Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂಗಳ ವಿರುದ್ಧ ಕೀಳಾಗಿ ಮಾತನಾಡಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ಮೇಲೆ ದಿನಗಳ ಹಿಂದೆ ಥಳಿತ
ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಥಳಿಸಿದ ಪ್ರಕರಣ 2011ರದ್ದಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ಮಾತನಾಡಿದ್ದ ವಿರುದ್ಧ ವ್ಯಕ್ತಿಗಳು ಥಳಿಸಿದ್ದಾಗಿ ಭೂಷಣ್ ಹೇಳಿಕೊಂಡಿದ್ದರು
ಹಿಂದೂಗಳ ವಿರುದ್ಧ ಕೀಳಾಗಿ ಮಾತನಾಡಿದ್ದಕ್ಕಾಗಿ ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಥಳಿಸಲಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಬೆನ್ನಲ್ಲೇ ವೈರಲ್ ವೀಡಿಯೋ ಹಂಚಿಕೆಯಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಕೆಲ ದೀನಗಳ ಮುಂಚೆ ಹಿಂದುಗಳನ್ನು ಕೀಳಾಗಿ ಮಾತಾಡಿದ ಪ್ರತಾಪ್ ಭೂಷಣ್ ಎಂಬ ಸುಪ್ರೀಂ ಕೋರ್ಟ್ ಲಾಯರ್ ಅವರ ಕೊಠಡಿಯಲ್ಲಿ ಥಳಿಸಿದ ದೃಶ್ಯ.” ಎಂದಿದೆ.

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ದಾರಿತಪ್ಪಿಸುವ ಹೇಳಿಕೆಯಾಗಿದ್ದು, ಘಟನೆ 2011ರ ಸಮಯದ್ದು ಎಂದು ಗೊತ್ತಾಗಿದೆ.
Also Read: ಅತ್ಯಾಚಾರಿಗಳಿಗೆ ನೇರವಾಗಿ ಮರಣದಂಡನೆ ಶಿಕ್ಷೆ ಎನ್ನುವುದು ನಿಜವೇ?
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅಕ್ಟೋಬರ್ 12, 2011ರಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಅವರ ಕಚೇರಿಯಲ್ಲಿ ಕಿಡಿಗೇಡಿಗಳು ಥಳಿಸಿದ ಘಟನೆಯಾಗಿದೆ ಎಂದು ಗೊತ್ತಾಗಿದೆ.
ಅಕ್ಟೋಬರ್ 12, 2025ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಮತ್ತು ಅಣ್ಣಾ ತಂಡದ ಪ್ರಮುಖ ಸದಸ್ಯ ಪ್ರಶಾಂತ್ ಭೂಷಣ್ ಅವರನ್ನು ಬುಧವಾರ ಮಧ್ಯಾಹ್ನ ಅವರ ಕೊಠಡಿಯಲ್ಲಿ ಕಾಶ್ಮೀರದ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಥಳಿಸಲಾಗಿದೆ. ಟೈಮ್ಸ್ ನೌ ಸುದ್ದಿ ವಾಹಿನಿಗೆ ಪ್ರಶಾಂತ್ ಭೂಷಣ್ ಮಾತನಾಡುತ್ತಿದ್ದಾಗ, ಇಬ್ಬರು ದಾಳಿಕೋರರು ಸುಪ್ರೀಂ ಕೋರ್ಟ್ ಎದುರಿನ ನ್ಯೂ ಲಾಯರ್ಸ್ ಚೇಂಬರ್ನಲ್ಲಿರುವ ಅವರ ಕಚೇರಿಗೆ ನುಗ್ಗಿದರು. ದಾಳಿಕೋರರಲ್ಲಿ ಒಬ್ಬರು ಭೂಷಣ್ ಅವರನ್ನು ಪದೇ ಪದೇ ಕಪಾಳಮೋಕ್ಷ ಮಾಡಿ, ಎಳೆದು, ಹೊಡೆದರು. ದಾಳಿಕೋರರು ಪ್ರಶಾಂತ್ ಭೂಷಣ್ ಅವರ ಕಚೇರಿಗೆ ಪ್ರವೇಶಿಸಿ, ಅವರೊಂದಿಗೆ ಅಪಾಯಿಂಟ್ಮೆಂಟ್ ಇದೆ ಎಂದು ಹೇಳಿಕೊಂಡರು. ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅವರ ನಿಲುವಿಗಾಗಿ ಜನರು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಭೂಷಣ್ ಹೇಳಿದರು.
“ನಾನು ಕಾಶ್ಮೀರದ ಬಗ್ಗೆ ಕೆಲವು ಕಾಮೆಂಟ್ಗಳನ್ನು ಮಾಡಿದ್ದೇನೆ ಮತ್ತು ಅದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದರು. ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಬೇಕೆಂದು ನಾನು ಹೇಳಿದ್ದೇನೆ” ಎಂದು ಅವರು ಹೇಳಿದರು. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದಿದೆ.

ಅಕ್ಟೋಬರ್ 12, 2011ರ ಎನ್ಡಿಟಿವಿ ವರದಿಯಲ್ಲಿ, ಟೀಮ್ ಅಣ್ಣಾ ತಂಡದ ಪ್ರಮುಖ ಸದಸ್ಯ ಪ್ರಶಾಂತ್ ಭೂಷಣ್ ಅವರ ಮೇಲೆ ಇಂದು ಸುಪ್ರೀಂ ಕೋರ್ಟ್ನಲ್ಲಿರುವ ಅವರ ಕೊಠಡಿಯಲ್ಲಿ ಹಲ್ಲೆ ನಡೆಸಲಾಗಿದೆ. ಭೂಷಣ್ ಅವರು ಟಿವಿ ಸಂದರ್ಶನವೊಂದರಲ್ಲಿದ್ದಾಗ ಮೂವರು ಜನರು ಅವರ ಕೊಠಡಿಗೆ ನುಗ್ಗಿ ಅವರನ್ನು ಹೊಡೆಯಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಭೂಷಣ್ ಅವರಿಗೆ ಕಪಾಳಮೋಕ್ಷ ಮಾಡಿ ಒದೆಯಲಾಯಿತು. ಅವರು ನೆಲಕ್ಕೆ ಬಿದ್ದರು, ಅವರ ಕನ್ನಡಕ ಅವರ ಬಳಿ ಬಿದ್ದಿತ್ತು ಮತ್ತು ಇತರ ವಕೀಲರು ಸಹಾಯ ಮಾಡಲು ಧಾವಿಸುವ ಮೊದಲು ಅವರ ಶರ್ಟ್ ಹರಿದಿತ್ತು ಎಂದಿದೆ. ಎನ್ ಡಿಟಿವಿ ಪ್ರಕಟಿಸಿರುವ ವೀಡಿಯೋ, ವೈರಲ್ ವೀಡಿಯೋಕ್ಕೆ ಹೋಲಿಕೆಯಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ.

ಅಕ್ಟೋಬರ್ 12, 2011ರ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲೂ ಶ್ರೀರಾಮ ಸೇನೆಗೆ ಸೇರಿದವರು ಎನ್ನಲಾದ ಮೂವರು ಯುವಕರು ವಕೀಲ ಪ್ರಶಾಂತ್ ಭೂಷಣ್ ಅವರ ಕಚೇರಿಗೆ ನುಗ್ಗಿ ಹೊಡೆದ ಘಟನೆ ನಡೆದಿದೆ ಎಂದಿದೆ. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ ಎಂದು ವರದಿಯಲ್ಲಿದೆ. ಈ ವರದಿಯಲ್ಲೂ ವೈರಲ್ ವೀಡಿಯೋ ಕೀಫ್ರೇಂಗಳನ್ನು ಹೋಲುವ ಫೋಟೋಗಳನ್ನು ನಾವು ನೋಡಿದ್ದೇವೆ.

ಈ ಮಾಧ್ಯಮ ವರದಿಗಳು ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಹೇಳಿಕೆ ಆಕ್ಷೇಪಿಸಿ ಯುವಕರು ಹಲ್ಲೆ ನಡೆಸಿದ್ದಾಗಿ ಸ್ವತಃ ಪ್ರಶಾಂತ್ ಭೂಷಣ್ ಅವರೇ ಹೇಳಿದ್ದಾಗಿ ಹೇಳಿವೆ.
ಆದ್ದರಿಂದ ಹಿಂದೂಗಳ ವಿರುದ್ಧ ಕೀಳಾಗಿ ಮಾತನಾಡಿದ್ದಕ್ಕಾಗಿ ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಥಳಿಸಲಾಗಿದೆ ಎನ್ನವುದು ದಾರಿತಪ್ಪಿಸುವ ಹೇಳಿಕೆ ಮತ್ತು ಇದು ಹಿಂದೂಗಳ ವಿರುದ್ಧದ ಹೇಳಿಕೆಗಾಗಿ ನಡೆದ ಥಳಿತದ ಘಟನೆಯಲ್ಲ ಎಂದು ಗೊತ್ತಾಗಿದೆ.
Also Read: ಐ ಲವ್ ಮಹಾದೇವ್ ಅಭಿಯಾನದ ಮೂಲಕ ಯು.ಪಿ. ಪೊಲೀಸರಿಗೆ ಅಭಿನಂದನೆ ಸಲ್ಲಿಸಲಾಗಿದೆಯೇ?
Our Sources
Report by Times of India, Dated: October 12, 2011
Report by NDTV, Dated: October 12, 2011
Report by Hindustan Times, Dated: October 12, 2011
Ishwarachandra B G
November 27, 2025
Ishwarachandra B G
October 11, 2025
Ishwarachandra B G
September 9, 2025