Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುಹಾಕಿದ ಆಫ್ಘಾನಿಸ್ತಾನ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ಅಫ್ಘಾನಿಸ್ತಾನ ಹೊಡೆದು ಹಾಕಿದ ಪಾಕಿಸ್ತಾನದ ಯುದ್ಧ ವಿಮಾನವಲ್ಲ, ಬದಲಾಗಿ ಬಾರ್ಮೇರ್ ನಲ್ಲಿ ಭಾರತದ ಮಿಗ್ 21 ವಿಮಾನ ಪತನಗೊಂಡ ಸಂದರ್ಭದ ದೃಶ್ಯ ಎಂದು ಗೊತ್ತಾಗಿದೆ.

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
Also Read: ನೇಪಾಳದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಕಲ್ಲುತೂರಿದ್ದಕ್ಕಾಗಿ ಮಸೀದಿಗೆ ಬೆಂಕಿ?
ಈ ವೇಳೆ ವಿವಿಧ ಮಾಧ್ಯಮಗಳು ಇದು 2022ರಲ್ಲಿ ರಾಜಸ್ಥಾನದ ಬಾರ್ಮೇರ್ ನಲ್ಲಿ ಭಾರತೀಯ ವಾಯುಪಡೆ ವಿಮಾನ ಪತನದ ದೃಶ್ಯ ಎಂದಿವೆ.
ಜುಲೈ 28, 2022ರ ಎಬಿಪಿ ಲೈವ್ ಪ್ರಕಾರ, ಗುರುವಾರ ಸಂಜೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಳಿ ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಪತನಗೊಂಡಿದೆ. ಎಬಿಪಿ ನ್ಯೂಸ್ಗೆ ಹತ್ತಿರವಿರುವ ಮೂಲಗಳ ಪ್ರಕಾರ, ಈ ಅಪಘಾತದಲ್ಲಿ ಇಬ್ಬರೂ ಪೈಲಟ್ಗಳು ಪ್ರಾಣ ಕಳೆದುಕೊಂಡಿದ್ದಾರೆ. “ಬೇಟೂದಲ್ಲಿನ ಭೀಮ್ಡಾ ಗ್ರಾಮದ ಬಳಿ ಅಪಘಾತಕ್ಕೀಡಾದ ಐಎಎಫ್ ವಿಮಾನ ಇದು” ಎಂದು ಬಾರ್ಮರ್ ಜಿಲ್ಲಾ ಕಲೆಕ್ಟರ್ ಲೋಕ್ ಬಂಡು ಪಿಟಿಐಗೆ ತಿಳಿಸಿದ್ದಾರೆ. ರಷ್ಯಾ ವಿನ್ಯಾಸಗೊಳಿಸಿದ ಜೆಟ್, ಮಿಗ್ -21 ಎಲ್ಲಾ ಐಎಎಫ್ ಯುದ್ಧ ವಿಮಾನಗಳಲ್ಲಿ ಹೆಚ್ಚು ಅಪಘಾತಕ್ಕೀಡಾಗಿದೆ ಎಂದಿದೆ. ಈ ಸುದ್ದಿಯೊಂದಿಗೆ ನೀಡಲಾದ ಫೋಟೊ ವೈರಲ್ ವೀಡಿಯೋದ ಕೀಫ್ರೇಮ್ ಜೊತೆಗೆ ಹೋಲಿಕೆಯಾಗುತ್ತಿರುವುದು ಕಂಡುಬಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ತನಿಖೆಯ ಭಾಗವಾಗಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಮಾಧ್ಯಮಗಳ ವರದಿಯಲ್ಲಿ ಕಂಡುಬಂದ ವೀಡಿಯೋ, ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದು ಗೊತ್ತಾಗಿದೆ.
ಡಿಎನ್ಎ ಇಂಡಿಯಾ ನ್ಯೂಸ್ ಯೂಟ್ಯೂಬ್ ಚಾನೆಲ್ ಜುಲೈ 29, 2022ರಂದು ಪ್ರಕಟಿಸಿದ ವೀಡಿಯೋದಲ್ಲಿ, ಗುರುವಾರ ರಾತ್ರಿ ರಾಜಸ್ಥಾನದ ಬಾರ್ಮರ್ ಬಳಿ ತರಬೇತಿ ಹಾರಾಟದ ಸಮಯದಲ್ಲಿ ಭಾರತೀಯ ವಾಯುಪಡೆಯ (IAF) ಎರಡು ಆಸನಗಳ MiG-21 ತರಬೇತಿ ವಿಮಾನ ಅಪಘಾತಕ್ಕೀಡಾಗಿ ಎರಡು ಪೈಲಟ್ಗಳು ಸಾವನ್ನಪ್ಪಿದರು. ಉತರ್ಲೈ ವಾಯುನೆಲೆಯಿಂದ ಹಾರಾಟ ನಡೆಸುತ್ತಿದ್ದಾಗ ವಿಮಾನವು ರಾತ್ರಿ 9:10 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಇಬ್ಬರೂ ಪೈಲಟ್ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಾಯುಪಡೆ ತಿಳಿಸಿದೆ… ಎಂದಿದೆ.
ದಿ ಕ್ವಿಂಟ್ ಯೂಟ್ಯೂಬ್ ವೀಡಿಯೋ ಜುಲೈ 28, 2022ರಂದು ಪ್ರಕಟಿಸಿದ ವೀಡಿಯೋದಲ್ಲಿ ಜುಲೈ 28, ಗುರುವಾರ ರಾಜಸ್ಥಾನದ ಬಾರ್ಮರ್ ಬಳಿ ಭಾರತೀಯ ವಾಯುಪಡೆಯ (ಐಎಎಫ್) ಮಿಗ್ -21 ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳು ಪ್ರಾಣ ಕಳೆದುಕೊಂಡರು ಎಂದು ಐಎಎಫ್ ತಿಳಿಸಿದೆ ಎಂದಿದೆ.
ಎಎನ್ಎಐ ಕೂಡ ಎಕ್ಸ್ ಪೋಸ್ಟ್ ನಲ್ಲಿ ಇದೇ ವೀಡಿಯೋವನ್ನು ಜುಲೈ 28, 2022ರಂದು ಹಂಚಿಕೊಂಡಿದೆ.
ಆದ್ದರಿಂದ ಈ ಘಟನೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಈಗಿನ ವೈಮನಸ್ಯಕ್ಕೆ ಸಂಬಂಧಿಸಿದ್ದಲ್ಲ ಎಂದು ಗೊತ್ತಾಗಿದೆ. ಭಾರತದ ಮಿಗ್ 21 ವಿಮಾನ ಪತನದ ದೃಶ್ಯಾವಳಿಗಳೊಂದಿಗೆ ತಪ್ಪಾದ ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಫೆರಾರಿ ಕಾರಿನ ಮೇಲೆ ಹಾರಿದ ಗೂಳಿ, ವೈರಲ್ ವೀಡಿಯೋ ಎಐ ಸೃಷ್ಟಿ!
Our Sources
Report by ABP Live, Dated July 28, 2022
YouTube Video by DNA, Dated July 29, 2022
Report by The Quint, Dated July 28, 2022
Twitter post by ANI, Dated July 28, 2022
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025