Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕರ್ನಾಟಕದಲ್ಲಿ ವಾಹನದ ಚಕ್ರ ಹೋಗುವಲ್ಲಿ ಮಾತ್ರವೇ ಡಾಮರು ಹಾಕಲಾಗಿದೆ
Fact
ವಾಹನದ ಚಕ್ರ ಹೋಗುವಲ್ಲಿ ಮಾತ್ರವೇ ಟಾರು ಹಾಕಿದ ವಿದ್ಯಮಾನ ಕರ್ನಾಟಕದಲ್ಲ. ಇದು ಬಲ್ಗೇರಿಯಾದ ಚಿತ್ರ
ಗ್ಯಾರೆಂಟಿ ಸ್ಕೀಂಗಳಿಂದ ರಾಜ್ಯ ಸರ್ಕಾರದ ಬಳಿ ಹಣ ಇಲ್ಲವಾಗಿದ್ದು, ವಾಹನದ ಚಕ್ರಗಳು ಹೋಗುವ ಜಾಗಕ್ಕೆ ಮಾತ್ರವೇ ಡಾಮರು ಹಾಕಲಾಗಿದೆ ಎಂದು ಹೇಳುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಕ್ಲೇಮ್ ಪ್ರಕಾರ, “ಭಾಗ್ಯಗಳಿಂದ ಖಜಾನೆ ಖಾಲಿ ಆಗುತ್ತಿದೆ, ಆದರೂ ನಾವು ಅಭಿವೃದ್ದಿ ನಿಲ್ಲಿಸಲ್ಲ.. ದುಂದುವೆಚ್ಚ ಕಮ್ಮಿ ಮಾಡಿ ವಾಹನದ ಚಕ್ರಗಳಿಗೆ ಹಾನಿ ಆಗದಂತೆ ಡಾಂಬರ್ ಹಾಕಿಸಿದ್ದೀವಿ… ನಾವು ಜನರ ಪರ…”ಇಂತೀ ನಿಮ್ಮ ನಿದ್ದೆರಾಮಯ್ಯ” ಎಂದು ಹೇಳಲಾಗಿದೆ.
Also Read: ಬುರ್ಖಾ ಧರಿಸದವರನ್ನು ಬಸ್ ಹತ್ತದಂತೆ ಕೇರಳದಲ್ಲಿ ತಡೆಯಲಾಗಿದೆಯೇ?
ಇಂತಹುದೆ ಕ್ಲೇಮುಗಳನ್ನು ನಾವು ವಿವಿಧೆಡೆ ಕಂಡುಕೊಂಡಿದ್ದು, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯಶೋಧನೆ ನಡೆಸಿದ ವೇಳೆ ಇಂತಹ ಯಾವುದೇ ರಸ್ತೆ ಕರ್ನಾಟಕದಲ್ಲಿ ಮಾಡಿಲ್ಲ ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಬಲ್ಗೇರಿಯಾದ ಮಾಧ್ಯಮ ವೆಬ್ಸೈಟ್ blitz.bg ನಲ್ಲಿ ಈ ಫೋಟೊ ಕಂಡುಬಂದಿದೆ. ಇದರ ಪ್ರಕಾರ, ಬಲ್ಗೇರಿಯಾದ ಡ್ರಾಗಲ್ವೆಸ್ಟಿ ಎಂಬಲ್ಲಿ ಈ ರೀತಿ ವಾಹನದ ಟಯರ್ ಹೋಗುವಲ್ಲಿ ಮಾತ್ರವೇ ಟಾರು ಹಾಕಲಾಗಿದೆ.
Also Read:ಇಸ್ರೇಲ್ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?
ಇದರೊಂದಿಗೆ ಇತರ ಮಾಧ್ಯಮಗಳಲ್ಲೂ ಇದೇ ರಸ್ತೆಯ ಬಗ್ಗೆ ವರದಿಗಳು ಕಂಡುಬಂದಿದೆ. ಇವುಗಳಲ್ಲಿ ಈ ರಸ್ತೆ ಬಲ್ಗೇರಿಯಾದ್ದು ಎಂದಿದೆ. ಅವುಗಳನ್ನು ನಾವು ಇಲ್ಲಿ, ಇಲ್ಲಿ ನೋಡಿದ್ದೇವೆ.
ಈ ಕುರಿತು ಇನ್ನೂ ಹೆಚ್ಚಿನ ಶೋಧ ನಡೆಸಿದಾಗ ಫೇಸ್‌ಬುಕ್‌ನಲ್ಲಿ За София ಎಂಬ ಐಡಿಯಿಂದ ರಸ್ತೆಯ ಬಗ್ಗೆ ಪೋಸ್ಟ್ ಕಂಡಿದೆ. ಇದರಲ್ಲಿ ರಸ್ತೆಯ ಇನ್ನಷ್ಟು ಫೋಟೋಗಳಿದ್ದು ವಿವಿಧ ಕೋನಗಳಿಂದ ತೆಗೆಯಲಾಗಿದೆ.
ಈ ಸತ್ಯಶೋಧನೆಯ ಪ್ರಕಾರ, ಕರ್ನಾಟಕದಲ್ಲಿ ವಾಹನ ಚಕ್ರ ಹೋಗುವಷ್ಟು ಜಾಗಕ್ಕೆ ಮಾತ್ರವೇ ಡಾಮರು ಹಾಕಲಾಗಿದೆ ಎನ್ನುವುದು ತಪ್ಪಾಗಿದೆ ಎಂದು ತಿಳಿದುಬಂದಿದೆ.
Also Read: ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?
Our Sources
Facebook Post by zasofiafoundation Dated: October 17, 2023
News Report by blitz.bg Dated: October 14, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Kushel Madhusoodan
May 31, 2025
Sabloo Thomas
January 27, 2025
Sabloo Thomas
October 10, 2024