Authors
ಅಯೋಧ್ಯೆ ರಾಮ ಮಂದಿರದ ಕಾಣಿಕೆ ಹುಂಡಿ ಭರ್ತಿಯಾಗಿದೆ ಎಂದ ವೀಡಿಯೋ, ಅಲ್ವಾರ್ನಲ್ಲಿ ಹಿಂದೂಗಳ ಮನೆಗೆ ನುಗ್ಗಿ ಹೊಡೆದ ಮುಸ್ಲಿಮರು, ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಜನಸಾಗರ ಎಂದು ಪುರಿ ರಥಯಾತ್ರೆ ಫೊಟೋ, ಮೇರೆ ಘರ್ ರಾಮ್ ಆಯಾ ಹೈ ಭಜನೆಗೆ ಜಬಲ್ಪುರ ಜಿಲ್ಲಾಧಿಕಾರಿ ನೃತ್ಯ, ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬ ಕ್ಲೇಮ್ ಗಳು ಈವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ಸುಳ್ಳು ಎಂದು ಸಾಬೀತುಪಡಿಸಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಕಾಣಿಕೆ ಹುಂಡಿ ಭರ್ತಿಯಾಗಿದೆ ಎನ್ನುವ ಈ ವೀಡಿಯೋದ ಅಸಲಿಯತ್ತೇನು?
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕಾಣಿಕೆ ಹುಂಡಿ ಅರ್ಧ ದಿನದಲ್ಲೇ ಭರ್ತಿಯಾಗಿದೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನ್ಯೂಸ್‌ಚೆಕರ್ ತನಿಖೆ ವೇಳೆ ವೈರಲ್ ವೀಡಿಯೋ ರಾಜಸ್ಥಾನದ ಸವಾಲಿಯಾ ಸೇಠ್ ಕೃಷ್ಣ ದೇಗುಲದ್ದಾಗಿದೆ ಅಯೋಧ್ಯೆಯದ್ದಲ್ಲ ಎಂದು ಕಂಡುಹಿಡಿದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?
ಅಲ್ವಾರ್ ನಲ್ಲಿ ಹಿಂದೂಗಳ ಮನೆಗೆ ನುಗ್ಗಿ ಮುಸ್ಲಿಮರು ಹೊಡೆದರು ಎಂದು ಹಲ್ಲೆಯೊಂದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದಿರುವುದು ಸುಳ್ಳು. ಈ ವಿವಾದ ಒಂದ ಕುಟುಂಬದ ನಡುವಿನದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದ ಫೋಟೋ ಪುರಿ ಜಗನ್ನಾಥ ರಥಯಾತ್ರೆಯದ್ದು!
ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದು ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ನ್ಯೂಸ್‌ಚೆಕರ್ ಇದರ ಬಗ್ಗೆ ತನಿಖೆ ನಡೆಸಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸೇರಿದ ವಿದ್ಯಮಾನ ನಡೆದಿರುವುದು ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯದ್ದಾಗಿದೆ. ಇದು ಅಯೋಧ್ಯೆಯ ಫೊಟೋ ಅಲ್ಲ ಎಂಬುದು ಸಾಬೀತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
‘ಮೇರೆ ಘರ್ ರಾಮ್ ಆಯಾ ಹೈ’ ಭಜನೆಗೆ ನೃತ್ಯ ಮಾಡುತ್ತಿರುವ ಮಹಿಳೆ ಸಂಬಲ್ಪುರ ಜಿಲ್ಲಾಧಿಕಾರಿ ಅನನ್ಯಾ ದಾಸ್ ಅಲ್ಲ
‘ಮೇರೆ ಘರ್ ರಾಮ್ ಆಯೆ ಹೈ’ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಂಡುಬರುವ ಮಹಿಳೆ ಒಡಿಶಾದ ಸಂಬಲ್ಪುರದ ಜಿಲ್ಲಾಧಿಕಾರಿ ಅನನ್ಯಾ ದಾಸ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೂಲಂಕಷ ಶೋಧನೆ ನಡೆಸಿದಾಗ, ಸಂಬಲ್ಪುರ ಜಿಲ್ಲಾಧಿಕಾರಿ ಅನನ್ಯಾ ದಾಸ್ ಅಲ್ಲ, ಬದಲಾಗಿ ಕಂಟೆಂಟ್ ಕ್ರಿಯೇಟರ್ ಆಗಿರುವ ಮೃದುಲಾ ಮಹಾಜನ್ ಎಂಬವರಾಗಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಬೆಳ್ಳುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ ಅದರಿಂದ ಅಧಿಕ ರಕ್ತದೊತ್ತಡವನ್ನು ಎದುರಿಸಬಹುದು ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಕಡಿಮೆ ಇವೆ. ಆದ್ದರಿಂದ ಹೇಳಿಕೆ ಭಾಗಶಃ ತಪ್ಪು ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.