ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?

ಗುಜರಾತ್‌ ಗಲಭೆ, ಸಾಕ್ಷ್ಯಚಿತ್ರ, ಮೋದಿ, ಬಿಬಿಸಿ, ಪ್ರತಿಭಟನೆ

ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಅದರ ಕಚೇರಿ ಎದುರು ಲಂಡನ್‌ನಲ್ಲಿ ತೀವ್ರ ಪ್ರತಿಭಟನೆ ನಡೆದಿದೆ ಎಂದು ವಿವಿಧ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಈ ಕುರಿತ ಕ್ಲೇಮ್‌ ಒಂದು ಹೀಗಿದೆ “ಬಿಬಿಸಿ ಮಾಡಿರುವ ಅನಾಚಾರದ ವಿರುದ್ಧ ಬ್ರಿಟಿಷ್‌ ಪ್ರಜೆಗಳು ರೊಚ್ಚಿಗೆದ್ದಿದ್ದಾರೆ. ಈಗ ಕಾಂಗ್ರೆಸ್‌ ನಾಯಕ “ಪಪ್ಪು” ಗಾಂಧಿ ರವರ ಇತ್ತೀಚಿನ ಇಂಗ್ಲೆಂಡ್‌ ಪ್ರವಾಸದ ಬಗ್ಗೆ ಸಂಶಯ ಮೂಡುತ್ತಿದೆ. ಶೇಮ್‌!” ಎಂದು ಬರೆಯಲಾಗಿದೆ.

ಗುಜರಾತ್‌ ಗಲಭೆ, ಸಾಕ್ಷ್ಯಚಿತ್ರ, ಬಿಬಿಸಿ, ಮೋದಿ, ಪ್ರತಿಭಟನೆ

ಇದೇ ರೀತಿಯ ಕ್ಲೇಮ್‌ಗಳು ಬೇರೆ ಬೇರೆ ಭಾಷೆಗಳಲ್ಲಿ ಇರುವದನ್ನೂ ನಾವು ಕಂಡಿದ್ದೇವೆ. ಈ ವೈರಲ್ ವೀಡಿಯೋದಲ್ಲಿ ಜನರು ಶೇಮ್‌ ಶೇಮ್‌ ಎಂದು ಕೂಗುತ್ತಿರುವುದು ಕೇಳಿಸುತ್ತದೆ.

ಈ ಹಿನ್ನೆಲೆಯಲ್ಲಿ ನಾವು ಇದನ್ನು ಸತ್ಯ ಪರಿಶೀಲನೆಗೆ ಒಳಪಡಿಸಿದ್ದು, ಇದೊಂದು ತಪ್ಪಾದ ಸಂದರ್ಭ ಎಂದು ಕಂಡು ಬಂದಿದೆ.

Fact check/ Verification

ವೈರಲ್‌ ವೀಡಿಯೋದ ಸತ್ಯ ಪರಿಶೀಲನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್‌ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ  Yournews.com ಮಾಡಿದ ವರದಿ ಲಭ್ಯವಾಗಿದೆ. ಇದರಲ್ಲಿ “Epic Anti-Covid Vaxx Protest! Massive Crowd Descends On BBC Headquarters In London” ಶೀರ್ಷಿಕೆಯಲ್ಲಿ ಬರೆದ ವರದಿಯಿದ್ದು, ಅದರಲ್ಲಿ ವೈರಲ್ ವೀಡಿಯೋ ಕೂಡ ಇದೆ.

ಯುವರ್‌ನ್ಯೂಸ್‌ನ ಸ್ಕ್ರೀನ್‌ಗ್ರ್ಯಾಬ್‌

ಈ ವರದಿಯಲ್ಲಿ ಹೇಳಿದ ಪ್ರಕಾರ, “ವಾರಾಂತ್ಯದಲ್ಲಿ ಲಂಡನ್‌ನಲ್ಲಿ ಸಾವಿರಾರು ಪ್ರತಿಭಟನಗಾರರು, ಪ್ರತಿಭಟನೆ ನಡೆಸಿ “ಸತ್ಯವನ್ನು ಹೇಳಬೇಕು” ಎಂದು ಆಗ್ರಹಿಸಿದರು. ಪ್ರಾಯೋಗಿಕ ಕೋವಿಡ್‌ ಚುಚ್ಚುಮದ್ದು ಪರೀಕ್ಷೆಯಿಂದಾಗಿ ಸಾವಿರಾರು ಜನರು ಗಾಯಗೊಂಡು ಮತ್ತು ಸಾವನ್ನಪ್ಪಿದ್ದರ ಬಗ್ಗೆ ಹೊಣೆಗಾರಿಕೆ ಮತ್ತು ಮಾಧ್ಯಮ ಪ್ರಸಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು” ಎಂದು ಹೇಳಲಾಗಿದೆ.

ಇದರೊಂದಿಗೆ ಪರಿಶೀಲನೆ ವೇಳೆ ಇದೇ ವೀಡಿಯೋ eraoflight.com ಎಂಬ ವೆಬ್‌ಸೈಟ್‌ನಲ್ಲೂ ಕಂಡುಬಂದಿದ್ದು, “ಪ್ರಾಯೋಗಿಕ ಕೋವಿಡ್‌ ಚುಚ್ಚುಮದ್ದು ಪರೀಕ್ಷೆಯಿಂದಾಗಿ ಸಾವಿರಾರು ಜನರು ಗಾಯಗೊಂಡು ಮತ್ತು ಸಾವನ್ನಪ್ಪಿದ್ದರ ಬಗ್ಗೆ ಹೊಣೆಗಾರಿಕೆ ಮತ್ತು ಮಾಧ್ಯಮ ಪ್ರಸಾರಕ್ಕೆ ಒತ್ತಾಯಿಸಿ ವಾರಾಂತ್ಯದಲ್ಲಿ ಲಂಡನ್ ನಲ್ಲಿ ನಡೆದ ಟ್ರುತ್‌ ಬಿ ಟೋಲ್ಡ್‌ ಪ್ರತಿಭಟನೆಯಲ್ಲಿ ಸಾವಿರಾರು ಪ್ರತಿಭಟನಕಾರರು ಜಮಾಯಿಸಿ ಪ್ರತಿಭಟನೆ ನಡೆಸಿದರು”ಎಂದು ಇದರಲ್ಲಿ ಹೇಳಲಾಗಿದೆ.

Also Read: ಅಯೋಧ್ಯೆಯಲ್ಲಿ ಕೋತಿ ನಿತ್ಯವೂ ರಾಮನಿಗೆ ನಮಸ್ಕರಿಸುವುದು ಸತ್ಯವೇ?

ಯುಎಸ್ಎಸ್‌ಎ ವೆಬೈಸೈಟ್‌ನಲ್ಲಿಇದು ಪ್ರಾಯೋಗಿಕ ಕೋವಿಡ್‌ ಚುಚ್ಚುಮದ್ದಿನಿಂದಾಗಿ ಆದ ಸಾವುಗಳು ಮತ್ತು ಗಾಯಗಳ ಬಗ್ಗೆ ಮಾಧ್ಯಮ ಪ್ರಸಾರ ಮಾಡದ್ದಕ್ಕಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಯುಎಸ್‌ಎಸ್‌ಎ ನ್ಯೂಸ್‌ ವರದಿಯ ಸ್ಕ್ರೀನ್‌ಗ್ರ್ಯಾಬ್‌

Conclusion

ಈ ಸತ್ಯ ಪರಿಶೀಲನೆಯಲ್ಲಿ ಕಂಡುಬಂದ ರೀತಿ ಈ ಪ್ರತಿಭಟನೆ ನಡೆದಿರುವುದು ಲಂಡನ್‌ನ ಬಿಬಿಸಿ ಮುಖ್ಯಕಚೇರಿಯ ಎದುರು ಹೌದು. ಮತ್ತು ಕೋವಿಡ್‌ ಕುರಿತ ಪ್ರಸಾರದ ವಿಚಾರದಲ್ಲಿ ನಡೆದ ಪ್ರತಿಭಟನೆಯಾಗಿದೆ. ಆದರೆ ಪೋಸ್ಟ್‌ನಲ್ಲಿ ಹೇಳಿದಂತೆ ಅದು ಪ್ರಧಾನಿ ಮೋದಿ ಕುರಿತ ಸಾಕ್ಷ್ಯ ಚಿತ್ರದ ವಿರುದ್ಧ ಅಲ್ಲ. ಆದ್ದರಿಂದ ಈ ಕ್ಲೇಮ್ ತಪ್ಪಾದ ಸಂದರ್ಭವಾಗಿದೆ.  

Our Sources
Report by eraoflight.com, Dated: January 25, 2023
Report by USSA News, Dated: January 25, 2023
Report by Yournews.com, Dated: January 24, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.