Authors
Claim
ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ಎಂದು ವೀಡಿಯೋ ಒಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಮೋದಿಯವರ ಗುಜರಾತ್ ಮಾಡೆಲ್ ಇಲ್ಲಿ 15 ಲಕ್ಷ ಕೊಡುತ್ತಿಲ್ಲ..! ಕೇವಲ 600 ಹುದ್ದೆಗಾಗಿ ಎಂಪ್ಲಾಯ್ಮೆಂಟ್ ಎಕ್ಸ್ ಚೇಂಜ್ ಕಚೇರಿ ಮುಂದುಗಡೆ ಸೇರಿರುವ ಲಕ್ಷಾಂತರ ಯುವ ಜನತೆ. ತಮ್ಮ ತವರು ರಾಜ್ಯದ ಯುವಕರಿಗೆ ಉದ್ಯೋಗ ಕೊಟ್ಟಿಲ್ಲ,ಇನ್ನು ದೇಶದ ಯುವಕರಿಗೆ ಕೊಡುತ್ತಾರ?” ಎಂದಿದೆ.
Also Read: ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ ಹಿಂದಿನ ಸತ್ಯವೇನು?
ವಿವಿಧ ಸಂದರ್ಭಗಳಲ್ಲಿ ಗುಜರಾತಿನಲ್ಲಿ ಉದ್ಯೋಗಕ್ಕಾಗಿ ನೂಕು ನುಗ್ಗಲಿನಂತಹ ಘಟನೆಗಳು ನಡೆದಿದ್ದರೂ, ವೈರಲ್ ಕ್ಲೇಮಿನಲ್ಲಿ ಹೇಳಲಾದ ವೀಡಿಯೋ, ಈಗಿನದ್ದಲ್ಲ ಅಥವಾ ಹೊಸದಾಗಿ ನಡೆದ ಘಟನೆಯಲ್ಲ ಎಂದು ನ್ಯೂಸ್ ಚೆಕರ್ ಕಂಡುಕೊಂಡಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಎಎನ್ಐ ನವೆಂಬರ್ 27, 2021ರಂದು ಮಾಡಿದ ಎಕ್ಸ್ ಪೋಸ್ಟ್ ನಲ್ಲಿ ಗುಜರಾತ್ನ ಬನಸ್ಕಂತದ ಪಾಲನ್ಪುರ ಪ್ರದೇಶದಲ್ಲಿ ಗ್ರಾಮ ರಕ್ಷಕ ದಳದ 600 ಹುದ್ದೆಗಾಗಿ ದೊಡ್ಡ ಸಂಖ್ಯೆಯಲ್ಲಿ ಆಕಾಂಕ್ಷಿಗಳು ನೆರೆದಿದ್ದರು ಎಂದಿದೆ
ಇದೇ ರೀತಿಯ ವರದಿಯನ್ನು ನಾವು ನವೆಂಬರ್ 28, 2021ರ ಇಂಡಿಯಾ ಟೈಮ್ಸ್ ಫೇಸ್‌ಬುಕ್ ಪೋಸ್ಟ್ ನಲ್ಲಿ ಕಂಡಿದ್ದೇವೆ.
ನವೆಂಬರ್ 28, 2021ರ ನ್ಯೂಸ್ 18 ವರದಿಯಲ್ಲಿ, ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ಯಾವುದೇ ಇಲಾಖೆಯಲ್ಲಿ ಯಾವುದೇ ಹುದ್ದೆ ಖಾಲಿಯಾದಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉದ್ಯೋಗ ಸಿಗುವ ಭರವಸೆಯೊಂದಿಗೆ ಬರುತ್ತಾರೆ. ಗುಜರಾತಿನ ಬನಸ್ಕಾಂತದಲ್ಲಿ ಇಂತಹದ್ದೇ ದೃಶ್ಯ ಕಂಡು ಬಂದಿದೆ. ಗ್ರಾಮ ರಕ್ಷಾ ದಳದ 600 ಹುದ್ದೆಗಳಿಗೆ ನೂರಾರು ಯುವಕರ ಗುಂಪು ಇಲ್ಲಿನ ಪಾಲನ್‌ಪುರವನ್ನು ತಲುಪಿತು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು ಎಂದಿದೆ.
ಇದೇ ರೀತಿಯ ವರದಿಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ನೋಡಿದ್ದೇವೆ. ಈ ವರದಿಗಳ ಪ್ರಕಾರ, ಗುಜರಾತಿನಲ್ಲಿ ನೇಮಕಾತಿ ಸಂದರ್ಭ ಆಕಾಂಕ್ಷಿಗಳ ನೂಕುನುಗ್ಗಲು ನಡೆದಿರುವುದು 2021ರ ಘಟನೆಯಾಗಿದೆ.
Also Read: ಕುತುಬ್ ಮಿನಾರ್ ನಲ್ಲಿರುವ ಕಬ್ಬಿಣ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆಯೇ, ವೈರಲ್ ಫೊಟೋ ಹಿಂದಿನ ಸತ್ಯವೇನು?
Result: Missing Context
Our Sources
X post By ANI, Dated November 28, 2021
Facebook Post By Indiatimes, Dated November 28, 2021
Report By News 18, Dated November 28, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.