Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಉತ್ತರ ಪ್ರದೇಶದಲ್ಲಿ ನಗದು ತುಂಬಿದ್ದ ಲಾರಿ ಪಲ್ಟಿಯಾಗಿ ನೋಟುಗಳನ್ನು ಜನರು ಲೂಟಿ ಮಾಡಿದ್ದಾರೆ
ಉತ್ತರ ಪ್ರದೇಶದಲ್ಲಿ ನಗದು ತುಂಬಿದ್ದ ಲಾರಿ ಪಲ್ಟಿಯಾಗಿ ನೋಟುಗಳನ್ನು ಜನರು ಲೂಟಿ ಮಾಡಿದ್ದಾರೆ ಎನ್ನುವುದು ನಿಜವಲ್ಲ, ಇದು ಎಐ ನಿಂದ ಮಾಡಿದ ವೀಡಿಯೋ ಆಗಿದೆ
ಉತ್ತರ ಪ್ರದೇಶದಲ್ಲಿ ನಗದು ತುಂಬಿದ್ದ ಲಾರಿ ಪಲ್ಟಿಯಾಗಿ, ಅದರಲ್ಲಿದ್ದ ನೋಟುಗಳನ್ನು ಜನರು ಲೂಟಿ ಮಾಡಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಮೆಸೇಜ್ ನಲ್ಲಿ “ಉತ್ತರ ಪ್ರದೇಶದ ಹೆದ್ದಾರಿಯಲ್ಲಿ ನಗದು ತುಂಬಿದ ಟ್ರಕ್ ಪಲ್ಟಿಯಾದ ನಂತರ, ನೋಟುಗಳು ರಸ್ತೆಗೆ ಹಾರಲು ಪ್ರಾರಂಭಿಸಿದವು. ಕ್ಷಣಾರ್ಧದಲ್ಲಿ, ಸುಮಾರು 500 ಜನರು ಸ್ಥಳದಲ್ಲಿ ಜಮಾಯಿಸಿ ನೋಟುಗಳನ್ನು ಲೂಟಿ ಮಾಡಿದರು.” ಎಂದಿದೆ.

ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಎಐ ವೀಡಿಯೋ ಎಂದು ಕಂಡುಹಿಡಿದಿದೆ.
Also Read: ಪಶ್ಚಿಮ ಬಂಗಾಳದಲ್ಲಿ SIR ಜಾರಿ; ಓಡಿ ಹೋದ ಬಾಂಗ್ಲಾದೇಶೀಯರು?
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಗಮನಿಸಿದ್ದೇವೆ. ಈ ವೇಳೆ ವೀಡಿಯೋ ಅಸಹಜ ರೀತಿಯಲ್ಲಿರುವುದು ಕಂಡುಬಂದಿದೆ. ಈ ವೀಡಿಯೋ ತೋರಿಸುವ ಅಪಘಾತ ದೃಶ್ಯ ಸ್ಪಷ್ಟವಾಗಿಲ್ಲ, ವೀಡಿಯೋದಲ್ಲಿ ಕಂಡುಬರುವ ರಿಕ್ಷಾ, ದ್ವಿಚಕ್ರವಾಹನ ನೈಜತೆಗೆ ವಿರುದ್ಧವಾಗಿದೆ. ಜನರೂ ಕೆಲವೊಮ್ಮೆ ಅದೃಶ್ಯವಾದಂತೆ ಕಾಣಿಸುತ್ತದೆ ಎಂಬುದನ್ನು ಗಮನಿಸಿದ್ದೇವೆ. ಆದ್ದರಿಂದ ಇದು ಎಐ ಸೃಷ್ಟಿ ಇರಬಹುದು ಎಂಬ ಸಂಶವನ್ನು ಇನ್ನಷ್ಟು ದಟ್ಟವಾಗಿಸಿದೆ.


ವೈರಲ್ ವೀಡಿಯೋವನ್ನು ನಾವು ಎಐ ಪತ್ತೆ ಪರಿಕರಗಳ ಮೂಲಕವೂ ನೋಡಿದ್ದೇವೆ. ವಾಸ್ ಇಟ್ ಎಐ ಈ ವೀಡಿಯೋದ ಕೀಫ್ರೇಂ ಅನ್ನು ಪರಿಶೀಲಿಸಿ ಇದು ಎಐ ನಿಂ ಮಾಡಿರುವ ಸಾಧ್ಯತೆಯನ್ನುಹೇಳಿದೆ.

ಇನ್ನೊಂದು ಎಐ ಪತ್ತೆ ಪರಿಕರ ಸೈಟ್ ಎಂಜಿನ್ ಮೂಲಕವೂ ವೀಡಿಯೋ ಕೀಫ್ರೇಂ ಪರಿಶೀಲಿಸಿದ್ದೇವೆ. ಈ ವೇಳೆ ಅದು 99% ಎಐನಿಂದ ಮಾಡಿದ್ದಾಗಿದೆ ಎಂದು ಹೇಳಿದೆ.

ಈ ವೀಡಿಯೋ ಕುರಿತು ತನಿಖೆಗಾಗಿ ನಾವು ನ್ಯೂಸ್ ಚೆಕರ್ ಭಾಗವಾಗಿರುವ ಡೀಪ್ ಫೇಕ್ ಅನಾಲಿಸಿಸ್ ಯುನಿಟ್ (ಡಿಎಯು) ಸಂಪರ್ಕಿಸಿದ್ದು, ವೀಡಿಯೋ ನಿಜವಲ್ಲ ಎಂದು ಹೇಳಿದೆ. ಡಿಎಯು ಪ್ರಕಾರ “ವೀಡಿಯೋವನ್ನು ಹತ್ತಿರದಿಂದ ನೋಡಿದಾಗ, ನೀವು ಕೆಲವು ದೃಶ್ಯದಲ್ಲಿ ಅಭಾಸಗಳನ್ನು ನೋಡಬಹುದು; ದೃಶ್ಯಗಳು ಅತ್ಯಂತ ಕಳಪೆಯಾಗಿದ್ದರೂ, ರಸ್ತೆಯಿಂದ ವಸ್ತುಗಳನ್ನು ಎತ್ತಿಕೊಳ್ಳುತ್ತಿರುವ ಜನರ ವಿರೂಪಗೊಂಡ ಅಂಗಗಳು ವಿರೂಪಗೊಳ್ಳುತ್ತಿವೆ. ಇದಲ್ಲದೆ, ನೆಲದ ಮೇಲೆ ಕಂಡುಬರುವ ನೋಟುಗಳಲ್ಲಿ ಚಿಹ್ನೆಗಳೂ ಕಾಣಿಸುತ್ತಿಲ್ಲ. ಕ್ಯಾಮೆರಾ ತಲೆಕೆಳಗಾದ ವಾಹನವನ್ನು ತೋರಿಸಿದಾಗ, ಹಿನ್ನೆಲೆಯಲ್ಲಿ ಒಂದು ಆಟೋರಿಕ್ಷಾ ಕಾಣಬಹುದು, ಅದು ನಿಜವಾದ ವಾಹನದಂತೆ ಇಲ್ಲ.” ಎಂದಿದೆ.
ಹೆಚ್ಚಿನ ಶೋಧಕ್ಕಾಗಿ ಡಿಎಯು Whisperer ಎಐ ಪತ್ತೆ ಸಾಧನದ ಮೂಲಕ ವೈರಲ್ ವೀಡಿಯೋವನ್ನು ಪರಿಶೀಲಿಸಿದ್ದು, ಇದು ತಿರುಚಿದ ವೀಡಿಯೋ ಎಂಬುದನ್ನು ಹೇಳಿದೆ.

ಇದರೊಂದಿಗೆ ನಾವು ವೀಡಿಯೋದ ಕೀಫ್ರೇಂಗಳನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಾಡಿದಾಗ, ಯೂಟ್ಯೂಬ್ ನಲ್ಲಿ Arshad Arsh Edits ಎಂಬ ಬಳಕೆದಾರರು ಪೋಸ್ಟ್ ಮಾಡಿದ ವೀಡಿಯೋ ಒಂದು ಲಭ್ಯವಾಗಿದ್ದು, ಇದರ ವಿವರಣೆಯಲ್ಲಿ ಎಐ ಮೂಲಕ ಮಾಡಿದ ವೀಡಿಯೋ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋವನ್ನು ನವೆಂಬರ್ 21, 2025ರಂದು ಪೋಸ್ಟ್ ಮಾಡಲಾಗಿದೆ.
ಆದ್ದರಿಂದ ಶೋಧನೆಯ ಪ್ರಕಾರ, ಈ ವಿಡಿಯೋ ಎಐ ನಿಂದ ಮಾಡಿದ್ದು ಎಂಬುದನ್ನು ಖಚಿತ ಪಡಿಸಲಾಗಿದೆ.
Also Read: ಬಿಹಾರ ಚುನಾವಣೆ ಸೋಲಿನ ಬಳಿಕ ದೇಗುಲ ಭೇಟಿಯಲ್ಲಿ ರಾಹುಲ್ ಗಾಂಧಿ?
Our Sources
Was it AI
Sightengine
Analysis by DAU
YouTube Video by Arshad Arsh Edits, Dated: November 21, 2025
(ಈ ವರದಿಯನ್ನು ನವೆಂಬರ್ 24, 2025ರಂದು ಡಿಎಯು ಪ್ರತಿಕ್ರಿಯೆ ಸೇರ್ಪಡೆಯೊಂದಿಗೆ ಪರಿಷ್ಕರಿಸಲಾಗಿದೆ)
Vasudha Beri
November 10, 2025
Vijayalakshmi Balasubramaniyan
November 12, 2025
Ishwarachandra B G
November 6, 2025