Authors
Claim
ಅಧಿಕಾರಕ್ಕೆ ಬಂದರೆ ರಾಮನ ದೇವಾಲಯಕ್ಕೆ ಬೀಗ ಹಾಕುವುದುದಾಗಿ ಹೇಳಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮೇಲೆ ಚಪ್ಪಲಿ ಎಸೆದ ಜನರು
Fact
ಕನೌಜ್ನಲ್ಲಿ ರೋಡ್ ಶೋ ವೇಳೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮೇಲೆ ಹೂವಿನ ಹಾರಗಳನ್ನು ಎಸೆಯಲಾಗಿತ್ತು, ಚಪ್ಪಲಿ ಎಸೆದಿಲ್ಲ
ದೇಶದ 18ನೇ ಲೋಕಸಭೆ ಚುನಾವಣೆ ನಡೆಯುತ್ತಿದ್ದು, 4ನೇ ಹಂತಕ್ಕೆ ಮತದಾನ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳು ಕಣದಲ್ಲಿ ಪ್ರಮುಖ ಸ್ಪರ್ಧಿಗಳಾಗಿವೆ. ಅದೇ ಸಮಯದಲ್ಲಿ, ಸರ್ಕಾರಗಳನ್ನು ರಚಿಸುವಲ್ಲಿ ಮತ್ತು ಬದಲಾಯಿಸುವಲ್ಲಿ ರಾಜ್ಯ ಮಟ್ಟದ ಪಕ್ಷಗಳು ಸಹ ಪ್ರಮುಖ ಪಾತ್ರ ವಹಿಸಬಹುದು. ಏತನ್ಮಧ್ಯೆ, ರೋಡ್ ಶೋ ಸಮಯದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಅಧಿಕಾರಕ್ಕೆ ಬಂದರೆ ರಾಮನ ದೇವಾಲಯಕ್ಕೆ ಬೀಗ ಹಾಕುವುದುದಾಗಿ ಹೇಳಿದ ಅಖಿಲೇಶ್ ಯಾದವ್ ಚಪ್ಪಲಿ ಪೂಜೆ ಮಾಡಿದ ಜನ” ಎಂದಿದೆ.
Also Read: ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆಯೇ, ವೈರಲ್ ವೀಡಿಯೋ ಹಿಂದಿನ ಅಸಲಿಯತ್ತೇನು?
ಇದೇ ರೀತಿಯ ಸಂದೇಶ ವಾಟ್ಸಪ್‌ನಲ್ಲೂ ಹರಿದಾಡಿದ್ದು, ನ್ಯೂಸ್‌ಚೆಕರ್ ಗೆ ಲಭ್ಯವಾಗಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಸುದ್ದಿ ಎಂದು ಕಂಡುಕೊಂಡಿದೆ.
Fact Check/Verification
ರೋಡ್ ಶೋ ವೇಳೆ ಅಖಿಲೇಶ್ ಯಾದವ್ ಮೇಲೆ ಶೂ ಎಸೆದ ಹೆಸರಿನಲ್ಲಿ ವೈರಲ್ ಆದ ಈ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದ್ದೇವೆ. ವೀಡಿಯೋವನ್ನು ಝೂಮ್ ಮಾಡಿ ನೋಡಿದ ವೇಳೆ ಹೂವಿನ ಹಾರಗಳನ್ನು ಎಸೆದಿರುವುದನ್ನು ಗಮನಿಸಿದ್ದೇವೆ.
ಆ ಬಳಿಕ ವೀಡಿಯೊದಲ್ಲಿ ಬರೆಯಲಾದ @vishwasyadavauraiyawale ಇನ್ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಹುಡುಕಿದ್ದೇವೆ. ಈ ವೀಡಿಯೋವನ್ನು 2 ಮೇ 2024 ರಂದು ಈ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋದ ಶೀರ್ಷಿಕೆ ‘ಜೈ ಸಮಾಜವಾದ್, ಜೈ ಅಖಿಲೇಶ್’ ಎಂದಿದೆ. ಅಖಿಲೇಶ್ ಮೇಲೆ ಶೂ ಮತ್ತು ಚಪ್ಪಲಿಗಳನ್ನು ಎಸೆಯುವಂತಹ ಯಾವುದನ್ನೂ ಇಲ್ಲಿ ಬರೆಯಲಾಗಿಲ್ಲ. ಚಿತ್ರದ ಗುಣಮಟ್ಟದಲ್ಲಿ ಉತ್ತಮವಾಗಿರುವ ಈ ವೀಡಿಯೋವನ್ನು ಜೂಮ್ ಮಾಡಿದಾಗ, ಅಖಿಲೇಶ್ ಯಾದವ್ ಕಡೆಗೆ ಹೂವುಗಳು ಮತ್ತು ಹೂವಿನ ಹಾರಗಳನ್ನು ಎಸೆಯುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಇನ್ನು, ಅಖಿಲೇಶ್ ಯಾದವ್ ಅವರ ರೋಡ್ ಶೋ ವೇಳೆ ಚಪ್ಪಲಿ ಮತ್ತು ಶೂಗಳನ್ನು ಎಸೆದಿದ್ದಕ್ಕೆ ಸಂಬಂಧಿಸಿದಂತೆ ಅದನ್ನು ದೃಢೀಕರಿಸುವ ಯಾವುದೇ ಸುದ್ದಿಗಳು ನಮಗೆ ಸಿಗಲಿಲ್ಲ.
ತನಿಖೆಯ ನಂತರ, ನಾವು ಕೀವರ್ಡ್ ಸರ್ಚ್ ಗಳನ್ನು ಮಾಡಿದ್ದು ಏಪ್ರಿಲ್ 27, 2024 ರಂದು ಅಖಿಲೇಶ್ ಯಾದವ್ 40 ಕಿ.ಮೀ ರೋಡ್ ಶೋ ಮಾಡಿ ಕನೌಜ್ ತಲುಪಿದ ವರದಿಗಳನ್ನು ಗಮನಿಸಿದ್ದೇವೆ. ದೈನಿಕ್ ಭಾಸ್ಕರ್ ಪ್ರಕಟಿಸಿದ ವರದಿಯಲ್ಲಿ, ವೈರಲ್ ವೀಡಿಯೊ ಹೊಂದಿರುವ ಬಸ್ ಮತ್ತು ಅವರೊಂದಿಗೆ ನಿಂತಿರುವ ಮಹಿಳೆ ಕೂಡ ಕಂಡುಬರುತ್ತದೆ. ವರದಿಯಲ್ಲಿ ಎಲ್ಲಿಯೂ ಅಖಿಲೇಶ್ ಮೇಲೆ ಚಪ್ಪಲಿ ಮತ್ತು ಶೂಗಳನ್ನು ಎಸೆದಿರುವ ಬಗ್ಗೆ ಉಲ್ಲೇಖವಿಲ್ಲ.
ನ್ಯೂಸ್ 24 ನ ಅಧಿಕೃತ ಎಕ್ಸ್ ಹ್ಯಾಂಡಲ್ 2024 ರ ಮೇ 10 ರಂದು ವೀಡಿಯೋ ಒಂದನ್ನು ಪೋಸ್ಟ್ ಮಾಡಿದೆ. ‘ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಹೂವಿನ ಹಾರಗಳೊಂದಿಗೆ ಸ್ವಾಗತಿಸಲಾಯಿತು.’ ಎಂದಿದೆ. ಈ ಎಕ್ಸ್ ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.
Conclusion
ಕನ್ನೌಜ್ ನಲ್ಲಿ ರೋಡ್ ಶೋ ವೇಳೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮೇಲೆ ಶೂ ಮತ್ತು ಚಪ್ಪಲಿಗಳಲ್ಲ, ಹೂವಿನ ಹಾರಗಳನ್ನು ಎಸೆಯಲಾಗುತ್ತಿತ್ತು ಎಂಬುದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ.
Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆಯೇ?
Result: False
Our Sources
Instagram post by vishwasyadavauraiyawale, Dated: 2nd May 2024
Report published by Dainik Bhaskar Dated: 27th April 2024
X post by News 24, Dated: 10th May 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.