ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಆ ಕುರಿತ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸದಸ್ಯರು ಹರಟೆ ಹೊಡೆಯುತ್ತಿರುವುದು, ಉತ್ತರಪ್ರದೇಶದಲ್ಲಿ ಅಕ್ರಮ ವಕ್ಫ್ ಆಸ್ತಿಗಳ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂಬಂತೆ ಹೇಳಿಕೆಗಳಿದ್ದವು. ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದಾಗ ಇದು ಸುಳ್ಳು ಎಂದು ಗೊತ್ತಾಗಿದೆ. ಇದರೊಂದಿಗೆ ನ್ಯೂಸ್ ಚೆಕರ್ ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ, ರಾಮ ಸೇತು ಅವಶೇಷ ಅನ್ವೇಷಿಸುವ ಸ್ಕ್ಯೂಬಾಡೈವರ್ ಗಳು, ಖಾಲಿ ಹೊಟ್ಟೆಯಲ್ಲಿ ಗೋಡಂಬಿ ಮತ್ತು ಜೇನುತುಪ್ಪ ತಿಂದರೆ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಎಂಬುದರ ಬಗ್ಗೆಯೂ ಸತ್ಯಶೋಧನೆ ನಡೆಸಿದೆ. ಈ ಹೇಳಿಕೆಗಳು ಕೂಡ ನಿಜವಲ್ಲ ಎಂದು ಕಂಡುಬಂದಿದೆ. ಶಿರಾದಲ್ಲಿ ದೊಡ್ಡ ಡ್ಯಾಮ್ ಎನ್ನುವುದು ಚೀನದ ವೀಡಿಯೋ ಆದರೆ, ರಾಮಸೇತು ಕುರಿತ ವೀಡಿಯೋ ಎಐನಿಂದ ಮಾಡಿದ್ದಾಗಿದೆ. ಈ ಕುರಿತ ವಾರದ ನೋಟ ಇಲ್ಲಿದೆ.

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ
ವಕ್ಫ್ ಮಸೂದೆ ಅಂಗೀಕಾರ ಬಳಿಕ ಅಸಾದುದುದ್ದೀನ್ ಓವೈಸಿ-ಬಿಜೆಪಿ ಸಂಸದರು ಹರಟೆ ಹೊಡೆಯುತ್ತಿದ್ದರು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಓವೈಸಿ-ಬಿಜೆಪಿ ಸಂಸದರ ಹರಟೆ ಎನ್ನುವ ಈ ವೀಡಿಯೋ ವಕ್ಫ್ ಮಸೂದೆ ಅಂಗೀಕಾರದ ಬಳಿಕದ್ದಲ್ಲ, ಇದು ಜನವರಿ ಸಮಯದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ

ಉತ್ತರಪ್ರದೇಶದಲ್ಲಿ ಅಕ್ರಮ ವಕ್ಫ್ ಆಸ್ತಿಗಳ ಮೇಲೆ ಕ್ರಮ
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ನಂತರ, ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ಕ್ರಮ ಆರಂಭವಾಗಿದೆ ಎಂಬ ಹೇಳಿಕೆಯೊಂದಿಗೆ ಮದರಸಾವೊಂದರ ಎದುರು ಅಧಿಕಾರಿಗಳು ನಿಂತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಉತ್ತರಾಖಂಡದ ಹರಿದ್ವಾರದಿಂದ ಈ ವೀಡಿಯೋ ಬಂದಿದ್ದು, ಅಕ್ರಮ ವಕ್ಫ್ ಆಸ್ತಿ ಕುರಿತಾದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತ ವರದಿ

ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎಂದು ಚೀನಾ ವೀಡಿಯೋ ವೈರಲ್
ತುಮಕೂರಿನ ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯ ಪ್ರಕಾರ, ತುಮಕೂರಿನ ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎನ್ನುವ ವೀಡಿಯೋ ಚೀನಾಕ್ಕೆ ಸಂಬಂಧಿಸಿದ್ದಾಗಿದೆ ಎಂಬುದನ್ನು ಪತ್ತೆ ಮಾಡಿದ್ದೇವೆ. ಈ ಕುರಿತ ವರದಿ ಇಲ್ಲಿದೆ

ರಾಮಸೇತು ಅವಶೇಷ ನೀರೊಳಗೆ ಅನ್ವೇಷಿಸುವ ಸ್ಕ್ಯೂಬಾಡೈವರ್ ಗಳು; ಇದು ಎಐ ರಚನೆ!
ರಾಮಸೇತುವಿನ ಅವಶೇಷಗಳನ್ನು ಅನ್ವೇಷಿಸುವ ನೀರೊಳಗಿನ ವೀಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸ್ಕೂಬಾ ಡೈವರ್‌ಗಳ ತಂಡವು ಬಂಡೆಗಳು, ಪ್ರಾಚೀನ ರಚನೆಗಳ ಅವಶೇಷಗಳುನ್ನು ಪರಿಶೀಲಿಸುತ್ತಿರುವುದನ್ನು ತೋರಿಸುತ್ತದೆ. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಇದು ಎಐ ಸೃಷ್ಟಿ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ