Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಮೆರಿಕದ ಮುಸ್ಲಿಮರು ಹಿಂದೂಗಳೊಂದಿಗೆ ವ್ಯಾಪಾರ ನಡೆಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಸಂದೇಶದಲ್ಲಿ, “ಅಮೆರಿಕದ ಮುಸ್ಲಿಮರು ಮುಷ್ಕರ ನಡೆಸುತ್ತಿದ್ದಾರೆ…. ತರಕಾರಿ ಬೆಲೆ ಜಾಸ್ತಿಯಾಯ್ತು ಅಂತ ಅಲ್ಲ….. ಹಿಂದೂಗಳ ಅಂಗಡಿಯಿಂದ ಖರೀದಿಸಲೇಬಾರದು…. ಇಲ್ಲಿ ವ್ಯಾಪಾರ ಮಾಡುವ ಗುಜರಾತಿಗಳು ಆ ಹಣವನ್ನು RSS ನವರಿಗೆ ಕೊಡುತ್ತಾರೆ…. ಆದ್ದರಿಂದ ಹಿಂದೂಗಳೊಂದಿಗೆ ವ್ಯಾಪಾರ ವಹಿವಾಟು ಮಾಡಬೇಡಿ ಎಂದು ತಮ್ಮ ಸಮುದಾಯದವರನ್ನು ಜಾಗೃತಿ ಮೂಡಿಸಲು ಮುಷ್ಕರ ಮಾಡುತ್ತಿದ್ದಾರೆ!….” ಎಂದಿದೆ.

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಈ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದಾಗಿದ್ದು, ಈ ಪ್ರತಿಭಟನೆ ಉದ್ದೇಶ ಬೇರೆಯದ್ದಾಗಿತ್ತು ಎಂದು ಗೊತ್ತಾಗಿದೆ.
Also Read: ವಿಶ್ವದ ಅತ್ಯಂತ ಭ್ರಷ್ಟ 10 ಪಕ್ಷಗಳಲ್ಲಿ ಕಾಂಗ್ರೆಸ್ಗೆ ಪ್ರಥಮ ಸ್ಥಾನ ಎಂದ ಬಿಬಿಸಿ, ಇದು ನಿಜವೇ?
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಮುಸ್ಲಿಂ ಮಿರರ್ ಎಕ್ಸ್ ನಲ್ಲಿ ಜೂನ್ 19, 2022ರಂದು ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಈ ಪೋಸ್ಟ್ ನಲ್ಲಿ “ಪ್ರವಾದಿ ಮೊಹಮ್ಮದ್ ಅವರ ವಿರುದ್ಧದ ಹೇಳಿಕೆಗಾಗಿ ಚಿಕಾಗೋದಲ್ಲಿರುವ ಭಾರತೀಯ ದೂತವಾಸದ ಹೊರಗೆ ಪ್ರತಿಭಟನೆ ನಡೆಸಲಾಯಿತು” ಎಂದಿದೆ.
ಇದೇ ಪೋಸ್ಟ್ ನಲ್ಲಿ ನೀಡಲಾಗಿರುವ ಮುಸ್ಲಿಂ ಮಿರರ್ ವೆಬ್ಸೈಟ್ ಅನ್ನು ನಾವು ನೋಡಿದ್ದೇವೆ. ಜೂ.19, 2022ರ ಈ ಪೋಸ್ಟ್ ನಲ್ಲಿ, “ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಮಾನಕರ ಹೇಳಿಕೆಗಳನ್ನು ಖಂಡಿಸಿ ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ದೂತಾವಾಸದ ಹೊರಗೆ ಮುಸ್ಲಿಂ ಗುಂಪುಗಳು ಪ್ರತಿಭಟನೆ ನಡೆಸಿದವು. ಭಾರತದಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೆರೆಹೊರೆಗಳಲ್ಲಿ ವಾಸಿಸುವ ಹಲವಾರು ಮುಸ್ಲಿಮೇತರರು ಸೇರಿಕೊಂಡರು. ಭಾರತದಲ್ಲಿ ಮುಸ್ಲಿಂ ಸಮುದಾಯ ದೌರ್ಜನ್ಯಕ್ಕೊಳಗಾಗುತ್ತಿರುವುದಕ್ಕೆ ಅವರು ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.” ಎಂದಿದೆ.

ವೈರಲ್ ದೃಶ್ಯ ಮತ್ತು ಮುಸ್ಲಿಂ ಮಿರರ್ ನಲ್ಲಿ ನೀಡಲಾದ ಫೋಟೋ ಬಗ್ಗೆ ಪರಿಶೀಲನೆ ನಡೆಸಿದಾಗ, ಕೆಲವೊಂದು ಸಾಮ್ಯತೆಗಳಿರುವುದು ಕಂಡುಬಂದಿದೆ. ಅದನ್ನು ಇಲ್ಲಿ ಗಮನಿಸಬಹುದು.


ಈ ವಿಚಾರದ ಬಗ್ಗೆ ನಾವು ಇನ್ನಷ್ಟು ಹುಡುಕಾಟ ನಡೆಸಿದಾಗ, ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ಬಗ್ಗೆ ನೀಡಿದ್ದ ಹೇಳಿಕೆಯ ವಿರುದ್ಧ ಈ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಅಮೆರಿಕದ ಮುಸ್ಲಿಮರು ಹಿಂದೂಗಳೊಂದಿಗೆ ವ್ಯಾಪಾರ ನಡೆಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ ಎನ್ನುವ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದಾಗಿದ್ದು, ಈ ಪ್ರತಿಭಟನೆ ನೂಪುರ್ ಶರ್ಮಾ ಅವರ ಹೇಳಿಕೆ ವಿರುದ್ಧವಾಗಿ ಶಿಕಾಗೋದಲ್ಲಿ ನಡೆದಿತ್ತು ಎಂದು ಗೊತ್ತಾಗಿದೆ.
Also Read: ಸೇಡಂನಲ್ಲಿ ಆರೆಸ್ಸೆಸ್ ಪಥ ಸಂಚಲನ ಎಂದು ನಾಗ್ಪುರದ ವೀಡಿಯೋ ಹಂಚಿಕೆ
Our Sources
X post by Muslim mirror, Dated: June 19, 2022
Report by Muslim mirror, Dated: June 19, 2022
Tanujit Das
November 17, 2025
Ishwarachandra B G
November 8, 2025
Ishwarachandra B G
November 7, 2025