Authors
Claim
ರೈತ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತರಿಗೆ ಮದ್ಯ ನೀಡಲಾಗುತ್ತಿದೆ ಎಂದು ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಆಡೋಕೆ ಬಂದು ಹಸಿವು ಬಾಯಾರಿಕೆಯಿಂದ ಕಂಗೆಟ್ಟಿರುವ ಕ್ರಾಂತಿಕಾರಿ ರೈತರ ಗುಂಪು” ಎಂದಿದೆ.
Also Read: ರೈತ ಹೋರಾಟದಲ್ಲಿ ಮುಸ್ಲಿಮರೂ ಸಿಖ್ ಪೇಟ ಕಟ್ಟಿ ಪಾಲ್ಗೊಂಡಿದ್ದಾರೆಯೇ?
ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್ (+91-9999499044) ಗೆ ವಿನಂತಿಸಿಕೊಂಡಿದ್ದು, ತನಿಖೆಗಾಗಿ ಅಂಗೀಕರಿಸಲಾಗಿದೆ.
Fact
ರೈತರ ಪ್ರತಿಭಟನೆಯ ಸಮಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಮದ್ಯ ವಿತರಣೆಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆಯನ್ನು ನ್ಯೂಸ್ ಚೆಕರ್ 2021 ರ ಫೆಬ್ರವರಿ 8 ರಂದು ತನಿಖೆ ನಡೆಸಿದೆ. ನಮ್ಮ ತನಿಖೆಯ ಪ್ರಕಾರ, ವೈರಲ್ ವೀಡಿಯೋ ಏಪ್ರಿಲ್ 2020 ರಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಮತ್ತು ನಡೆಯುತ್ತಿರುವ ರೈತರ ಪ್ರತಿಭಟನೆಯೊಂದಿಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ.
ಹೆಚ್ಚುವರಿಯಾಗಿ, ಯಾಂಡೆಕ್ಸ್ನಲ್ಲಿ ವೈರಲ್ ವೀಡಿಯೋದ ಕೀಫ್ರೇಮ್ ಆಧಾರದಲ್ಲಿ ಹುಡುಕಿದಾಗ, ಏಪ್ರಿಲ್ 2020 ರಿಂದ ಹಂಚಿಕೊಳ್ಳಲಾದ ಇತರ ಕೆಲವು ಪೋಸ್ಟ್ಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಕೆಲವು ಪೋಸ್ಟ್ ಗಳು ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ತಿಳಿಸಲಾಗಿದೆ.
Also Read: ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?
ಹೀಗಾಗಿ, ನಮ್ಮ ತನಿಖೆಯ ಪ್ರಕಾರ ಪ್ರತಿಭಟನೆಯ ಸಮಯದಲ್ಲಿ ರೈತರಿಗೆ ಮದ್ಯ ವಿತರಿಸಲಾಗುತ್ತಿದೆ ಎನ್ನುವ ಹೇಳಿಕೆ ತಪ್ಪು ದಾರಿಗೆಳೆಯುವಂಥಾದ್ದಾಗಿದೆ. ವಾಸ್ತವವಾಗಿ, ವೈರಲ್ ವೀಡಿಯೋ ಏಪ್ರಿಲ್ 2020 ರಿಂದ ಇಂಟರ್ನೆಟ್ನಲ್ಲಿದೆ.
Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?
Result: False
Our Sources
Social media posts from April 2020
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.