Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ತಮಿಳುನಾಡಿನ ರಾಮೇಶ್ವರಂ ದೇವಾಲಯದ ಬಳಿ ಅಗ್ನಿ ಅವಘಡ: ಸಾವಿರಾರು ಮಂದಿ ಸಾವು
ಈ ಹೇಳಿಕೆ ಸುಳ್ಳು. ವೈರಲ್ ವೀಡಿಯೊ ಎಐ ನಿಂದ ಮಾಡಿದ್ದಾಗಿದೆ
ತಮಿಳುನಾಡಿನ ರಾಮೇಶ್ವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಈ ಕುರಿತ ವೀಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಇದರಲ್ಲಿ ಅನೇಕ ಮನೆಗಳು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಜನರು ಬೆಂಕಿಯ ಕೆನ್ನಾಲಗೆಯ ಹೆದರಿಕೆಯಿಂದ ಓಡಿಹೋಗುವುದನ್ನು ಸಹ ಕಾಣಬಹುದು. ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ ನೀರನ್ನು ಸಿಂಪಡಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.
ಫೆಬ್ರವರಿ 17, 2025 ರಂದು ತಮಿಳುನಾಡಿನ ರಾಮೇಶ್ವರಂ ದೇವಾಲಯದ ಬಳಿ ಈ ದಾರುಣ ಘಟನೆ ನಡೆದಿದ್ದು, ಇದರಲ್ಲಿ 4500 ಕ್ಕೂ ಹೆಚ್ಚು ಮನೆಗಳು ಸುಟ್ಟು ಬೂದಿಯಾಗಿವೆ ಮತ್ತು 9300 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
Also Read: ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋ ವೈರಲ್
ವೈರಲ್ ಹೇಳಿಕೆಯನ್ನು ತನಿಖೆ ಮಾಡಲು, ನಾವು Rameswaram temple fire”, “Tragic fire incident in Tamil Nadu” ಮತ್ತು “Tamil Nadu Rameswaram temple” ಎಂಬ ಕೀವರ್ಡ್ ಗಳೊಂದಿಗೆ ಗೂಗಲ್ ಸರ್ಚ್ ಮಾಡಿದ್ದೇವೆ. ಆದರೆ ರಾಮೇಶ್ವರಂ ದೇವಾಲಯದ ಬಳಿ ಬೆಂಕಿ ಅಥವಾ ಅಂತಹ ಯಾವುದೇ ಘಟನೆಯ ಬಗ್ಗೆ ನಮಗೆ ಯಾವುದೇ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ರಾಮೇಶ್ವರ ದೇಗುಲದ ಸನಿಹದಲ್ಲಿ ಅಂತಹ ಭಯಾನಕ ಘಟನೆ ನಡೆದಿದ್ದೇ ಆದಲ್ಲಿ ಅದು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು.
ವೈರಲ್ ವೀಡಿಯೋವನ್ನು ಎಚ್ಚರಿಕೆಯಿಂದ ವೀಕ್ಷಿಸಿದ ಬಳಿಕ ಅದನ್ನು ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೂಲಕ ತಯಾರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ನಾವು ವೀಡಿಯೋವನ್ನು ಪರಿಶೀಲಿಸಲು ಡೀಪ್ ಫೇಕ್ ಅನಾಲಿಸಿಸ್ ಯುನಿಟ್ (ಡಿಎಯು) ಗೆ ಕಳುಹಿಸಿದ್ದೇವೆ. ಓಪನ್ ಟೂಲ್ wasitai.com ಸಹಾಯದಿಂದ ಡಿಎಯು ಈ ವೀಡಿಯೋದ ಕೆಲವು ಫ್ರೇಮ್ ಗಳನ್ನು ಪರಿಶೀಲಿಸಿದೆ.
ಕೆಳಗಿನ ವೈರಲ್ ವೀಡಿಯೊದ ಕೆಲವು ಕೀಫ್ರೇಮ್ ಗಳ ಫಲಿತಾಂಶಗಳನ್ನು ನೋಡಿ
ನಮ್ಮ ತನಿಖೆಯ ಪ್ರಕಾರ, ತಮಿಳುನಾಡಿನ ರಾಮೇಶ್ವರದಲ್ಲಿ ಬೆಂಕಿ ಅನಾಹುತ ಎಂದು ಹಂಚಿಕೊಳ್ಳಲಾದ ಈ ವೀಡಿಯೋ ಎಐ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
Our Sources
Analysis by AI detection Tool wasitai.com
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
April 11, 2025
Ishwarachandra B G
March 15, 2025
Ishwarachandra B G
March 11, 2025