸುತ್ತೋಲೆ ಕಂಡು ಬಂದಿಲ್ಲ.
ಈ ವಿಚಾರದ ಬಗ್ಗೆ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಟ್ವೀಟ್ ಲಭ್ಯವಾಗಿದೆ. ಅದರಲ್ಲಿ ಇಂತಹ ಸುದ್ದಿಗಳು ಸುಳ್ಳು ಎಂದು ಹೇಳಲಾಗಿದೆ.
ಇನ್ನು ಸೆಪ್ಟೆಂಬರ್ 19, 2020ರಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು, 2019-20 ಮತ್ತು 2020-21ರಲ್ಲಿ 2,000 ರೂ ನೋಟು ಮುದ್ರಣಕ್ಕೆ ಯಾವುದೇ ಸೂಚನೆ ನೀಡಲಾಗಿಲ್ಲ, ಜೊತೆಗೆ 2,000 ರೂ. ನೋಟು ಮುದ್ರಣ ಸ್ಥಗಿತಕ್ಕೂ ನಿರ್ಧರಿಸಿಲ್ಲ” ಎಂದು ಹೇಳಿದ್ದಾರೆ.
Also read: ಪೆಟ್ರೋಲ್ ಪಂಪ್‌ನಲ್ಲಿ ಕೊಟ್ಟ ಕೀಚೈನಿಂದ ದರೋಡೆ? ವೈರಲ್ ಮೆಸೇಜ್ ಸತ್ಯವೇ
“ಮಾರ್ಚ್ 21, 2020ರವರೆಗೆ ದೇಶದಲ್ಲಿ 27,398 ಲಕ್ಷ 2,000 ರೂ. ನೋಟುಗಳು ಚಲಾವಣೆಯಲ್ಲಿವೆ. ಮಾರ್ಚ್ 31, 2019ರ ಹೊತ್ತಿಗೆ 32,910 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು. “ ದೇಶಾದ್ಯಂತ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ನೋಟು ಮುದ್ರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ, ಕೇಂದ್ರ/ರಾಜ್ಯ ಸರ್ಕಾರಗಳ ನಿಯಮಗಳ ಅನ್ವಯ ಹಂತ ಹಂತವಾಗಿ ಮುದ್ರಣ ಪುನರಾರಂಭವಾಗಲಿದೆ” ಎಂದು ಅವರು ಹೇಳಿದ್ದರು.
ಅನುರಾಗ್ ಠಾಕೂರ್ ಅವರ ಈ ಪ್ರತಿಕ್ರಿಯೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಅದನ್ನು ಇಲ್ಲಿ ನೋಡಬಹುದು.
Conclusion
ಜನವರಿ 1ರಿಂದ 2,000 ರೂ. ನೋಟುಗಳ ಹಿಂಪಡೆಯುವಿಕೆ ಮತ್ತು ಅದೇ ದಿನ 1,000 ರೂ. ನೋಟುಗಳನ್ನು ಆರ್‌ಬಿಐ ಚಲಾವಣೆಗೆ ತರಲಿದೆ ಎನ್ನುವ ಕ್ಲೇಮ್ ಸುಳ್ಳಾಗಿದ್ದು, ಈ ವಿಚಾರದಲ್ಲಿ ಯಾವುದೇ ಅಧಿಕೃತ ಸುತ್ತೋಲೆಯನ್ನು ಹೊರಡಿಸಿಲ್ಲ. ಇದರೊಂದಿಗೆ ಪಿಐಬಿ ಸತ್ಯಶೋಧನೆಯೂ ಇದು ಸುಳ್ಳು ಮಾಹಿತಿ ಎಂದು ಹೇಳಿದೆ.
Result: False
Our Sources
Press Information Bureau Fact Check on December 16,2022
Minister of State for Finance, Anurag Thakur’s written reply in Lok Sabha on September 19,2020
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.