Authors
Claim
ರೈತ ಪ್ರತಿಭಟನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ, ದೆಹಲಿ ಚಲೋಗೆ ಸಾಗುತ್ತಿರುವ ರೈತರ ನಿಜಬಣ್ಣ ಇದು ಎಂಬರ್ಥದಲ್ಲಿ ಎಂದು ಹೇಳಿ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗುತ್ತಿದೆ.
ಫೇಸ್‌ಬುಕ್‌ನಲ್ಲಿ ಈ ಕುರಿತು ಕಂಡುಬಂದ ಹೇಳಿಕೆಯಲ್ಲಿ “ದೆಹಲಿ ರೈತ ಪ್ರತಿಭಟನೆಯಲ್ಲಿ ಸಿಕ್ಕ ಸಾರಾಯಿ ಬಾಟಲಿಗಳು!” ಎನ್ನುವುದರೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
Also Read: ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?
ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಈಗಿನ ರೈತರ ಪ್ರತಿಭಟನೆಯದ್ದಲ್ಲ ಹಿಂದಿನದ್ದು ಎಂದು ತಿಳಿದುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜನವರಿ 26, 2021ರಂದು ಎಕ್ಸ್ ಬಳಕೆದಾರರಾದ ಪ್ರೀತಿ ಗಾಂಧಿ ಎಂಬವರು ಮಾಡಿದ ಟ್ವೀಟ್ ಅನ್ನು ಗಮನಿಸಿದ್ದೇವೆ. ಈ ಟ್ವೀಟ್ ನಲ್ಲಿ “ಪೊಲೀಸರು ಟ್ರಾಕ್ಟರ್ ನಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡರು, ಕುಡಿದ ಪ್ರತಿಭಟನಕಾರರು ಅಪಾಯಕಾರಿಯಾಗಿ ಕತ್ತಿಗಳನ್ನು ಬೀಸುತ್ತಾ ತಮ್ಮ ಟ್ರಾಕ್ಟರ್ ಗಳನ್ನು ಅಪಾಯಕಾರಿಯಾಗಿ ಚಲಾಯಿಸಿಕೊಂಡು ಹೋಗಿದ್ದಾರೆ” ಎಂದಿದೆ. ಈ ಎಕ್ಸ್ ಪೋಸ್ಟ್ ನಲ್ಲಿ ಹಾಕಲಾದ ವೀಡಿಯೋ ಮತ್ತು ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ಕಂಡುಕೊಂಡಿದ್ದೇವೆ.
ವೈರಲ್ ವೀಡಿಯೋದಲ್ಲಿ ಟಿವಿ 9 ವರದಿಗಾರರೊಬ್ಬರು ವಿವರಣೆಯನ್ನು ನೀಡುವುದನ್ನು ನಾವು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಕೀವರ್ಡ್ ಸರ್ಚ್ ನಡೆಸಿದ್ದು, ಘಟನೆ ಬಗ್ಗೆ ಟಿವಿ9 ಗುಜರಾತಿ ಎಕ್ಸ್ ಪೋಸ್ಟ್ ಕಂಡುಕೊಂಡಿದ್ದೇವೆ.
ಜನವರಿ 26, 2021ರ ಪೋಸ್ಟ್ ನಲ್ಲಿ ಟಿವಿ9 ಗುಜರಾತಿ ಪ್ರಕಾರ “ಪೊಲೀಸರು ಟ್ರಾಕ್ಟರ್ ಗಳಿಂದ ಮದ್ಯವನ್ನು ವಶಪಡಿಸಿಕೊಂಡರು ಮತ್ತು ದಿಲ್ಲಿಗೆ ಹೋಗುವ ರಾಲಿಯನ್ನು ತಡೆಯಲು ರಸ್ತೆಯಲ್ಲಿ ಕುಳಿತುಕೊಂಡರು” ಎಂದಿದೆ.
ಈ ಪೋಸ್ಟ್ ಅನ್ನು ಗಮನಿಸಿದ ವೇಳೆ ಇದೂ ವೈರಲ್ ವೀಡಿಯೋ ಜೊತೆಗೆ ಸಾಮ್ಯತೆ ಇರುವುದನ್ನು ಗಮನಿಸಿದ್ದೇವೆ. ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಈ ವೀಡಿಯೋ 2021ರ ರೈತ ಪ್ರತಿಭಟನೆಯ ಸಂದರ್ಭದ್ದಾಗಿದೆ. ಈಗಿನ ರೈತ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.
Also Read: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?
Result: Missing Context
Our Sources:
Tweet By Priti Gandhi, Dated: January 26, 2021
Tweet By Tv9 Gujarati, Dated: January 26, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.