Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂಬಂತೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಸಂದೇಶದಲ್ಲಿ “ನನ್ನ ಪ್ರೀತಿಯ ಭಾರತೀಯ ನಾಗರಿಕರೇ, ಈ ಬಾರಿ ನೀವೆಲ್ಲರೂ ಇದನ್ನೇ ಮಾಡಬೇಕು ಅಂದರೆ ಮುಂಬರುವ ದೀಪಾವಳಿ ಹಬ್ಬದಂದು, ನಿಮ್ಮ ನೆಗಳಲ್ಲಿ ದೀಪ ಹಚ್ಚುವುದು, ಅಲಂಕಾರ, ಸಿಹಿತಿಂಡಿಗಳು ಇತ್ಯಾದಿಗಳಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ ಬಳಸಿ. ನೀವು ಖಂಡಿತವಾಗಿ ಪ್ರಧಾನ ಮಂತ್ರಿಯ ಮಾತುಗಳನ್ನು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಸಣ್ಣ ಹೆಜ್ಜೆಗಳೊಂದಿಗೆ ನನಗೆ ಬೆಂಬಲ ನೋಡಿದರೆ, ನಮ್ಮ ಭಾರತವನ್ನು ವಿಶ್ವದ ಮೊದಲ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದಿದೆ. ಇದರ ಕೊನೆಯಲ್ಲಿ ನರೇಂದ್ರ ಮೋದಿಯವರ ಸಹಿ ಇದೆ.

Also Read: ಐಟಿಆರ್ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂಬ ವೈರಲ್ ‘ಸುತ್ತೋಲೆ’ ನಕಲಿ
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದೊಂದು ಸುಳ್ಳು ಸಂದೇಶ ಎಂದು ತಿಳಿದುಬಂದಿದೆ.
ತನಿಖೆಯ ಭಾಗವಾಗಿ ನಾವು ವೈರಲ್ ಸಂದೇಶದ ಫೋಟೋವನ್ನು ಕೂಲಂಕಷವಾಗಿ ಗಮನಿಸಿದ್ದೇವೆ. ಇದರಲ್ಲಿ ಗೂಗಲ್ ಲೆನ್ಸ್ ಮೂಲಕ ಟ್ರಾನ್ಸ್ ಲೇಟ್ ಮಾಡಲಾಗಿದೆ ಎಂದಿದೆ. ಆದ್ದರಿಂದ ಇದರಲ್ಲಿ ಮೂಲ ಭಾಷೆ ಬೇರೆ ಇದ್ದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಈ ಸಂದೇಶದಲ್ಲಿ ಯಾವುದೇ ದಿನಾಂಕವಿಲ್ಲ, ಅಶೋಕ ಲಾಂಛನದ ಬದಿಯಲ್ಲಿ ಮೋದಿಯವರ ಫೋಟೋ ಹಾಕಿರುವುದೂ ಸಂಶಯಕ್ಕೆಡೆ ಮಾಡಿದೆ.

ಆ ನಂತರ ನಾವು ಮೋದಿ ಸಂದೇಶದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದು ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಪ್ರಧಾನಿ ಮೋದಿ ಅವರು ಇಂತಹ ಕರೆ ನೀಡಿದ್ದರ ಬಗ್ಗೆ ಯಾವುದೇ ವಿವರಗಳೂ ದೊರಕಿಲ್ಲ. ಆ ಬಳಿಕ ನಾವು ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣಗಳನ್ನೂ ಪರಿಶೀಲಿಸಿದಾಗ, ಅಂತಹ ಯಾವುದೇ ಸಂದೇಶಗಳು ಕಂಡುಬಂದಿಲ್ಲ.
ಆ ನಂತರ ನಾವು ವೈರಲ್ ಆದ ಸಂದೇಶದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಿಂದಿಭಾಷೆಯಲ್ಲೂ ಇಂತಹುದೇ ಪೋಸ್ಟ್ ಗಳನ್ನು ನೋಡಿದ್ದೇವೆ. ಅವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧನೆ ಮಾಡಿದಾಗ, ಆಗಸ್ಟ್ 31, 2016 ರಂದು ಪಿಎಂಒ ಇಂಡಿಯಾದ ಅಧಿಕೃತ ಎಕ್ಸ್ ಖಾತೆಯಿಂದ ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಇದರ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ. ಪಿಎಂಒದ ಪೋಸ್ಟ್ ನಲ್ಲಿ ‘ಪ್ರಧಾನಿಯವರ ಸಹಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಕೆಲವು ಮನವಿಗಳನ್ನು ಮಾಡಲಾಗುತ್ತಿದೆ. ಈ ದಾಖಲೆ ನಿಜವಾದ್ದಲ್ಲ’ ಎಂದಿದೆ.

ಆದ್ದರಿಂದ ಈ ತನಿಖೆಯ ಪ್ರಕಾರ, ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎನ್ನುವುದು ನಿಜವಲ್ಲ ಎಂದು ಗೊತ್ತಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ ಎಂದು ತಿಳಿದುಬಂದಿದೆ.
Also Read: ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದ ವೀಡಿಯೋ ನಿಜವಲ್ಲ!
Our Sources
X post by PMOIndia, Dated: August 31, 2016
Self analysis
Vasudha Beri
November 20, 2025
Ishwarachandra B G
November 1, 2025
Runjay Kumar
October 31, 2025