Authors
Claim
ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ
Fact
ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ
ಕಿವಿ ಹಣ್ಣು ತಿನ್ನೋದ್ರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಈ ಕುರಿತ ಕ್ಲೇಮ್ ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದಿದ್ದು, “ಕಿವಿ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ತೊಂದರೆಗಳನ್ನು ಕಡಿಮೆ ಮಾಡಬಹುದು ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು” ಎಂದು ಹೇಳಲಾಗಿದೆ.
ಈ ಕುರಿತು ಸತ್ಯಶೋಧನೆ ಮಾಡಲಾಗಿದ್ದು, ಇದು ತಪ್ಪು ಎಂದು ಕಂಡುಬಂದಿದೆ.
Fact Check/ Verification
ಕಿವಿ ಹಣ್ಣಿನಿಂದ ಕಣ್ಣಿನ ಆರೋಗ್ಯ ನಿರ್ವಹಣೆಯಾಗಬಹುದು. ಆದರೆ, ಇದರಿಂದ ಕಣ್ಣಿನ ದೃಷ್ಟಿ ಬಹುತೇಕ ಸಂದರ್ಭಗಳಲ್ಲಿ ಸುಧಾರಣೆಯಾಗದು. ಮಾನವರಲ್ಲಿ ಕಣ್ಣಿನ ಪೊರೆಯನ್ನು ವಿಳಂಬಗೊಳಿಸುವಲ್ಲಿ ಆಹಾರವು ಒಂದು ಪಾತ್ರವನ್ನು ವಹಿಸುತ್ತದೆ ಎಂದು ವೀಕ್ಷಣಾ ಸಂಶೋಧನೆಯು ತೋರಿಸಿದೆ. ವಯಸ್ಸಿಗೆ ಸಂಬಂಧಿಸಿದಂತೆ ಮ್ಯಾಕ್ಯುಲರ್ ಡಿಜೆನರೇಶನ್ (AMD) ಅನ್ನು ತಡೆಗಟ್ಟುವಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಇ ಪಾತ್ರವನ್ನು ಹೊಂದಿವೆ ಎಂದೂ ಸಂಶೋಧನೆ ತೋರಿಸಿದೆ. ಆದರೆ ಇತರ ಸಂಶೋಧನೆಗಳ ಪ್ರಕಾರ, ಇದು ಯಾವಾಗಲೂ ಸಾಧ್ಯವಿಲ್ಲ. ಸಾಮಾನ್ಯ ಕಣ್ಣಿನ ಪರಿಸ್ಥಿತಿಗಳಿಗೆ – ಸಮೀಪದೃಷ್ಟಿ, ದೂರದೃಷ್ಟಿ, ಕಣ್ಣಿನ ಪೊರೆಗಳ ವಿಚಾರಕ್ಕೆ ಕಿವಿ ತಿನ್ನುವುದರಿಂದ ದೃಷ್ಟಿ ಸುಧಾರಿಸುವುದಿಲ್ಲ.
ಆಹಾರ ಮತ್ತು ಪೌಷ್ಟಿಕಾಂಶ ಕುರಿತ ತಜ್ಞೆಯಾದ ರಜನಿ ರಾಮನ್ ಅವರು ಹೇಳುವ ಪ್ರಕಾರ, “ಸಾಮಾನ್ಯವಾಗಿ ದೃಷ್ಟಿಗೆ ಉತ್ತಮವಾದ ಆಹಾರಗಳು ಕಣ್ಣಿನ ನಿರ್ವಹಣೆ ಮಾಡಲು ಉತ್ತಮವಾಗಿದೆ. ಅದು ವಯಸ್ಕರಲ್ಲಿ ಮತ್ತು ದೃಷ್ಟಿಯ ಪ್ರಸ್ತುತ ಕಾರ್ಯಕವನ್ನು ನಿರ್ವಹಿಸಲು ನೆರವಾಗುತ್ತವೆ” ಎಂದು ಹೇಳಿದ್ದಾರೆ.
ಕಿವಿ ಹಣ್ಣಿನಿಂದ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು. ಮತ್ತು ಕೆಲವು ಕಣ್ಣಿನ ಕಾಯಿಲೆಗಳು ಬಾರದಂತೆ ತಡೆಗಟ್ಟಬಹುದು.
Also Read : ಆಹಾರದಲ್ಲಿ ಶುಂಠಿ ಸೇವನೆಯಿಂದ ಕೀಲು ನೋವು ದೂರ ಆಗುತ್ತಾ?
ಕಿವಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಜಿಯಾಕ್ಸಾಂಥನ್ ಮತ್ತು ಲ್ಯೂಟಿನ್‌ಗಳು ಇದ್ದು, ಈ ಎರಡು ಆಂಟಿಆಕ್ಸಿಡೆಂಟ್‌ಗಳು ನಮ್ಮ ಕಣ್ಣನ್ನು ರಕ್ಷಿಸುತ್ತವೆ. ಝಾಕ್ಸಾನ್‌ಥಿನ್ ಮತ್ತು ಲ್ಯೂಟಿನ್‌ಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD) ಸಂಭವವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ದಿನಕ್ಕೆ ಮೂರು ಬಾರಿ ಹಣ್ಣುಗಳನ್ನು ತಿನ್ನುವ ಮೂಲಕ ಮ್ಯಾಕ್ಯುಲರ್ ಡಿಜೆನರೇಶನ್ ಶೇ.36 ರಷ್ಟು ಕಡಿಮೆಯಾಗಿದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಆದಾಗ್ಯೂ, ಕಣ್ಣಿನ ಆರೋಗ್ಯದಲ್ಲಿ ಜಿಯಾಕ್ಸಾಂಥನ್ ಮತ್ತು ಲ್ಯೂಟಿನ್‌ಗಳ ಪರಿಣಾಮದ ಬಗ್ಗೆ ಸಂಶೋಧನೆಗಳು ಅಸಮಂಜಸವಾಗಿವೆ. ಈ ಬಗ್ಗೆ ಹೆಚ್ಚುವರಿ ಅಧ್ಯಯನಗಳ ಅಗತ್ಯವಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಕಿವಿ ಹಣ್ಣು ತಿನ್ನುವುದರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುವುದಿಲ್ಲ. ಇದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ. ಮತ್ತು ಇದರಿಂದ ಕಣ್ಣಿನ ಆರೋಗ್ಯ ಸುಧಾರಣೆಯಾಗುತ್ತದೆ ಎನ್ನುವುದೂ ದೃಢಪಟ್ಟಿಲ್ಲ.
ಕಣ್ಣಿನ ಶಸ್ತ್ರಚಿಕಿತ್ಸಕರಾದ ಡಾ.ಅಫ್ತಾಬ್ ಅಲಮ್ ಅವರು ಹೇಳುವ ಪ್ರಕಾರ, ಹೆಚ್ಚಾಗಿ ಸಸ್ಯಾಧಾರಿತ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಕಾರಿ, ಅದರರ್ಥ ಅದು ಕಣ್ಣಿನ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ ಎಂದಲ್ಲ. ಈ ಬಗ್ಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಲಭ್ಯವಿಲ್ಲ” ಎಂದು ಹೇಳಿದ್ದಾರೆ.
ಕಣ್ಣಿನ ವೈದ್ಯರಾದ ಡಾ.ನವೀನ್ ಗುಪ್ತಾ ಅವರ ಪ್ರಕಾರ, “ಉತ್ತಮ ಕಣ್ಣಿನ ಆರೋಗ್ಯ ಮತ್ತು ದೃಷ್ಟಿಯನ್ನು ಸುಧಾರಿಬಹುದು ಎಂಬುದರ ಮಧ್ಯೆ ವ್ಯತ್ಯಾಸವಿದೆ. ಇದೆರಡು ವಿಚಾರದಲ್ಲಿ ಹೆಚ್ಚಿನ ಮಂದಿ ಗೊಂದಲಕ್ಕೊಳಗಾಗುತ್ತಾರೆ” ಎಂದು ಹೇಳಿದ್ದಾರೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಕಿವಿ ಹಣ್ಣು ತಿನ್ನುವುದರಿಂದ ಕಣ್ಣಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎನ್ನವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ ಎಂದು ತಿಳಿದುಬಂದಿದೆ.
Result: False
Our Sources:
Nutritional modulation of cataract – PubMed (nih.gov)
Nutrients for Prevention of Macular Degeneration and Eye-Related Diseases – PMC (nih.gov)
Antioxidant vitamin and mineral supplements for preventing age-related macular degeneration – PubMed (nih.gov)
Prospective Study of Intake of Fruits, Vegetables, Vitamins, and Carotenoids and Risk of Age-Related Maculopathy | Macular Diseases | JAMA Ophthalmology | JAMA Network
Lutein and zeaxanthin intake and the risk of age-related macular degeneration: a systematic review and meta-analysis – PubMed (nih.gov)
Conversation with Rajani Raman, Dietitian & Nutrition Therapist
Conversation with Dr. Aftab Alam, MBBS, DO (Ophthalmology)
Conversation with Dr. Naveen Gupta, DNB (Ophthalmology)
(This article has been published in collaboration with THIP Media)