Authors
Claim
ಹುರಿಗಡಲೆ ಮತ್ತು ಹಾಲಿನ ಮಿಶ್ರಣ 15 ದಿನ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಸಾಧ್ಯ
Fact
ಹುರಿಗಡಲೆ, ಹಾಲು, ಬಾಳೆಹಣ್ಣು, ಖರ್ಜೂರ ಮತ್ತು ಬೆಲ್ಲದ ಮಿಶ್ರಣವನ್ನು 15 ದಿನಗಳವರೆಗೆ ಪ್ರತಿದಿನ ಕುಡಿಯುವುದರಿಂದ ವೀರ್ಯಾಣುಗಳ ಸಂಖ್ಯೆ ನೂರು ಪಟ್ಟು ಹೆಚ್ಚಾಗುತ್ತದೆ ಎನ್ನುವುದು ತಪ್ಪಾದ ಹೇಳಿಕೆಯಾಗಿದೆ. ಈ ಪಾನೀಯ ಒಂದರಿಂದ ಕೆಲವೇ ದಿನಗಳಲ್ಲಿ ಉತ್ಪ್ರೇಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ
ಹುರಿಗಡಲೆ ಪುಡಿ, ಬಾಳೆಹಣ್ಣು, ಬೆಲ್ಲ, ಹಾಲಿನ ಮಿಶ್ರಣವನ್ನು 15 ದಿನ ಸೇವಿಸುವುದರಿಂದ ವೀರ್ಯಾಣು ಸಂಖ್ಯೆ ನೂರು ಪಟ್ಟು ಹೆಚ್ಚಿಸಬಹುದು ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗಿದೆ.
ಈ ಹೇಳಿಕೆಯ ಬಗ್ಗೆ ನಾವು ಪರಿಶೀಲನೆ ನಡೆಸಿದ್ದು ಹೇಳಿಕೆ ತಪ್ಪಾಗಿದೆ ಎಂದು ಕಂಡುಕೊಂಡಿದ್ದೇವೆ.
Fact Check/Verification
ಈ ಪದಾರ್ಥಗಳ ಸಂಯೋಜನೆಯು ಕಡಿಮೆ ಅವಧಿಯಲ್ಲಿ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಬಹುದು ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ವೀರ್ಯ ಉತ್ಪಾದನೆಯು ಒಂದು ಸಂಕೀರ್ಣ ಪ್ರಕ್ರಿಯೆ. ಹಾರ್ಮೋನುಗಳ ಸಮತೋಲನ, ಒಟ್ಟಾರೆ ಆರೋಗ್ಯ, ವಂಶವಾಹಿ ಮತ್ತು ಜೀವನಶೈಲಿಯಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಪಾನೀಯವು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನೈಸರ್ಗಿಕ ಸಕ್ಕರೆಗಳಂತಹ ಪೋಷಕಾಂಶಗಳನ್ನು ಹೊಂದಿದ್ದರೂ, ಇವುಗಳು ಮಾತ್ರ ವೀರ್ಯಾಣು ಸಂಖ್ಯೆಯಲ್ಲಿ ಅಂತಹ ವಿಪರೀತ ಹೆಚ್ಚಳವನ್ನು ಉಂಟುಮಾಡುವುದಿಲ್ಲ. ಯಾವುದೇ ಆಹಾರದ ಬದಲಾವಣೆ ಕ್ಷಿಪ್ರವಾಗಿ ಫಲಿತಾಂಶ ನೀಡುವುದು ಜೈವಿಕವಾಗಿ ಅಸಂಭವವಾಗಿದೆ.
Also Read: 15 ಫ್ರೆಂಚ್ ಫ್ರೈಸ್ 25 ಸಿಗರೇಟ್ ಗಳಿಗೆ ಸಮ ಎನ್ನುವುದು ನಿಜವೇ?
ಈ ಪದಾರ್ಥಗಳು ವೀರ್ಯದ ಆರೋಗ್ಯವನ್ನು ಸುಧಾರಿಸಬಹುದೇ?
ಹೌದು, ಆದರೆ ಸೀಮಿತ ಪ್ರಮಾಣದಲ್ಲಿ ಮಾತ್ರ. ಪಾನೀಯದಲ್ಲಿನ ಪದಾರ್ಥಗಳು ಪೌಷ್ಟಿಕವಾಗಿದ್ದು, ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ, ಇದು ಪರೋಕ್ಷವಾಗಿ ಸಂತಾನೋತ್ಪತ್ತಿಯ ಕುರಿತ ಆರೋಗ್ಯವನ್ನು ಬೆಂಬಲಿಸುತ್ತದೆ:
- ಹುರಿಗಡಲೆ: ಪ್ರೋಟೀನ್, ಕಬ್ಬಿಣ ಮತ್ತು ಸತುವುಗಳ ಉತ್ತಮ ಮೂಲವಾಗಿದೆ, ಇದು ಟೆಸ್ಟೋಸ್ಟೆರಾನ್ ಉತ್ಪಾದನೆ ಮತ್ತು ವೀರ್ಯದ ಆರೋಗ್ಯಕ್ಕೆ ಅವಶ್ಯಕವಾಗಿದೆ.
- ಹಾಲು: ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ, ಇವೆರಡೂ ಹಾರ್ಮೋನ್ ನಿಯಂತ್ರಣದಲ್ಲಿ ಪಾತ್ರವಹಿಸುತ್ತವೆ.
- ಬಾಳೆಹಣ್ಣು: ಬ್ರೋಮೆಲಿನ್, ಟೆಸ್ಟೋಸ್ಟೆರಾನ್ ಮಟ್ಟವನ್ನು ಬೆಂಬಲಿಸುವ ಕಿಣ್ವ, ಒಳಗೊಂಡಿದೆ. ಈ ಬಗ್ಗೆ ಪುರಾವೆಗಳು ಸೀಮಿತವಾಗಿದೆ.
- ಖರ್ಜೂರ ಮತ್ತು ಬೆಲ್ಲ: ನೈಸರ್ಗಿಕ ಸಕ್ಕರೆಗಳು ಮತ್ತು ಕಬ್ಬಿಣದಂತಹ ಕೆಲವು ಖನಿಜಗಳನ್ನು ಒದಗಿಸಿ, ಇದು ಸಾಮಾನ್ಯ ಶಕ್ತಿಯ ಮಟ್ಟವನ್ನು ಬೆಂಬಲಿಸುತ್ತದೆ.
ಆದಾಗ್ಯೂ, ಈ ಪೋಷಕಾಂಶಗಳು ಕಾಲಾನಂತರದಲ್ಲಿ ದೇಹಕ್ಕೆ ಪೂರಕವಾಗಬಹುದು. ಆದರೆ ಏಕಾಏಕಿ 15 ದಿನಗಳಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ.
ಫೋರ್ಟಿಸ್ ಲಾ ಫೆಮ್ಮೆ, GK, ನವದೆಹಲಿಯ ಸಹಾಯಕ ನಿರ್ದೇಶಕರು ಮತ್ತು ಸ್ತ್ರೀರೋಗ ತಜ್ಞರಾದ ಡಾ ಅನಿತಾ ಗುಪ್ತಾ ಅವರ ಪ್ರಕಾರ, ಕೇವಲ ಆಹಾರ ಕ್ರಮವನ್ನು ಅವಲಂಬಿಸಿ ವೀರ್ಯದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ. ನಿಯಮಿತ ವ್ಯಾಯಾಮ, ಧೂಮಪಾನವನ್ನು ತ್ಯಜಿಸುವುದು, ಪೂರಕ ಆಹಾರ, ಒತ್ತಡ ನಿರ್ವಹಣೆ, ಆರೋಗ್ಯಕರ ತೂಕ, ಆಲ್ಕೋಹಾಲ್ ಸೇವನೆ ಮಿತಗೊಳಿಸುವುದು, ಸಾಕಷ್ಟು ನಿದ್ರೆ ವೀರ್ಯದ ಆರೋಗ್ಯಕ್ಕೆ ಮುಖ್ಯ ಇದರೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಮುಖ್ಯವಾಗಿದೆ ಎಂದವರು ಹೇಳಿದ್ದಾರೆ.
ವೀರ್ಯಾಣುಗಳ ಸಂಖ್ಯೆಯನ್ನು ಪ್ರಭಾವಿಸುವ ನಿಜವಾದ ಅಂಶಗಳು ಯಾವುವು?
ಇದು ಆರೋಗ್ಯ, ಜೀವನಶೈಲಿ ಮತ್ತು ಸಮಯದ ಸಂಯೋಜನೆಯಾಗಿದೆ. ವೀರ್ಯ ಉತ್ಪಾದನೆ ಸುಮಾರು 64-72 ದಿನಗಳನ್ನು ತೆಗೆದುಕೊಳ್ಳುತ್ತದೆ, 15 ದಿನಗಳಲ್ಲಿ ಹಠಾತ್ ಏರಿಕೆಯಾಗುತ್ತದೆ ಎನ್ನುವುದು ಅವಾಸ್ತವಿಕ. ವೀರ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳು ಹೀಗಿವೆ:
- ಸಮತೋಲಿತ ಆಹಾರ: ಆಂಟಿ ಆಕ್ಸಿಡೆಂಟ್ ಗಳು, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರದೊಂದಿಗೆ ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವನ್ನು ಸುಧಾರಿಸಬಹುದು.
- ವ್ಯಾಯಾಮ ಮತ್ತು ತೂಕ ನಿರ್ವಹಣೆ: ಸಕ್ರಿಯವಾಗಿರುವುದು ಹಾರ್ಮೋನುಗಳ ಸಮತೋಲನವನ್ನು ಬೆಂಬಲಿಸುತ್ತದೆ.
- ಒತ್ತಡ ಮತ್ತು ವಿಷವನ್ನು ಕಡಿಮೆ ಮಾಡುವುದು: ದೀರ್ಘಕಾಲದ ಒತ್ತಡ ಮತ್ತು ಆಲ್ಕೋಹಾಲ್, ಧೂಮಪಾನ ಮತ್ತು ಮಾಲಿನ್ಯದಂತಹ ವಿಷಗಳಿಗೆ ಒಡ್ಡಿಕೊಳ್ಳುವುದರಿಂದ ವೀರ್ಯದ ಆರೋಗ್ಯವನ್ನು ದುರ್ಬಲಗೊಳಿಸಬಹುದು.
ಯಾವುದೇ ಒಂದು ಆಹಾರ ಅಥವಾ ಪಾನೀಯ ಈ ಜೈವಿಕ ಪ್ರಕ್ರಿಯೆಗಳನ್ನು ಬೈಪಾಸ್ ಮಾಡಲು ಮತ್ತು ತ್ವರಿತ ಫಲಿತಾಂಶಗಳನ್ನು ನೀಡಲು ಸಾಧ್ಯವಿಲ್ಲ.
ಈ ಪಾನೀಯವನ್ನು ಪ್ರತಿದಿನ ಸೇವಿಸುವುದು ಸುರಕ್ಷಿತವೇ?
ಹೌದು, ಆದರೆ ಮಿತವಾಗಿ ಸೇವಿಸಬಹುದು. ಈ ಪಾನೀಯ ಹೆಚ್ಚಿನ ಜನರಿಗೆ ಸುರಕ್ಷಿತವಾಗಿದೆ ಏಕೆಂದರೆ ಇದು ನೈಸರ್ಗಿಕ, ಆರೋಗ್ಯಕರ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಇದನ್ನು ಅತಿಯಾಗಿ ಸೇವಿಸುವುದರಿಂದ ಹೆಚ್ಚಿನ ಕ್ಯಾಲೋರಿ ಮತ್ತು ಸಕ್ಕರೆ ಅಂಶದಿಂದಾಗಿ ತೂಕ ಹೆಚ್ಚಾಗುವಂತಹ ಅನಗತ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಮಧುಮೇಹ ಅಥವಾ ಲ್ಯಾಕ್ಟೋಸ್ ಸಮಸ್ಯೆ ಇರುವ ವ್ಯಕ್ತಿಗಳಿಗೆ ಇದು ಸೂಕ್ತವಾಗಿರುವುದಲ್ಲಿ. ಇದಕ್ಕೆ ಹೊಂದಾಣಿಕೆ ಅಗತ್ಯ.
Conclusion
ಹುರಿಗಡಲೆ, ಹಾಲು, ಬಾಳೆಹಣ್ಣು, ಖರ್ಜೂರ ಮತ್ತು ಬೆಲ್ಲದ ಮಿಶ್ರಣವನ್ನು 15 ದಿನಗಳವರೆಗೆ ಪ್ರತಿದಿನ ಕುಡಿಯುವುದರಿಂದ ವೀರ್ಯಾಣುಗಳ ಸಂಖ್ಯೆ ನೂರು ಪಟ್ಟು ಹೆಚ್ಚಾಗುತ್ತದೆ ಎಂಬ ಮಾತು ಸುಳ್ಳು. ಈ ಪದಾರ್ಥಗಳು ಪೌಷ್ಟಿಕಾಂಶ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಬೆಂಬಲಿಸುತ್ತವೆಯಾದರೂ, ಯಾವುದೇ ಆಹಾರ ಅಥವಾ ಪಾನೀಯವು ಕಡಿಮೆ ಸಮಯದಲ್ಲಿ ಅಂತಹ ಉತ್ಪ್ರೇಕ್ಷಿತ ಫಲಿತಾಂಶಗಳನ್ನು ಉಂಟುಮಾಡುವುದಿಲ್ಲ. ವೀರ್ಯ ಫಲವತ್ತತೆಯ ಬಗ್ಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ.
Also Read: ಎಳ್ಳು, ಒಣಕೊಬ್ಬರಿ, ಬೆಲ್ಲ ಮಿಶ್ರಣದ ಉಂಡೆ ದಿನಕ್ಕೊಂದು ತಿನ್ನುವುದರಿಂದ 100 ವರ್ಷ ಆರೋಗ್ಯವಾಗಿರಬಹುದೇ?
Result: False
Our Sources
Comprehensive review on the positive and negative effects of various important regulators on male spermatogenesis and fertility – PMC
Nutritional composition, health benefits and bio-active compounds of chickpea (Cicer arietinum L.) – PMC
Vitamin D and Male Fertility: An Updated Review – PMC
Effect of bromelain on sperm quality, testicular oxidative stress and expression of oestrogen receptors in bisphenol-A treated male mice – PubMed
Spermatogenesis – an overview | ScienceDirect Topics
(This article has been published in collaboration with THIP Media)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.