Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆ
ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆ ಎಂದು ಹಂಚಿಕೊಳ್ಳುತ್ತಿರುವ ವೀಡಿಯೋ ಗುಜರಾತ್ ನದ್ದಾಗಿದ್ದು ರಾಧಾನ್ಪುರ ಹೈವೇಯಲ್ಲಿ ಎಣ್ಣೆ ಟ್ಯಾಂಕರ್ ಆಕ್ಸಿಡೆಂಟ್ ಬಳಿಕದ ವಿದ್ಯಮಾನವಾಗಿದೆ
ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ಎಣ್ಣೆ ಸಿಕ್ಕಿದೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಇದೇ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.


ವೈರಲ್ ವೀಡಿಯೋದ ಸತ್ಯಶೋಧನೆಯನ್ನು ನ್ಯೂಸ್ ಚೆಕರ್ ನಡೆಸಿದ್ದು, ಇದು ಶಿರಾದಲ್ಲಿ ಮನೆಕಟ್ಟುವ ವೇಳೆ ಲಭ್ಯವಾದ ಎಣ್ಣೆಯಲ್ಲ, ಗುಜರಾತ್ ನ ರಾಧಾನ್ಪುರದಲ್ಲಿ ಎಣ್ಣೆ ಲಾರಿ ಅಪಘಾತದ ನಂತರ ಜನರು ಎಣ್ಣೆಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಎಂದು ಕಂಡುಬಂದಿದೆ.
Also Read: ಸ್ಫೇನ್ ನಲ್ಲಿ ಜನರಿಂದ ಮಸೀದಿಗೆ ಬೆಂಕಿ? ವೈರಲ್ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
ಈ ವೈರಲ್ ವೀಡಿಯೋ ಬಗ್ಗೆ ನಾವು ತನಿಖೆ ನಡೆಸುವ ವೇಳೆ ವೀಡಿಯೋದಲ್ಲಿ ಜನರು ಎಣ್ಣೆ ತುಂಬುತ್ತಿರುವ ಆಯಿಲ್ ಡಬ್ಬದಲ್ಲಿ ಗುಜರಾತಿಯಲ್ಲಿ ಬರೆದಿರುವುದು ಕಂಡುಬಂದಿದೆ.

ಇದರೊಂದಿಗೆ ಎಣ್ಣೆ ತುಂಬಿದ ವಸ್ತುಗಳನ್ನು ಗುಜರಾತಿ ನೋಂದಣಿ ಹೊಂದಿದ ಗೂಡ್ಸ್ ರಿಕ್ಷಾಕ್ಕೆ ಲೋಡ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ.

ಈ ಗೂಡ್ಸ್ ರಿಕ್ಷಾದ ನೋಂದಣಿಯನ್ನು ನಾವು ಪರಿಶೀಲಿಸಿದ್ದು, ಇದು ಗುಜರಾತ್ ನಲ್ಲೇ ಓಡಾಡುವ ರಿಕ್ಷಾ ಆಗಿದೆ ಎಂಬುದು ಕಂಡುಬಂದಿದೆ.

ಆದ್ದರಿಂದ ವೈರಲ್ ವೀಡಿಯೋ ಗುಜರಾತ್ ನದ್ದಾಗಿರಬಹುದು ಎಂಬುದನ್ನು ಹೆಚ್ಚು ಖಚಿತಪಡಿಸುತ್ತದೆ.
ಹೆಚ್ಚಿನ ತನಿಖೆಗಾಗಿ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಿದ್ದೇವೆ. ಈ ವೀಡಿಯೋಗಳನ್ನು ಇಲ್ಲಿ ಇಲ್ಲಿ ನೋಡಬಹುದು.


ಈ ಪೋಸ್ಟ್ ಗೆ ನೀಡಲಾದ ವಿವರಣೆಯಲ್ಲಿ “ರಾಧಾನ್ಪುರದಲ್ಲಿ ಎಣ್ಣೆಯ ಮಳೆ” (ಗುಜರಾತಿಯಿಂದ ಅನುವಾದಿಸಲಾಗಿದೆ) ಎಂದು ಬರೆಯಲಾಗಿದೆ. ಈ ದೃಶ್ಯದಲ್ಲಿ ಗುಜರಾತಿನ ರಾಧಾನ್ಪುರದಲ್ಲಿ ಎಣ್ಣೆಯನ್ನು ಪಾತ್ರೆಗಳಲ್ಲಿ ತುಂಬಿ ಜನರು ತೆಗೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ.
ಘಟನೆಯ ಮಾಹಿತಿಗಾಗಿ ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಆಗಸ್ಟ್ 1, 2023ರಂದು ದಿವ್ಯಾ ಭಾಸ್ಕರ್ ಪ್ರಕಟಿಸಿದ ವರದಿ ನೋಡಿದ್ದೇವೆ ಇದರಲ್ಲಿ “ವಾರಾಹಿ-ರಾಧನ್ಪುರ ರಸ್ತೆಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು, ಸುತ್ತಮುತ್ತಲಿನ ಜನರು ಅದನ್ನು ತುಂಬಲು ಪಾತ್ರೆಗಳೊಂದಿಗೆ ಅಲ್ಲಿಗೆ ತಲುಪಿದರು.” ಎಂದಿದೆ. ಈ ವರದಿಯಲ್ಲಿ ಜನರು ರಿಕ್ಷಾ ಒಂದಕ್ಕೆ ಎಣ್ಣೆಯನ್ನು

ಆ ನಂತರ ನಾವು ಇನ್ನಷ್ಟು ಹುಡುಕಾಟ ನಡೆಸಿದಾಗ, ಜುಲೈ 19, 2025ರಂದು ಐ ಪ್ಲಸ್ ನ್ಯೂಸ್ ಚಾನೆಲ್ ಪ್ರಕಟಿಸಿದ ಶಾರ್ಟ್ಸ್ ಅನ್ನು ಯೂಟ್ಯೂಬ್ ನಲ್ಲಿ ನೊಡಿದ್ದೇವೆ. ಇದರಲ್ಲಿ ರಾಧಾನ್ಪುರದಲ್ಲಿ ಎಣ್ಣೆಯ ಮಳೆ ಎಂದು ಕ್ಯಾಪ್ಷನ್ ಕೊಡಲಾಗಿದೆ (ಗುಜರಾತಿಯಿಂದ ಅನುವಾದಿಸಲಾಗಿದೆ) ಜೊತೆಗೆ ವೀಡಿಯೋದ ದೃಶ್ಯಗಳು ವೈರಲ್ ವೀಡಿಯೋಕ್ಕೆ ಹೆಚ್ಚಾಗಿ ತಾಳೆಯಾಗುತ್ತಿರುವುದನ್ನು ಗಮನಿಸಿದ್ದೇವೆ.

ವೈರಲ್ ವೀಡಿಯೋದ ತನಿಖೆ ವೇಳೆ ಪತ್ರಿಕಾ ವರದಿಯು 2023ರಲ್ಲಿ ಲಾರಿ ಅಪಘಾತವಾದ ಬಗ್ಗೆ ವರದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. ಇದೇ ವೇಳೆ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಇತ್ತೀಚೆಗೆ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ಘಟನೆ ನಿರ್ದಿಷ್ಟವಾಗಿ ಯಾವಾಗ ನಡೆದಿದೆ ಮತ್ತು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಮಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಆದಾಗ್ಯೂ ಘಟನೆ ಕುರಿತ ನಿರ್ದಿಷ್ಟ ವಿವರಗಳನ್ನು, ಪಡೆಯಲು ನಾವು ಸ್ಥಳೀಯ ವರದಿಗಾರರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆದ ಬಳಿಕ ನಾವು ಈ ಲೇಖನವನ್ನು ಪರಿಷ್ಕರಿಸಲಿದ್ದೇವೆ.
ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ಎಣ್ಣೆ ಸಿಕ್ಕಿದೆ ಎಂದು ವೈರಲ್ ಆಗುತ್ತಿರುವ ವೀಡಿಯೋ ಗುಜರಾತ್ ನದ್ದಾಗಿದ್ದು ಎಣ್ಣೆ ಲಾರಿ ಅಪಘಾತಗೊಂಡು ಬಿದ್ದ ಎಣ್ಣೆಯಾಗಿದೆ.
Also Read: ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರೇ?
Our Sources
Report By DivyaBhaskar, Dated: August 1, 2023
YouTube Shorts By Iplusnewschannel, Dated: July 19, 2025
(With Inputs from Dipalkumar shah, Newschecker Gujarati)
Ishwarachandra B G
July 26, 2025
Runjay Kumar
July 3, 2025
Vasudha Beri
June 13, 2025