Fact Check: ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆಯಾಗುತ್ತದೆಯೇ, ಸತ್ಯ ಏನು?

ಬಳಸಿದ ಚಹಾ ಪುಡಿ ಬಿಸಿ ನೀರಿಗೆ ಹಾಕಿ ಕಾಲು ಅದ್ದಿದರೆ ನೋವು ದೂರ

Claim
ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆ

Fact
ಉಪಯೋಗ ಮಾಡಿದ ಚಹಾ ಪುಡಿಯನ್ನು ಬಿಸಿನೀರಿಗೆ ಹಾಕಿ ಅದರಲ್ಲಿ ಕಾಲನ್ನು ಅರ್ಧ ಗಂಟೆ ಅದ್ದಿ ಇಡಬೇಕು ಇದರಿಂದ ನೋವು ನಿವಾರಣೆಯಾಗುತ್ತದೆ ಎಂಬುದನ್ನು ಖಚಿತಪಡಿಸಲು ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ ಮತ್ತು ಎಲ್ಲ ರೀತಿಯ ನೋವು ಮತ್ತು ವಿವಿಧ ಸಂದರ್ಭಗಳಲ್ಲಿ ಇದು ಪ್ರಯೋಜನಾರಿ ಎಂದು ಹೇಳಲು ಸಾಧ್ಯವಿಲ್ಲ.

ಬಿಸಿ ನೀರಿಗೆ ಬಳಸಿದ ಚಹಾ ಪುಡಿಯನ್ನು ಹಾಕಿ ಕಾಲನ್ನು ಅದ್ದುವುದರಿಂದ ಕಾಲು ನೋವು ಉಪಶಮನವಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನ ಪ್ರಕಾರ, “ಕಾಲು ನೋವು ಸುಸ್ತು ಇದ್ದರೆ ಬೆಚ್ಚನೆಯ ನೀರಿಗೆ ಉಪಯೋಗ ಮಾಡಿದ ಚಹಾ ಪುಡಿಯನ್ನು ಹಾಕಿ ಅರ್ಧ ಗಂಟೆ ವರೆಗೆ ಕಾಲನ್ನು ನೀರಿನಲ್ಲಿ ಅದ್ದಿ ಇಡಬೇಕು ಇದರಿಂದ ಕಾಲು ನೋವು, ಆಯಾಸ ಮಾಯವಾಗುತ್ತದೆ”

ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ನಿವಾರಣೆ

Fact check/ Verification

ಸತ್ಯಶೋಧನೆಯ ಪ್ರಕಾರ, ಬಿಸಿ ನೀರಿಗೆ ಚಹಾ ಹುಡಿಯನ್ನು ಹಾಕಿ ಕಾಲನ್ನು ಅದ್ದಿ ಇಡುವುದರಿಂದ ಕೆಲವರಿಗೆ ಕಾಲು ನೋವು ಉಪಶಮನ ಕಾಣಬಹುದು. ಈ ಕುರಿತು ಪ್ರಕಟಗೊಂಡ ವೈಜ್ಞಾನಿಕ ಸಾಕ್ಷ್ಯಗಳ ಪ್ರಕಾರ, ಬಿಸಿ ನೀರಲ್ಲಿ ಕಾಲು ಇಡುವುದರಿಂದ ಕಾಲಿನ ಮಾಂಸಖಂಡಗಳ ಒತ್ತಡ ನಿವಾರಣೆಯಾಗಿ ನೋವು ಕಡಿಮೆಯಾಗುತ್ತದೆ.

ಆದರೆ ಚಹಾ ಪುಡಿ ವಿಚಾರಕ್ಕೆ ಬರುವುದಾದರೆ, ಚಹಾವನ್ನು Camellia sinensis ಎಂಬುದರಿಂದ ಮಾಡಲಾಗುತ್ತದೆ. ಪ್ರಕಟಗೊಂಡ ವೈಜ್ಞಾನಿಕ ಸಾಕ್ಷ್ಯಗಳ ಪ್ರಕಾರ, ಚಹಾದಲ್ಲಿ ಒಂದಷ್ಟು ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು, ಆಂಟಿ ಮೈಕ್ರೋಬಿಯಲ್‌, ಆಂಟಿಕಾರ್ಸಿನೋಜೆನಿಕ್‌, ಆಂಟಿ ಇನ್‌ಫ್ಲಮೇಟರಿ, ಆಂಟಿ ಹೈಪರ್‌ಟೆನ್ಸಿವ್‌, ನ್ಯೂರೋಪ್ರೊಟೆಕ್ಟಿವ್‌, ಕೊಲೆಸ್ಟರಾಲ್‌ ಕಡಿಮೆ ಮಾಡುವ ಮತ್ತು ಥೆರಮೋಜೆನಿಕ್‌ ಅಂಶಗಳಿವೆ. ಈ ಅಂಶಗಳಿಂದಾಗಿ ಸ್ವಲ್ಪ ಮಟ್ಟಿಗೆ ನೋವನ್ನು ಕಡಿಮೆ ಮಾಡಬಹುದು.

Also Read: ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆಯೇ?

ಆದರೆ, ಬಿಸಿ ನೀರಿಗೆ ಬಳಸಿದ ಚಹಾ ಹುಡಿಯನ್ನು ಹಾಕಿ ಕಾಲನ್ನು ಇಡುವುದರಿಂದ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ.  

ಪ್ರಕಟವಾದ ಸಾಕ್ಷ್ಯಗಳ ಪ್ರಕಾರ ಚಹಾವು ಫ್ಲೇವೊನಾಲ್‌ಗಳು, ಥೀಫ್ಲಾವಿನ್‌ಗಳು ಮತ್ತು ಕ್ಯಾಟೆಚಿನ್‌ಗಳಂತಹ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ, ಇದು ನೋವನ್ನು ಕಡಿಮೆ ಮಾಡುವಲ್ಲಿ ಪಾತ್ರವನ್ನು ಹೊಂದಿರಬಹುದು.

ಕರುಳು ಮತ್ತು ನರಗಳ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಚಹಾವನ್ನು ಔಷಧೀಯ ಪಾನೀಯವಾಗಿ ಬಳಸಲಾಗುತ್ತದೆ ಎಂದು ಪುರಾವೆಗಳು ತೋರಿಸುತ್ತವೆ. ಆದರೆ ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನು ನೆನೆಸುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ ಎಂದು ಈ ಸಾಕ್ಷ್ಯವು ದೃಢಪಡಿಸುವುದಿಲ್ಲ.

ವೈದ್ಯರಾದ ಕಶ್ಯಪ್‌ ದಕ್ಷಿಣಿ ಅವರು ಹೇಳುವ ಪ್ರಕಾರ “ಚಹಾ ಹುಡಿ ಬೆರೆಸಿದ ನೀರಿನಲ್ಲಿ ಕಾಲನ್ನು ಅದ್ದಿ ಇಡುವುದರಿಂದ ಕಾಲು ನೋವು ಕಡಿಮೆ ಮಾಡುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ. ಆದರೆ ತುಸು ಬಿಸಿಯಾದ ಗ್ರೀನ್‌ ಟೀಯಲ್ಲಿ ಕಾಲನ್ನು ಅದ್ದಿಡುವುದರಿಂದ ಅಥ್ಲೀಟ್ಸ್‌ ಫೂಟ್‌ನಂತಹ ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲದು. ಆದರೆ, ಪ್ರತಿಯೊಬ್ಬರಿಗೂ, ಇದರಿಂದ ಪ್ರಯೋಜನವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ (ನಿರ್ದಿಷ್ಟ ಆರೋಗ್ಯ ಸ್ಥಿತಿಯೊಂದಿಗೆ ಅಥವಾ ಇಲ್ಲದೆಯೇ) ಮತ್ತು ಒಂದೇ ತೆರನಾದ ಫಲಿತಾಂಶ ನೀಡುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ.

ಚಹಾದಲ್ಲಿರುವ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನು ಪಾದಗಳ ಸ್ನಾಯುಗಳು ಮತ್ತು ಚರ್ಮ ಹೀರಿಕೊಳ್ಳಬಹುದೇ ಎಂದು ನೋಡಲಾಗಿದ್ದು, ಈ ವೇಳೆ ಸಂಶೋಧನಾ ಪತ್ರಿಕೆಗಳು ಹೇಳುವ ಪ್ರಕಾರ, ಆಂಟಿ ಆಕ್ಸಿಡೆಂಟ್ಸ್‌ಗಳನ್ನು ತಿನ್ನಬಹುದು ಅಥವಾ ಹಚ್ಚಬಹದು. ಆದರೆ ಚರ್ಮವು ಈ ಆಂಟಿಆಕ್ಸಿಡೆಂಟ್‌ಗಳನ್ನು ಹೀರಿಕೊಳ್ಳುತ್ತವೆ ಎಂದು ಹೇಳಲಾಗದು ಎನ್ನಲಾಗಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ ಬಿಸಿ ನೀರಿಗೆ ಉಪಯೋಗ ಮಾಡಿದ ಚಹಾ ಹುಡಿ ಹಾಕಿ ಕಾಲನ್ನಿಟ್ಟರೆ ಕಾಲು ನೋವು ಕಡಿಮೆಯಾಗುತ್ತದೆ ಎನ್ನವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿರುವುದರಿಂದ ಇದು ತಪ್ಪಾದ ಸಂದರ್ಭವಾಗಿದೆ.

Result: Missing Context

Our Sources:
Leg immersion in warm water, stretch-shortening exercise, and exercise-induced muscle damage – PubMed (nih.gov)
The Thermal Effects of Water Immersion on Health Outcomes: An Integrative Review – PMC (nih.gov)
Evaluation of the efficacy of warm salt water foot-bath on patients with painful diabetic peripheral neuropathy: A randomized clinical trial – PubMed (nih.gov)
Anti-inflammatory Action of Green Tea – PubMed (nih.gov)
Tea and its consumption: benefits and risks – PubMed (nih.gov)
Tea Plant (Camellia sinensis): A Current Update on Use in Diabetes, Obesity, and Cardiovascular Disease – PMC (nih.gov)
[Anti-inflammatory effects of tea-flavonoids] – PubMed (nih.gov)
Synthesis of Theaflavins and Their Functions – PubMed (nih.gov)
Tea catechins reduce inflammatory reactions via mitogen-activated protein kinase pathways in toll-like receptor 2 ligand-stimulated dental pulp cells – PubMed (nih.gov)
Tea | The Nutrition Source | Harvard T.H. Chan School of Public Health
How Important the Tea Was in Ancient China? (chinaculture.org)
Recent Scientific Studies of a Traditional Chinese Medicine, Tea, on Prevention of Chronic Diseases – PMC (nih.gov)
Recent Advances in Antioxidant Cosmeceutical Topical Delivery | Bentham Science (eurekaselect.com)
Increasing the antioxidant content of food: a personal view on whether this is possible or desirable – PubMed (nih.gov)
Antioxidants | The Nutrition Source | Harvard T.H. Chan School of Public Health
Conversation with Dr Kashyap Dakshini

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.