Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನಿಗಳ ವೀಸಾ ರದ್ದು, ಭಾರತದ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ. ಮಲಿಕ್ ಪಾಕಿಸ್ತಾನವನ್ನು ಹೊಗಳಿ ರಫೇಲ್ ಜೆಟ್ಗಳ ನಷ್ಟವನ್ನು ಒಪ್ಪಿಕೊಂಡಿದ್ದಾರೆ, ಮದುವೆಗೂ ಮುನ್ನ ವಧು ಮಾಜಿ ಗೆಳೆಯನನ್ನು ಭೇಟಿಯಾಗುವ ವೈರಲ್ ವಿಡಿಯೋ, ಮೂರು ತಲೆಯ ಆನೆ ಮರಿ ಎಂಬ ವೀಡಿಯೋಗಳು ಈ ವಾರ ವೈರಲ್ ಆಗಿವೆ. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ ಇವುಗಳು ನಿಜವಲ್ಲ ಎಂದು ಕಂಡುಬಂದಿದೆ. ಈ ಸತ್ಯಶೋಧನೆಗಳ ಕುರಿತ ವಾರದ ನೋಟ ಇಲ್ಲಿದೆ.

ಆಸ್ಟ್ರೇಲಿಯಾದ ಬಾಂಡಿ ಬೀಚ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿಗಳ ವೀಸಾ ರದ್ದು ಮಾಡಲಾಗಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ವೇಳೆ ಆಸ್ಟ್ರೇಲಿಯಾ ಪ್ರಧಾನಿಯವರ ಈ ವೀಡಿಯೋಎಐ ಸೃಷ್ಟಿ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಹೈದರಾಬಾದ್ಗೆ ಆಗಮಿಸಿದ ಅರ್ಜೆಂಟೀನಾದ ಫುಟ್ಬಾಲ್ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿ ಅವರನ್ನು ಸ್ವಾಗತಿಸಲು ಬೃಹತ್ ಜನಸಮೂಹ ಸೇರಿರುವುದನ್ನು ತೋರಿಸುವ ವೈರಲ್ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸತ್ಯಶೋಧನೆ ಪ್ರಕಾರ, ವೈರಲ್ ವೀಡಿಯೋದಲ್ಲಿ ಲಿಯೋನೆಲ್ ಮೆಸ್ಸಿ ಹೈದರಾಬಾದ್ಗೆ ಆಗಮಿಸುತ್ತಿರುವುದನ್ನು ತೋರಿಸಲಾಗಿಲ್ಲ, ಬದಲಾಗಿ, ಪುಷ್ಪ 2: ದಿ ರೂಲ್ ಚಿತ್ರದ ಪ್ರಥಮ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿರುವುದನ್ನು ತೋರಿಸಲಾಗಿದೆ. ಈ ವರದಿ ಇಲ್ಲಿ ಓದಿ

ಭಾರತದ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ. ಮಲಿಕ್ ಅವರು ಪಾಕಿಸ್ತಾನವನ್ನು ಹೊಗಳಿ ನೆರೆಯ ದೇಶ ಅತ್ಯತ್ತಮ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಯನ್ನು ಹೊಂದಿದೆ, ಇದು ಆಪರೇಷನ್ ಸಿಂದೂರ್ ಸಮಯದಲ್ಲಿ ರಫೇಲ್ ಜೆಟ್ ಗಳು ಮತ್ತು ಎಸ್-400 ವಾಯು ರಕ್ಷಣಾ ವ್ಯವಸ್ಥೆ ನಾಶಕ್ಕೆ ಕಾರಣವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ ಎಂದು ವೀಡಿಯೋ ಹರಿದಾಡಿದೆ. ಸತ್ಯಶೋಧನೆ ವೇಳೆ ಇದು ಎಐ ಮೂಲಕ ತಿರುಚಿದ ವೀಡಿಯೋ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ವಧುವೊಬ್ಬಳು ತನ್ನ ಮದುವೆಯ ಆಚರಣೆಗಳಿಗೆ ಕೇವಲ ಎರಡು ಗಂಟೆಗಳ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಕಾರಿನಲ್ಲಿ ಬರುತ್ತಿರುವುದನ್ನು ತೋರಿಸುವ ಅತ್ಯಂತ ಭಾವನಾತ್ಮಕ ವೀಡಿಯೋವೊಂದು ಇಂಟರ್ನೆಟ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಇದು ಸ್ಕ್ರಿಪ್ಟೆಡ್ ವೀಡಿಯೋ, ನಿಜವಲ್ಲ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಮೂರು ತಲೆಯ ಆನೆ ಮರಿ ಪತ್ತೆಯಾಗಿದೆ ಎಂಬಂತೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ಎಐ ವೀಡಿಯೋ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ
Salman
December 18, 2025
Ishwarachandra B G
October 11, 2025
Ishwarachandra B G
September 22, 2025