Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ಚಪ್ಪಲಿ ಹಾರ ಹಾಕಿ ಅವಮಾನಿಸಿದರು
ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ಚಪ್ಪಲಿ ಹಾರ ಹಾಕಿ ಅವಮಾನಿಸಿದರು ಎನ್ನುವುದು ನಿಜವಲ್ಲ, ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯೊಬ್ಬನನ್ನು ಥಳಿಸಿದ ಪ್ರಕರಣ ಇದಾಗಿದೆ
ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ನೀಡಿದ ಗೌರವ ಎಂಬ ಹೇಳಿಕೆಯೊಂದಿಗೆ, ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ವ್ಯಕ್ತಿಯೊಬ್ಬರಿಗೆ ಚಪ್ಪಲಿ ಹಾರ ಹಾಕಿದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಈ ಕುರಿತ ಪೋಸ್ಟ್ ಕಂಡುಬಂದಿದೆ. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ ಇದು ದಿಕ್ಕು ತಪ್ಪಿಸುವ ಹೇಳಿಕೆಯಾಗಿದೆ. ಚಪ್ಪಲಿ ಹಾರ ಹಾಕಿಸಿಕೊಂಡ ವ್ಯಕ್ತಿ ಹಿಂದೂ ಅಲ್ಲ, ಶಿಕ್ಷಕನೂ ಆಗಿಲ್ಲ. ಪ್ರವಾದಿ ಕುರಿತ ಅವಹೇಳನಕಾರಿ ಹೇಳಿಕೆಗೆ ಚಪ್ಪಲಿ ಹಾರ ಹಾಕಿದ ಪ್ರಕರಣವಾಗಿದೆ ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಶೋಧ ನಡೆಸಿದ್ದೇವೆ.
Also Read: ತಿರುಪತಿ ದೇಗುಲದ ಹುಂಡಿ ಹಣ ಕಳವು ಎಂದು ಬೆಂಗಳೂರು ಗಾಳಿ ಆಂಜನೇಯ ದೇಗುಲದ ವೀಡಿಯೋ ವೈರಲ್
ಜೂನ್ 15, 2025ರ kopotakkhonews ವರದಿಯ ಪ್ರಕಾರ, ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ ನಿವೃತ್ತ ಆರೋಗ್ಯಾಧಿಕಾರಿ ಮೇಲೆ ಹಲ್ಲೆ ನಡೆದಿದೆ. ಆತನನ್ನು ಅಹ್ಮದ್ ಅಲಿ ಎಂದು ಗುರುತಿಸಲಾಗಿದೆ ಎಂದಿದೆ. ಚಹಾ ಅಂಗಡಿಯೊಂದರಲ್ಲಿ ಕೂತು ಆತ ಹೇಳಿಕೆ ನೀಡಿದ್ದು, ಈ ವೇಳೆ ಉದ್ರಿಕ್ತ ಗುಂಪು ಆತನಿಗೆ ಥಳಿಸಿದೆ. ಗಾಯಗೊಂಡ ಆತನನ್ನು ರಕ್ಷಿಸಲಾಗಿದೆ ಎಂದಿದೆ.

ಜೂನ್ 15, 2025ರ Dhakatimes 24 ವರದಿಯ ಪ್ರಕಾರ, ಈ ಘಟನೆ ಬಾಂಗ್ಲಾದೇಶದ ರಾಜ್ಬರಿ ಜಿಲ್ಲೆಯ ಬಲಿಯಕಂಡಿ ಪ್ರದೇಶದಲ್ಲಿ ವರದಿಯಾಗಿದೆ. ಬಲಿಯಕಂಡಿ ಪೊಲೀಸ್ ಠಾಣಾಧಿಕಾರಿ (OC) ಮೊಹಮ್ಮದ್ ಜಮಾಲ್ ಉದ್ದೀನ್ ಅವರು ನೀಡಿರುವ ಮಾಹಿತಿಯಂತೆ, “ಬೆಳಗ್ಗೆ ಬೆರುಲಿ ಬಜಾರ್ನಲ್ಲಿರುವ ಟೀ ಅಂಗಡಿಯಲ್ಲಿ ಅಹ್ಮದ್ ಅಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸುದ್ದಿ ಆ ಪ್ರದೇಶದಲ್ಲಿ ಹರಡಿದಾಗ, ಉದ್ರಿಕ್ತ ಗುಂಪೊಂದು ಮಧ್ಯಾಹ್ನ ಅವರನ್ನು ಕಟ್ಟಿಹಾಕಿ ಥಳಿಸಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಆ ವ್ಯಕ್ತಿಯನ್ನು ಸಹ ರಕ್ಷಿಸಲಾಯಿತು” ಎಂದಿದೆ. ಇದೇ ವರದಿಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ನಿವೃತ್ತ ಸಮುದಾಯ ವೈದ್ಯಾಧಿಕಾರಿ ಅಹ್ಮದ್ ಅಲಿ ಅವರಾಗಿದ್ದಾರೆ ಎಂದಿದೆ.

ಜೂನ್ 16, 2025ರಂದು Daily Kholachokh Digital ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವರದಿಯಲ್ಲಿ “ಪವಿತ್ರ ಪ್ರವಾದಿ (ಸ.ಅ) ರವರ ವಿರುದ್ಧ ಅವಮಾನ, ವೈದ್ಯರ ಮೇಲೆ ಗುಂಪು ಹಲ್ಲೆ” ಎಂದಿದೆ.
ಆದ್ದರಿಂದ ಈ ಸಾಕ್ಷ್ಯಗಳ ಪ್ರಕಾರ, ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ನೀಡಿದ ಗೌರವ ಎನ್ನುವ ಹೇಳಿಕೆ ದಾರಿ ತಪ್ಪಿಸುವ ಹೇಳಿಕೆಯಾಗಿದ್ದು, ಪ್ರವಾದಿ ಅವಹೇಳನ ಮಾಡಿದ ವ್ಯಕ್ತಿಯೊಬ್ಬರಿಗೆ ಗುಂಪು ಥಳಿಸಿದ ವಿದ್ಯಮಾನ ಇದಾಗಿದೆ ಎಂದು ಗೊತ್ತಾಗಿದೆ.
Also Read: ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Our Sources
Report By kopotakkhonews, Dated: June 15, 2025
Report By Dhakatimes 24, Dated: June 15, 2025
YouTube Video By Daily Kholachokh Digital, Dated: June 16, 2025
Ishwarachandra B G
November 27, 2025
Ishwarachandra B G
November 22, 2025
Tanujit Das
November 17, 2025