Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂ ಧರ್ಮದ ಮೇಲಿನ ಗೌರವಕ್ಕೆ ಅಮೆರಿಕದ ಹೊಸ ಕಾರಿಗೆ ‘ರಾಮ್’ ಹೆಸರಿಡಲಾಗಿದೆ ಎಂಬಂತೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಹೇಳಿಕೆಯಲ್ಲಿ “ಅಮೆರಿಕಾದಲ್ಲಿ ಹೊಸದಾಗಿ ಲಾಂಚ್ ಆಗಿರುವ ಕಾರಿನ ಹೆಸರು “ರಾಮ್” ಇಡೀ ವಿಶ್ವವೇ ಸನಾತನ ಧರ್ಮವನ್ನು ಗೌರವಿಸುವ ಕಾಲ ಬಂದಿದೆ ಜೈ ಶ್ರೀರಾಮ್” ಎಂದಿದೆ.

Also Read: ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ವೀಡಿಯೋ ನಿಜವೇ?
ಈ ಹೇಳಿಕೆ ಕುರಿತ ಸತ್ಯಶೋಧನೆಗೆ ನ್ಯೂಸ್‌ಚೆಕರ್ ಮುಂದಾಗಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಹೇಳಿಕೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ನಾವು ಗೂಗಲ್ನಲ್ಲಿ ‘ರಾಮ್ ಕಾರ್’ ಎಂಬ ಕೀವರ್ಡ್ ನೊಂದಿಗೆ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು ಅಮೆರಿಕದ ರಾಮ್ ಟ್ರಕ್ಸ್ ಎಂಬ ವಾಹನ ತಯಾರಿಕೆ ಕಂಪೆನಿಯ ಹೆಸರು ಎಂದು ಗೊತ್ತಾಗಿದೆ.
Google ಹುಡುಕಾಟದ ನಂತರ, ರಾಮ್ ಕಂಪನಿಯ ಸಂಪೂರ್ಣ ಇತಿಹಾಸ ಮತ್ತು ಅದರ ಹೆಸರನ್ನು successstory.com,
autoevolution.com, cummins.com, miraclechryslerdodgejeep.com, jeffbelzersdodgeram.com ಮುಂತಾದ ಅನೇಕ ವೆಬ್ಸೈಟ್ ಗಳಲ್ಲಿ ನಾವು ಗಮನಿಸಿದ್ದೇವೆ. ಕಂಡುಬಂದಿರುವ ಎಲ್ಲ ಲೇಖನಗಳಲ್ಲಿ, ಉತ್ಪನ್ನವನ್ನು ಕಂಪೆನಿ 1981 ರಿಂದ ರಾಮ್ ಹೆಸರಿನಲ್ಲಿ ತಯಾರಿಸುತ್ತಿದೆ ಎಂದು ತಿಳಿಸಲಾಗಿದೆ. ರಾಮ್ ಎಂಬ ಪದದ ಅರ್ಥ ಗಂಡು ಕುರಿ ಎಂದು ತಿಳಿಯಲಾಗಿದೆ. ಈ ಮಾಹಿತಿಗೆ ಪೂರಕವಾಗಿ ಕಂಪೆನಿಯ ಲೋಗೋದಲ್ಲಿ ಕುರಿಯ ಮುಖವಿದೆ. ಇದರೊಂದಿಗೆ ಕಂಪನಿಯ ಬಗ್ಗೆ ಯಾವುದೇ ಲೇಖನದಲ್ಲಿ, ಕಂಪನಿಯ ಹೆಸರು ಹಿಂದೂ ಧರ್ಮ ಅಥವಾ ರಾಮನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದೂ ತಿಳಿದುಬಂದಿದೆ. ಇದಲ್ಲದೆ, ನಾವು ಕಂಪನಿಯ ಬಗ್ಗೆ ಶೋಧನೆ ನಡೆಸಿದಾಗ, ರಾಮ್ stellantis ಮಾಲಕತ್ವದ ಕಂಪೆನಿ ಎಂದು ತಿಳಿದುಬಂದಿದೆ. ಆ ಮೂಲಕ ನಾವು ರಾಮ್ ಟ್ರಕ್ಸ್‌ನ ಕಾರ್ಪೊರೆಟ್ ಪುಟದ ಪರಿಶೀಲನೆ ನಡೆಸಿದ್ದು, ಇದರಲ್ಲಿ ಕುರಿಯ ಲೋಗೋ ಇದೆ.

ಆದರೆ ಕಂಪೆನಿಯ ಹೆಸರಿನ ಹಿಂದೆ ಹಿಂದೂ ಧರ್ಮ ಅಥವಾ ರಾಮನ ಮೇಲಿನ ನಂಬಿಕೆಯನ್ನು ದೃಢೀಕರಿಸುವ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಹೀಗಾಗಿ, ಹಿಂದೂ ಭಗವಾನ್ ರಾಮನ ಮೇಲಿನ ನಂಬಿಕೆಯಿಂದಾಗಿ, ಸನಾತನ ಧರ್ಮವನ್ನು ಗೌರವಿಸುವ ಭಾಗವಾಗಿ ಅಮೆರಿಕದ ವಾಹನ ಕಂಪೆನಿ ತನ್ನನ್ನು ರಾಮ್ ಎಂದು ಹೆಸರಿಸಿಕೊಂಡಿದೆ ಎನ್ನುವ ಹೇಳಿಕೆ ದಾರಿತಪ್ಪಿಸುವಂಥದ್ದು ಎಂದು ತಿಳಿದುಬಂದಿದೆ. ವಾಸ್ತವದಲ್ಲಿ ಕಂಪೆನಿಯನ್ನು “ಕುರಿ”ಯ ಹೆಸರಿನಿಂದ ಗುರುತಿಸಲಾಗಿದೆ.
Also Read: ಆಗಸ್ಟ್ 10ರಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್ ಹೈಕೋರ್ಟ್ ತೀರ್ಪು, ಎನ್ನುವುದು ನಿಜವೇ?
Our Sources
Articles published by successstory.com, autoevolution.com, cummins.com,
miraclechryslerdodgejeep.com, jeffbelzersdodgeram.com
Website of stellantis
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 8, 2025
Ishwarachandra B G
November 7, 2025
Ishwarachandra B G
October 29, 2025