Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಮತ್ತು ಜೇನುತುಪ್ಪ ತಿಂದರೆ ನೆನಪಿನ ಶಕ್ತಿ ಹೆಚ್ಚಿಸುತ್ತದೆ
ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಮತ್ತು ಜೇನುತುಪ್ಪ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ
ಖಾಲಿ ಹೊಟ್ಟೆಯಲ್ಲಿ 2-3 ಗೋಡಂಬಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೆಯನ್ನು ಹಂಚಲಾಗಿದೆ.

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ ಎಂದು ಕಂಡುಬಂದಿದೆ.
Also Read: ಸಕ್ಕರೆ ಬಳಸಿ ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ನಡೆಸಬಹುದೇ?
ಇಲ್ಲ. ಗೋಡಂಬಿಯು ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇವೆಲ್ಲವೂ ಒಟ್ಟಾರೆ ಮೆದುಳಿನ ಆರೋಗ್ಯವನ್ನು ಬೆಂಬಲಿಸುತ್ತವೆ. ಆದರೆ ಕೆಲವು ಗೋಡಂಬಿ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವುದು ಸ್ವಿಚ್ ಹಾಕಿದಂತೆ ಪರಿಣಾಮ ಬೀರದು.
ಗೋಡಂಬಿಯಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುವ ಮೆಗ್ನೀಸಿಯಮ್ ನರಗಳ ಕಾರ್ಯದಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ ಮತ್ತು ಕಾಲಾನಂತರದಲ್ಲಿ ಮನಸ್ಥಿತಿ ಮತ್ತು ಸ್ಮರಣೆಗೆ ಸಹಾಯ ಮಾಡಬಹುದು. ಅದರಲ್ಲಿರುವ ಆರೋಗ್ಯಕರ ಕೊಬ್ಬುಗಳು (ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಂತೆ) ಮೆದುಳಿನ ಕೋಶಗಳನ್ನು ಉತ್ತಮ ಆಕಾರದಲ್ಲಿಡಲು ಸಹ ಕೊಡುಗೆ ನೀಡುತ್ತವೆ. ಆದಾಗ್ಯೂ, ಮೆಗ್ನೀಸಿಯಮ್ನಿಂದ ನೆನಪಿನ ಶಕ್ತಿ ಸುಧಾರಣೆಗೆ ಪ್ರಯೋಜನವಾಗಲು ದೀರ್ಘಾವಧಿ ಬೇಕಾಗಬಹುದು. ಗೋಡಂಬಿಯಿಂದ ತಕ್ಷಣಕ್ಕೆ ಪರಿಹಾರವಿಲ್ಲ.
ಸರಳವಾಗಿ ಹೇಳುವುದಾದರೆ, ಸಮತೋಲಿತ ಆಹಾರದ ಭಾಗವಾಗಿ ಗೋಡಂಬಿ ಮೆದುಳಿಗೆ ಒಳ್ಳೆಯದು, ಆದರೆ ಅವು ಪವಾಡ ಸದೃಶವಾಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುವುದಿಲ್ಲ.
ಇದಕ್ಕೂ ನಿರ್ದಿಷ್ಟ ಪುರಾವೆ ಇಲ್ಲ. ಗೋಡಂಬಿಯನ್ನು ಜೇನುತುಪ್ಪದೊಂದಿಗೆ ತಿನ್ನುವುದಕ್ಕೂ, ಖಾಲಿಹೊಟ್ಟೆಯಲ್ಲಿ ತಿಂದರೆ ಪ್ರಯೋಜನಾರಿ ಎನ್ನುವುದಕ್ಕೂ ವೈದ್ಯಕೀಯ ಪುರಾವೆಗಳಿಲ್ಲ.
ಜೇನುತುಪ್ಪ ನೈಸರ್ಗಿಕ ಸಕ್ಕರೆ ಅಂಶ ಹೊಂದಿರುತ್ತದೆ, ಆಂಟಿ ಆಕ್ಸಿಡೆಂಟ್ ಮತ್ತು ಖನಿಜಗಳನ್ನು ಹೊಂದಿದ್ದು, ಇದು ನಿಮಗೆ ವಿಶೇಷವಾಗಿ ಬೆಳಗ್ಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಇದು ದೀರ್ಘಾವಧಿಯ ನೆನಪಿನ ಶಕ್ತಿಗೆ ಪೂರಕವಲ್ಲ. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಅಲ್ಪ ಪ್ರಮಾಣದ ಆಹಾರವನ್ನು ತಿನ್ನುವುದು ಕೆಲವರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಆದರೆ ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದಿಲ್ಲ.
ಸಾಧ್ಯತೆಯಿಲ್ಲ. ಗೋಡಂಬಿ ಸೇರಿದಂತೆ ವಿವಿಧ ಬೀಜಗಳು ಖಂಡಿತವಾಗಿಯೂ ಮೆದುಳಿನ ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ ನೆನಪಿನ ಶಕ್ತಿ ಎನ್ನುವುದು ಒಂದು ಸಂಕೀರ್ಣ ಕಾರ್ಯವಾಗಿದೆ ನಿದ್ರೆ, ಒತ್ತಡ, ದೈಹಿಕ ಚಟುವಟಿಕೆ, ಸಾಮಾಜಿಕ ಭಾಗೀದಾರಿಕೆ ಮತ್ತು ದೀರ್ಘಾವಧಿಯ ಪೋಷಣೆಯಿಂದ ಪ್ರಭಾವಿತವಾಗಿರುತ್ತದೆ, ಕೇವಲ ಒಂದೇ ಆಹಾರದಿಂದ ಸಾಧ್ಯವಿಲ್ಲ.
ಉದಾಹರಣೆಗೆ, ಮೈಂಡ್ ಡಯಟ್ (ಮೆಡಿಟರೇನಿಯನ್ ಮತ್ತು DASH ಆಹಾರಗಳ ಮಿಶ್ರಣ) ಎನ್ನುವುದು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಆಹಾರ ಕ್ರಮ ಬೀಜಗಳನ್ನು ಒಳಗೊಂಡಿದೆ, ಆದರೆ ಅದೇ ಮುಖ್ಯವಲ್ಲ.
ಆದರೆ “ಪ್ರತಿದಿನ ಜೇನುತುಪ್ಪದೊಂದಿಗೆ 2-3 ಗೋಡಂಬಿ ತಿನ್ನುವುದು” ಎಂಬ ಕಲ್ಪನೆಯು ಸರಳವಾಗಿದ್ದರೂ, ಇದು ವಾಸ್ತವಿಕವಾದ್ದಲ್ಲ.
ನೆನಪಿನ ಶಕ್ತಿ ಹೆಚ್ಚಿಸಲು ವಿವಿಧ ರೀತಿಯ ಆಹಾರದ ಪ್ರಾಮುಖ್ಯತೆ ಇದೆ. ಸೊಪ್ಪುಗಳು, ಹಣ್ಣುಗಳು, ಧಾನ್ಯಗಳು, ಮೀನು, ಬೀಜಗಳು, ಮತ್ತು ಆಲಿವ್ ಎಣ್ಣೆ ಬಗ್ಗೆ ಹೇಳಲಾಗಿದೆ. ಈ ಆಹಾರಗಳು ಒಮೆಗಾ-3ಗಳು, ಪಾಲಿಫಿನಾಲ್ಗಳು, ಬಿ ವಿಟಮಿನ್ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳಂತಹ ಪೋಷಕಾಂಶಗಳ ಸಾರವನ್ನು ಒದಗಿಸುತ್ತದೆ. ಇವೆಲ್ಲವೂ ಕಾಲಾನಂತರದಲ್ಲಿ ಮೆದುಳಿನ ಆರೋಗ್ಯ ಮತ್ತು ನೆನಪಿನ ಶಕ್ತಿಗೆ ಪೂರಕವಾಗಿದೆ.
ಯಾವುದೇ ಆಹಾರಕ್ಕಿಂತಲೂ ಹೆಚ್ಚಿಗೆ ದೈಹಿಕ ವ್ಯಾಯಾಮ, ಗುಣಮಟ್ಟದ ನಿದ್ರೆ ಮತ್ತು ಮೆದುಳನ್ನು ಸಕ್ರಿಯವಾಗಿರಿಸುತ್ತದೆ ಎನ್ನುವುದಕ್ಕೆ ಪುರಾವೆಗಳಿವೆ.
ಹೌದು, ಬೆಳಗ್ಗೆ ಒಂದೆರಡು ಗೋಡಂಬಿ ಮತ್ತು ಒಂದು ಚಮಚ ಜೇನುತುಪ್ಪವನ್ನು ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಎನ್ನುವುದಕ್ಕೆ ಸಾಕ್ಷ್ಯವಿಲ್ಲ. ಈ ಹೇಳಿಕೆ ಆಕರ್ಷಕವಾಗಿದ್ದರೂ, ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ.
ನಿಮ್ಮ ನೆನಪಿನ ಶಕ್ತಿ ಹೆಚ್ಚಿಸುವುದಕ್ಕೆ ಬಯಸುವಿರಾದರೆ, ನಿಯಮಿತ ದೈಹಿಕ ಚಟುವಟಿಕೆ, ಮಾನಸಿಕವಾಗಿ ಕುತೂಹಲದಿಂದ ಇರುವುದು, ಒತ್ತಡವನ್ನು ನಿರ್ವಹಿಸುವುದು ಮತ್ತು ಸಮತೋಲಿತ, ವೈವಿಧ್ಯಮಯ ಆಹಾರ ಸೇವನೆ ಮುಖ್ಯ.
ಗೋಡಂಬಿ ಮತ್ತು ಜೇನುತುಪ್ಪವು ಮಿತವಾಗಿದ್ದರೆ ಆರೋಗ್ಯಕರ. ಆದರೆ ಅದು ನೆನಪಿನ ಶಕ್ತಿಯನ್ನು ಏಕಾಏಕಿ ಹೆಚ್ಚಳಗೊಳಿಸುವುದಿಲ್ಲ. ಆರೋಗ್ಯಕರ ಮೆದುಳಿಗೆ ಸ್ಥಿರವಾದ ಆರೈಕೆಯ ಅಗತ್ಯವಿದೆ.
Also Read: ಬೆಲ್ಲದ ಚಹಾ ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸಮಸ್ಯೆಗೆ ಸಹಾಯ ಮಾಡುತ್ತದೆಯೇ?
Our Sources
Consumption of cashew nut induced anxiolytic-like behavior in dyslipidemic rats consuming a high fat diet
The Role of Magnesium in Neurological Disorders3
Honey and Diabetes: The Importance of Natural Simple Sugars in Diet for Preventing and Treating Different Type of Diabetes
The effects of insufficient sleep and adequate sleep on cognitive function in healthy adults
MIND diet, common brain pathologies, and cognition in community-dwelling older adults
(This article has been published in collaboration with THIP Media)
Ishwarachandra B G
April 12, 2025
Newschecker and THIP Media
February 28, 2025
Ishwarachandra B G
August 17, 2024