Fact Check: ಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರ ಆಗುತ್ತಾ?

ಆಹಾರ, ಶುಂಠಿ ಸೇವನೆ, ಕೀಲು ನೋವು, ನಿವಾರಣೆ

Claim
ಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರ

Fact
ಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಯಾವೆಲ್ಲ ರೀತಿಯ ಕೀಲು ಸಮಸ್ಯೆ, ಎಲುಬಿನ ಸಮಸ್ಯೆ ದೂರವಾಗುತ್ತವೆ ಎನ್ನುವುದಕ್ಕೂ ಪುರಾವೆಗಳಿಲ್ಲ

ಆಹಾರದಲ್ಲಿ ಶುಂಠಿ ಸೇವಿಸುವುದರಿಂದ ಕೀಲು ನೋವು ಬರುವುದಿಲ್ಲ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮ್‌ ಹೀಗಿದೆ, “ನಿಮಗೆ ಗೊತ್ತೇ? ಆಹಾರ ಕ್ರಮದಲ್ಲಿ ಶುಂಠಿ ಸೇವಿಸುವುದರಿಂದ ಕೀಲು ನೋವು, ಸ್ನಾಯು ನೋವು ಬರುವುದಿಲ್ಲ.” ಎಂದು ಹೇಳಿದೆ.

ಆಹಾರದಲ್ಲಿ ಶುಂಠಿ ಸೇವನೆ,  ಕೀಲು ನೋವು ದೂರ

ಈ ಕ್ಲೇಮಿನ ಸತ್ಯಶೋಧನೆಯನ್ನು ಮಾಡಿದ್ದು, ಅದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

Fact Check/ Verification

ಶೀತ, ಕಫ ಇತ್ಯಾದಿಗಳಿಗೆ ಶುಂಠಿಯನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದು ಕೀಲನೋವಿಗೂ ಬಳಕೆಯಾಗುತ್ತದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದನ್ನು ಸತ್ಯಶೋಧನೆಗೆ ಒಳಪಡಿಸಿದಾಗ, ಆಹಾರದಲ್ಲಿ ಶುಂಠಿ ಸೇವಿಸುವುದರಿಂದ ಕೀಲು ನೋವು, ಸ್ನಾಯುನೋವು ಬರುವುದಿಲ್ಲ ಎನ್ನುವುದು ಸರಿಯಾದ್ದಲ್ಲ ಎನ್ನುವುದು ತಿಳಿದುಬಂದಿದೆ.

ಸದ್ಯ ಲಭ್ಯವಿರುವ ಸಂಶೋಧನಾ ಲೇಖನಗಳು ಹೇಳುವ ಪ್ರಕಾರ, ಶುಂಠಿ ಕೀಲು ನೋವನ್ನು ತಡೆಯಬಹುದು. ಆದರೆ, ಎಲ್ಲ ರೀತಿಯ ಆರೋಗ್ಯ ಪರಿಸ್ಥಿತಿಯಲ್ಲಿಯೂ ಶುಂಠಿಯಿಂದ ಕೀಲುನೋವು ಕಡಿಮೆಯಾಗುತ್ತದೆ ಎಂಬುದನ್ನು ಸಮರ್ಥಿಸುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳ ಆಧಾರವಿಲ್ಲ.

Also Read: ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದೇ, ಇದರಲ್ಲಿ ಸತ್ಯಾಂಶ ಇದೆಯೇ?

ಅಡಲ್ಟ್ ಸ್ಟಿಲ್ ಕಾಯಿಲೆ, ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್, ಅವಾಸ್ಕುಲರ್ ನೆಕ್ರೋಸಿಸ್, ಎಲುಬಿನ ಕ್ಯಾನ್ಸರ್, ಮುರಿದ ಎಲುಬು, ಬರ್ಸಿಟಿಸ್, ಕಾಂಪ್ಲೆಕ್ಸ್ ರೀಜನಲ್‌ ಪೈನ್‌ ಸಿಂಡ್ರೋಮ್‌, ಫೈಬ್ರೊಮ್ಯಾಲ್ಗಿಯಾ, ಗೊನೊಕೊಕಲ್ ಸಂಧಿವಾತ, ಗೌಟ್, ಹೈಪೋಥೈರಾಯ್ಡಿಸಮ್, ಜುವೆನೈಲ್ ಇಡಿಯೋಪಥಿಕ್ ಆರ್ಥ್ರೈಟಿಸ್, ಲುಪ್ಯುಕ್ಯಾಥಿಕ್ ಆರ್ಥ್ರೈಟಿಸ್, ಲುಪ್ಯುಕ್ಯಾಥಿಕ್ ಆರ್ಥ್ರೈಟಿಸ್, ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್‌ನಿಂದ ಉಂಟಾಗುವ ನೋವನ್ನು ಶುಂಠಿ ಗುಣಪಡಿಸುತ್ತದೆ ಎಂದು ಯಾವುದೇ ಪುರಾವೆಗಳಿಲ್ಲ.

ಲೈಮ್ ಕಾಯಿಲೆ, ಅಸ್ಥಿಸಂಧಿವಾತ, ಆಸ್ಟಿಯೋಮೈಲಿಟಿಸ್, ಮೂಳೆಯ ಪ್ಯಾಗೆಟ್ಸ್ ಕಾಯಿಲೆ, ಪಾಲಿಮ್ಯಾಲ್ಜಿಯಾ ರುಮಾಟಿಕಾ, ಸ್ಯೂಡೋಗೌಟ್, ಸೋರಿಯಾಟಿಕ್ ಸಂಧಿವಾತ, ಪ್ರತಿಕ್ರಿಯಾತ್ಮಕ ಸಂಧಿವಾತ, ಸಂಧಿವಾತ, ರಿಕೆಟ್ಸ್, ಸಾರ್ಕೊಯಿಡೋಸಿಸ್, ಸೆಪ್ಟಿಕ್ ಸಂಧಿವಾತ, ಉಳುಕು ಇತ್ಯಾದಿ ಕಾಯಿಲೆಗಳಿಗೆ ಶುಂಠಿ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇದಲ್ಲದೆ ದೀರ್ಘಾವಧಿ ಚಿಕಿತ್ಸೆಗೆ ಉಪಯುಕ್ತವಾದ ಶುಂಠಿಯ ಡೋಸೇಜ್‌ ಬಗ್ಗೆಯೂ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಶುಂಠಿಯನ್ನು ಹೆಚ್ಚು ತಿನ್ನುವುದರಿಂದ ಜಠರದ ಉರಿ, ಹೊಟ್ಟೆ ನೋವು, ಅತಿಸಾರ, ಬಾಯಿ ಕಿರಿಕಿರಿ ಮತ್ತು ಎದೆಯುರಿ ಉಂಟಾಗುತ್ತದೆ ಎಂದು ಕೆಲವು ಪುರಾವೆಗಳು ಹೇಳುತ್ತವೆ.

Conclusion

ಆದ್ದರಿಂದ ಆಹಾರದಲ್ಲಿ ಶುಂಠಿ ಸೇವಿಸುವುದರಿಂದ ಕೀಲು ನೋವು ಬರುವುದಿಲ್ಲ ಎಂದು ಹೇಳುವ ಕ್ಲೇಮ್‌ ಒಂದು ತಪ್ಪಾದ ಸಂದರ್ಭವಾಗಿದೆ.

Result: Missing Context


(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.