Authors
Claim
ಕೊಯಮತ್ತೂರಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ
Fact
ಕೊಯಮತ್ತೂರಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂದ ಮೆಸೇಜ್ ನಲ್ಲಿರುವ ಫೋಟೋಗಳು ಬೇರೆಯ ಪ್ರಕರಣದ್ದಾಗಿದೆ, ಕೊಯಮತ್ತೂರಿನಲ್ಲಿ ಅಂತಹ ಘಟನೆ ನಡೆದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ, ಪೊಲೀಸರು ಇಂತಹ ಪೋಸ್ಟ್ ಗಳ ವಿರುದ್ಧ ಕ್ರಮಕ್ಕೆ ಕೇಸು ದಾಖಲಿಸಿದ್ದಾರೆ
ಕೊಯಮತ್ತೂರಿನಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಮೆಸೇಜ್‌ನಲ್ಲಿ, “ಕೊಯಮತ್ತೂರಿನಲ್ಲಿ ಗರ್ಭನಿರೋಧಕ ಮಾತ್ರೆಯೊಂದಿಗೆ ಬಿರಿಯಾನಿಯನ್ನು ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ.. ಮುಸ್ಲಿಮರಿಗೆ ಮಾತ್ರ ಮಾತ್ರೆ ರಹಿತ ಬಿರಿಯಾನಿ ಪೂರೈಕೆ. ಮಾರಾಟ ಮಾಡುತ್ತಿದ್ದ ಮುಸ್ಲಿಂ” ಎಂದಿದೆ.
Also Read: ಕಾಂಗ್ರೆಸ್ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಮೆಸೇಜ್ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ಟಿಪ್ ಲೈನ್ ಗೆ (+91–9999499044) ಮನವಿ ಬಂದಿದ್ದು, ಅದನ್ನು ತನಿಖೆಗಾಗಿ ಸ್ವೀಕರಿಸಲಾಗಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಹೇಳಿಕೆಯೊಂದಿಗೆ ಲಗತ್ತಿಸಲಾದ ಫೋಟೋಗಳನ್ನು ಪರಿಶೀಲಿಸಿದ್ದೇವೆ.
ಫೋಟೋ 1
ಪೊಲೀಸರು ಮತ್ತು ಆರೋಪಿಗಳನ್ನು ನಿಲ್ಲಿಸಿರುವ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಉತ್ತರ ಪ್ರದೇಶದ ಬಿಜ್ನೋರ್ ಪೊಲೀಸರ ಜುಲೈ 11, 2019ರ ಎಕ್ಸ್ ಪೋಸ್ಟ್ ಒಂದು ಲಭ್ಯವಾಗಿದೆ. ಇದರಲ್ಲಿ, ಬಿಜ್ನೋರ್ ಪೊಲೀಸ್ ನ ಶೆರ್ಕೋಟ್ ಪೊಲೀಸ್ ಠಾಣೆಯ ಪೊಲೀಸರು ಮದರಸಾದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಪ್ರಕರಣದಲ್ಲಿ, 01 ಪಿಸ್ತೂಲು, 04 ಬಂದೂಕುಗಳು ಮತ್ತು ಅಪಾರ ಪ್ರಮಾಣದ ಕಾಟ್ರಿಡ್ಜ್‌ಗಳೊಂದಿಗೆ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದೆ. ಇದರಲ್ಲಿ ಪೋಸ್ಟ್ ಮಾಡಿರುವ ಫೋಟೋ ಮತ್ತು ವೈರಲ್ ಫೋಟೋಕ್ಕೆ ಸಾಮ್ಯತೆ ಇರುವುದನ್ನು ನಾವು ಕಂಡುಕೊಂಡಿದ್ದೇವೆ.
ಫೋಟೋ 2
ವೈರಲ್ ಮೆಸೇಜ್ ನಲ್ಲಿ ಕಂಡುಬಂದ ಮಾತ್ರೆಗಳ ಫೋಟೋದ ಬಗ್ಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದ ವೇಳೆ ಇದು ಶ್ರೀಲಂಕಾಕಕ್ಕೆ ಸಂಬಂಧ ಪಟ್ಟ ಫೊಟೋ ಎಂದು ಕಂಡುಬಂದಿದೆ. ಶ್ರೀಲಂಕಾದಲ್ಲಿ ಅಕ್ರಮವಾಗಿ ಮಾತ್ರೆಗಳನ್ನು ಸಾಗಾಟ ಮಾಡುತ್ತಿದ್ದ ತಂದೆ, ಮಗನನ್ನು ಬಂಧಿಸಲಾಗಿದ್ದು, ಅವರಿಂದ ಮಾತ್ರೆಗಳನ್ನು ವಶಪಡಿಸಲಾಗಿತ್ತು. ಈ ಪ್ರಕರಣ ಕೊಲಂಬೋದ ವಾಲ್ಫೆಂದಾಲ್ ಎಂಬಲ್ಲಿ ನಡೆದಿತ್ತು. ಆ ಹೊತ್ತಿನಲ್ಲಿ ವಶಪಡಿಸಿಕೊಂಡ ಮಾತ್ರೆಯ ಫೋಟೋ ತೆಗೆಯಲಾಗಿತ್ತು. 2019 ಮೇ 2ರ ಡೈಲಿ ಮಿರರ್ ಆನ್ ಲೈನ್ ಈ ಬಗ್ಗೆ ವರದಿ ಮಾಡಿದೆ. ವರದಿಯಲ್ಲಿ ವೈರಲ್ ಫೋಟೋ ಹೋಲುವ ಫೊಟೋ ಇರುವುದನ್ನು ನಾವು ಗಮನಿಸಿದ್ದೇವೆ.
ಫೋಟೋ 3
ಬಿರಿಯಾನಿಯನ್ನು ಹಿಡಿದುಕೊಂಡಿರುವ ಮುಸ್ಲಿಂ ವ್ಯಕ್ತಿಯ ಫೊಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಇದು Videosmylive 2016, ಜುಲೈ 1ರಂದು ಪೋಸ್ಟ್ ಮಾಡಿರುವ “Indian Muslim festival DUM BIRYANI Preparation for 30 People & STREET FOOD” ಯೂಟ್ಯೂಬ್ ವೀಡಿಯೋದ ಥಂಬ್ ನೈಲ್ ಆಗಿದೆ ಎಂದು ಕಂಡುಬಂದಿದೆ. ವೈರಲ್ ಫೊಟೋ ಮತ್ತು ಯೂಟ್ಯೂಬ್ ಥಂಬ್ ನೈಲ್ ಗೆ ಸಾಮ್ಯತೆ ಇದ್ದು, ಅದನ್ನು ಇಲ್ಲಿ ನೋಡಬಹುದು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರು ಸಿಟಿ ಪೊಲೀಸರು ಎಕ್ಸ್ ಬಳಕೆದಾರರ ವಿರುದ್ಧ ಕಾನೂನು ಕ್ರಮದ ನೀಡಿರುವುದು ಕಂಡುಬಂದಿದೆ. ಮಾರ್ಚ್ 2, 2020ರಂದು ಈ ಎಚ್ಚರಿಕೆ ನೀಡಿದ್ದರು.
ಇನ್ನು ಕೊಯಮತ್ತೂರಿನಲ್ಲಿ ಗರ್ಭನಿರೋಧಕ ಮಾತ್ರೆಯನ್ನು ಬಿರಿಯಾನಿಯಲ್ಲಿ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ “ಸುಳ್ಳು” ಪೋಸ್ಟ್ ಗಳ ಬಗ್ಗೆ 9 ಎಕ್ಸ್ ಹ್ಯಾಂಡಲ್ ಗಳ ವಿರುದ್ಧ ಕೊಯಮತ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮೇ 21, 2023ರಂದು ದಿ ಹಿಂದೂ ವರದಿ ಮಾಡಿದೆ.
ಇದೇ ರೀತಿಯ ವರದಿ ಮೇ 22, 2023ರ ದಿ ನ್ಯೂಸ್ ಮಿನಿಟ್ ನಲ್ಲಿಯೂ ಕಂಡುಬಂದಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಕೊಯಮತ್ತೂರಿನಲ್ಲಿ ಗರ್ಭನಿರೋಧಕ ಮಾತ್ರೆಯೊಂದಿಗೆ ಬಿರಿಯಾನಿಯನ್ನು ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ನೀಡಲಾದ ಫೋಟೋಗಳಿಗೂ, ಹೇಳಿಕೆಗೂ ಸಂಬಂಧ ಇಲ್ಲದೇ ಇರುವುದು ಗೊತ್ತಾಗಿದೆ. ಆದ್ದರಿಂದ ಇದು ಸುಳ್ಳು ಹೇಳಿಕೆ ಎಂದು ಕಂಡುಬಂದಿದೆ.
Also Read: ಈ ಬಾರಿ ಲೋಕಸಭೆಗೆ 110 ಮಂದಿ ಮುಸ್ಲಿಂ ಸಂಸದರು ಚುನಾಯಿತರಾಗಿದ್ದಾರೆ ಎಂಬ ಹೇಳಿಕೆ ವೈರಲ್
Result: False
Our Sources
Tweet By Bijnor Police Dated: July 11, 2019
Report By Daily Mirror online, Dated: May 2, 2019
YouTube Video By Videosmylive, Dated: July 1, 2016
Tweet By Coimbatore City police, Dated: March 2, 2020
Report By The Hindu, Dated: May 21, 2023
Report By The News Minute, May 22, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.