Authors
ಅದಾನಿ ಬಂದರಿನಲ್ಲಿ ಅರಬ್ ರಾಷ್ಟ್ರಗಳಿಗೆ ಸಾಗಾಟಕ್ಕೆ ಟ್ರಕ್ ಗಳಲ್ಲಿ ಹಸು, ರಾಜಸ್ಥಾನದಲ್ಲಿ ಬಿಸಿಲಿನಲ್ಲೂ ಕರ್ತವ್ಯದಲ್ಲಿರುವ ಮಹಿಳಾ ಸೈನಿಕರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆ, ಅಮೇಥಿಯಿಂದ ಪ್ರಿಯಾಂಕಾ, ರಾಯ್ ಬರೇಲಿಯಿಂದ ರಾಹುಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ ಎಂಬ ವಿಚಾರದ ಕುರಿತ ಕ್ಲೇಮುಗಳು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹರಿದಾಡಿದ್ದವು. ಉಳಿದಂತೆ, ಕಲ್ಲಿಕೋಟೆಯ ಪೇರಂಬ್ರದಲ್ಲಿ ವೃದ್ಧರೊಬ್ಬರನ್ನು ಮಗನೇ ಥಳಿಸುತ್ತಿರುವ ವೀಡಿಯೋ, ಕಾಳುಮೆಣಸು-ನುಗ್ಗೆಸೊಪ್ಪಿನ ಪೇಸ್ಟ್ ಹಣೆಗೆ ಹಚ್ಚುವುರಿಂದ ಸೈನಸೈಟಿಸ್ ತಲೆನೋವು ಗುಣವಾಗುತ್ತದೆ ಎಂಬ ಹೇಳಿಕೆಗಳೂ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ಮಾಡಿದ್ದು ವಾಸ್ತವಾಂಶಗಳನ್ನು ತೆರೆದಿಟ್ಟಿದೆ. ವೈರಲ್ ಹೇಳಿಕೆಗಳು ಸುಳ್ಳು ಎಂದು ಸಾಬೀತು ಪಡಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆಯೇ?
ಪತ್ನಿ ಮತದಾನ ಮಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜೊತೆಗೇ ಇದ್ದು ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ನ್ಯೂಸ್‌ಚೆಕರ್ ಇದರ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಣಿಸಿಕೊಂಡ ವಿದ್ಯಮಾನ 2019ರದ್ದಾಗಿದೆ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್ ಗಳಲ್ಲಿ ಹಸುಗಳನ್ನು ಅರಬ್ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?
ಗುಜರಾತ್ ನ ಅದಾನಿ ಬಂದರಿನಲ್ಲಿ ಸಾವಿರಾರು ಟ್ರಕ್ ಗಳಲ್ಲಿ ಹಸುಗಳನ್ನು ತುಂಬಿ ವಧೆಗಾಗಿ ಅರಬ್ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ತನಿಖೆ ವೇಳೆ, ಅದಾನಿ ಬಂದರಿನಲ್ಲಿ ಟ್ರಕ್ ಗಳಲ್ಲಿ ಹಸುಗಳನ್ನು ಅರಬ್ ದೇಶಕ್ಕೆ ಕಳಿಸಲಾಗುತ್ತಿದೆ ಎಂದ ವೈರಲ್ ವೀಡಿಯೋ ಭಾರತದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕಲ್ಲಿಕೋಟೆಯ ಪೇರಂಬ್ರದಲ್ಲಿ ವೃದ್ಧರೊಬ್ಬರನ್ನು ಮಗನೇ ಥಳಿಸುತ್ತಿರುವ ವೀಡಿಯೋ, ಸತ್ಯ ಏನು?
ಕಲ್ಲಿಕೋಟೆಯ ಪೇರಂಬ್ರದಲ್ಲಿ ವೃದ್ಧರೊಬ್ಬರನ್ನು ಮಗನೇ ಥಳಿಸುತ್ತಿರುವ ವೀಡಿಯೋ ಎಂದು ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸಾಕ್ಷ್ಯಗಳ ಪ್ರಕಾರ, ವೃದ್ಧನನ್ನು ಮಗ ಥಳಿಸುತ್ತಿರುವ ವಿಡಿಯೋ ಕಲ್ಲಿಕೋಟೆಯ ಪೇರಂಬ್ರದ್ದಲ್ಲ ತಮಿಳುನಾಡಿನ ಪೆರಂಬಲೂರು ಜಿಲ್ಲೆಯದ್ದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಭಾರತ ಗಡಿಯಲ್ಲಿ ಬಿಸಿಲಿನಲ್ಲೂ ಕರ್ತವ್ಯದಲ್ಲಿರುವ ಮಹಿಳಾ ಸೈನಿಕರು ಊಟ ಮಾಡುತ್ತಿರುವ ದೃಶ್ಯ ಎಂದು ಎಐ ಚಿತ್ರ ಹಂಚಿಕೆ
ಭಾರತ-ಪಾಕಿಸ್ಥಾನದ ಗಡಿಯಲ್ಲಿ ಬಿರು ಬಿಸಿಲಿನಲ್ಲೂ ಕರ್ತವ್ಯದಲ್ಲಿರುವ ಮಹಿಳಾ ಸೈನಿಕರು ಊಟ ಮಾಡುತ್ತಿರುವ ದೃಶ್ಯ ಎಂಬಂತೆ ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಬಿಸಿಲಿನಲ್ಲೂ ಮಹಿಳಾ ಸೈನಿಕರು ಊಟ ಮಾಡುತ್ತಿರುವ ದೃಶ್ಯ ಎಂದು ಹಂಚಿಕೊಳ್ಳಲಾಗಿರುವ ಚಿತ್ರವು ಎಐ ಮೂಲಕ ರಚಿಸಿದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಅಮೇಥಿಯಿಂದ ಪ್ರಿಯಾಂಕಾ, ರಾಯ್ ಬರೇಲಿಯಿಂದ ರಾಹುಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆಯೇ?
ಉತ್ತರ ಪ್ರದೇಶದ ಅಮೇಥಿಯಿಂದ ಪ್ರಿಯಾಂಕಾ ಗಾಂಧಿ ಮತ್ತು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಅವರ ಉಮೇದುವಾರಿಕೆಯನ್ನು ಘೋಷಿಸಲಾಗಿದೆ ಎಂಬಂತೆ ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಅಮೇಥಿಯಿಂದ ಪ್ರಿಯಾಂಕಾ, ರಾಯ್ ಬರೇಲಿಯಿಂದ ರಾಹುಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ ಎನ್ನುವುದು ಸುಳ್ಳು, ವೈರಲ್ ಪತ್ರವು ನಕಲಿಯಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕಾಳುಮೆಣಸು-ನುಗ್ಗೆಸೊಪ್ಪಿನ ಪೇಸ್ಟ್ ಹಣೆಗೆ ಹಚ್ಚುವುರಿಂದ ಸೈನಸೈಟಿಸ್ ತಲೆನೋವು ಗುಣವಾಗುತ್ತಾ?
ಕಾಳುಮೆಣಸು-ನುಗ್ಗೆಸೊಪ್ಪಿನ ಪೇಸ್ಟ್ ಹಣೆಗೆ ಹಚ್ಚುವುರಿಂದ ಸೈನಸೈಟಿಸ್ ತಲೆನೋವು ಗುಣವಾಗುತ್ತದೆ ಎಂದು ಹೇಳಿಕೆಯೊಂದು ಹರಿದಾಡಿದೆ. ಆದರೆ ಶೋಧನೆಯಲ್ಲಿ ಕಂಡುಬಂದಂತೆ ಕಾಳುಮೆಣಸು-ನುಗ್ಗೆಸೊಪ್ಪಿನ ಪೇಸ್ಟ್ ಹಣೆಗೆ ಹಚ್ಚುವುರಿಂದ ಸೈನಸೈಟಿಸ್ ತಲೆನೋವು ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ತೀವ್ರತರವಾದ ಸೈನಸೈಟಿಸ್‌ಗೆ ಇದು ಪರಿಹಾರವಲ್ಲ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.