Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನಿರ್ಮಲಾ ಸೀತಾರಾಮನ್ ಹೂಡಿಕೆ ಯೋಜನೆಗೆ ಅನುಮೋದನೆ ನೀಡಿದ್ದಾರೆ
ನಿರ್ಮಲಾ ಸೀತಾರಾಮನ್ ಹೂಡಿಕೆ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದ ಈ ವೀಡಿಯೋ ನಕಲಿಯಾಗಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರ ನಡೆಸುವ ಹೂಡಿಕೆ ವೇದಿಕೆಯನ್ನು ಅನುಮೋದಿಸುತ್ತಿದ್ದಾರೆಂದು ಹೇಳಲಾದ 3 ನಿಮಿಷ 33 ಸೆಕೆಂಡುಗಳ “CNN-News18” ವರದಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ . ವೀಡಿಯೋ ಪ್ರಕಾರ, ಯೋಜನೆಯಲ್ಲಿ ₹21,000 ಹೂಡಿಕೆ ಮಾಡುವ ಪ್ರತಿಯೊಬ್ಬ ನಾಗರಿಕನು ಮೊದಲ ತಿಂಗಳಲ್ಲಿ ₹15,00,000 ಪಡೆಯುತ್ತಾನೆ ಎಂದಿದೆ.
ಈ ವೀಡಿಯೋ ನಮ್ಮ ವಾಟ್ಸಾಪ್ ಟಿಪ್ಲೈನ್ (+91-9999499044) ನಲ್ಲಿಯೂ ಬಂದಿದ್ದು, ಬಳಕೆದಾರರು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ.
ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಯೇ?
“Nirmala Sitharaman investment platform” ಎಂದು ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ ಯಾವುದೇ ವಿಶ್ವಾಸಾರ್ಹ ಸುದ್ದಿಗಳು ಕಂಡುಬಂದಿಲ್ಲ. ವೀಡಿಯೋದಲ್ಲಿ ತುಟಿ ಚಲನೆ ಸಂಪೂರ್ಣವಾಗಿ ಅಸ್ವಾಭಾವಿಕವಾಗಿದ್ದು, ಇದು ಧ್ವನಿಯೊಂದಿಗೆ ತಾಳೆಯಾಗದೆ ಇರುವುದನ್ನು ನೋಡಿದ್ದೇವೆ. ಇದು ವೀಡಿಯೋ ಎಐ ನಿಂದ ಮಾಡಲ್ಪಟ್ಟಿದ್ದೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.
ಅನಂತರ ನಾವು ಸೀತಾರಾಮನ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫೆಬ್ರವರಿ 1, 2025 ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಬಳಿಕದ ಪತ್ರಿಕಾಗೋಷ್ಠಿಯ ಡಿಡಿ ನ್ಯೂಸ್ ಲೈವ್-ಸ್ಟ್ರೀಮ್ ಲಭ್ಯವಾಗಿದೆ. 49:44 ನಿಮಿಷದ ಈ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಹಂತದಲ್ಲಿ ನಿರ್ಮಲಾ ಅವರು ಯಾವುದೇ ಹೂಡಿಕೆ ಅಥವಾ ವ್ಯಾಪಾರಿ ವೇದಿಯನ್ನು ಉಲ್ಲೇಖಿಸಿಲ್ಲ. ಇದು ವೈರಲ್ ವೀಡಿಯೋವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಎಂದು ಗೊತ್ತಾಗಿದೆ.
ಮುಂದೆ ನ್ಯೂಸ್ಚೆಕರ್ ಈ ವೀಡಿಯೋವನ್ನು ಹೈವ್ ಮಾಡರೇಶನ್, ಅಂದರೆ AI-ಕಂಟೆಂಟ್ ಡಿಟೆಕ್ಷನ್ ಟೂಲ್ ಮೂಲಕ ಹಾಕಿ ನೋಡಿದೆ. ಇದು “99.9% ರಷ್ಟು AI-ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯಿದೆ” ಎಂದು ಅದು ಕಂಡುಹಿಡಿದಿದೆ. ಅನಂತರ ನಾವು ಧ್ವನಿ AI ಸಂಶೋಧನೆ ಮತ್ತು ನಿಯೋಜನಾ ಕಂಪನಿಯಾದ ElevenLabs ಮೂಲಕ ಆಡಿಯೋವನ್ನು ಪರಿಶೀಲಿಸಿದ್ದೇವೆ. ಅದು ಕೂಡ ಧ್ವನಿಯನ್ನು ಉಂಟುಮಾಡಿದ 98% ರಷ್ಟು ಸಂಭವನೀಯತೆ ಇದೆ ಎಂದು ಹೇಳಿದೆ. ನಾವು ಧ್ವನಿಯನ್ನು Resemble AI ನ Deepfake Detector ಮೂಲಕವೂ ನೋಡಿದ್ದೇವೆ, ಇದು ವೈರಲ್ ವೀಡಿಯೊ ಡೀಪ್ಫೇಕ್ ಎಂದು ಮತ್ತಷ್ಟು ದೃಢಪಡಿಸಿದೆ.


ನಿರ್ಮಲಾ ಸೀತಾರಾಮನ್ ಅವರು ಹೂಡಿಕೆ ಯೋಜನೆಯನ್ನು ಪ್ರಚಾರ ಮಾಡುತ್ತಿರುವ ವೈರಲ್ ಆಗಿರುವ ವೀಡಿಯೋ ನಕಲಿ ಎಂದು ಕಂಡುಬಂದಿದೆ.
Also Read: ಮಹಾಕುಂಭ ಮೇಳ 2025: ಎಐನಿಂದ ಮಾಡಿದ ಸೆಲೆಬ್ರಿಟಿಗಳ ಫೋಟೋಗಳನ್ನು ನಿಜವಾದ್ದೆಂದು ಹಂಚಿಕೆ
Our Sources
YouTube Video By DD News , Dated: February 1, 2025
Hive Moderation tool
ElevenLabs AI voice detection tool
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)