Authors
Claim
ಸೀತಾದೇವಿಯ ಜನಕಪುರಿಯಿಂದ ಅಯೋಧ್ಯಗೆ ಯಾತ್ರೆ ನಡೆದಿದೆ
Fact
ಇದು ಜನಕಪುರಿಯಿಂದ ನಡೆದ ಯಾತ್ರೆಯಲ್ಲ ಬದಲಾಗಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಲಶ ಯಾತ್ರೆಯಾಗಿದೆ
ಸೀತಾದೇವಿಯ ಊರು ನೇಪಾಳದ ಜನಕಪುರಿಯಿಂದ ಅಯೋಧ್ಯೆಗೆ ಸೀತಾದೇವಿಯ ಸೀರೆ, ಆಭರಣಗಳನ್ನು ಯಾತ್ರೆಯ ಮೂಲಕ ಜನರು ತರುತ್ತಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ತನ್ನ ತವರು ಮನೆಯಿಂದ (ಜಾನಕ್ ಪುರಿ, ನೇಪಾಳ)ಅಯೋಧ್ಯೆಗೆ ಮಾತೇ ಸಿತಾದೇವಿಯ ಸೀರೆ, ಬಹುಮಾನಗಳನ್ನು ತೆಗೆದುಕೊಂಡು ಬರುತ್ತಿರುವ ಜಾನಕ್ ಪುರಿಯ ನಿವಾಸಿಗಳು. ರಾಮನ ಹಬ್ಬಕ್ಕೆ ಕ್ಷಣಗಣನೆ.. “ ಎಂದಿದೆ.
Also Read: ಅಯೋಧ್ಯೆಯ ರಾಮ ಮಂದಿರ ಎಂದು ಗುಜರಾತಿನ ದೇಗುಲ ವೀಡಿಯೋ ವೈರಲ್
ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಹೇಳಿಕೆ, ಈ ವೀಡಿಯೋ ಗ್ರೇಟರ್ ನೋಯ್ಡಾದ ಕಲಶ ಯಾತ್ರೆಗೆ ಸಂಬಂಧಿಸಿದ್ದು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಜುಲೈ 9, 2023ರ ನವದೀಪ್ ವ್ಲಾಗ್ಸ್ ಯೂಟ್ಯೂಬ್ ಚಾನೆಲ್ ಹಂಚಿಕೊಂಡ ಶಾರ್ಟ್ಸ್ ನಲ್ಲಿ “ಗ್ರೇಟರ್ ನೋಯ್ಡಾ ಕಲಶ್ ಯಾತ್ರಾ” ಹೆಸರಿನಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದರ ಬಗ್ಗೆ ನಾವು ಹೆಚ್ಚಿನ ಶೋಧ ನಡೆಸಿದ್ದು ಜುಲೈ 9, 2023ರ ಈಟಿವಿ ಭಾರತ್ ನ ವರದಿ ಲಭ್ಯವಾಗಿದೆ. “ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಭಾಗವತ ಕಥೆಗೂ ಮೊದಲು ಗ್ರೇಟರ್ ನೋಯ್ಡಾದಲ್ಲಿ ಕಲಶಯಾತ್ರೆ ನಡೆಯಿತು” ಎಂದಿದೆ.
ಜುಲೈ 9 2023ರ ದೈನಿಕ್ ಭಾಸ್ಕರ್ ವರದಿ ಪ್ರಕಾರ “ಧೀರೇಂದ್ರ ಶಾಸ್ತ್ರಿ ಅವರ ಶ್ರೀಮದ್ಭಾಗವತ ಕಥೆಗೂ ಮೊದಲೇ 3 ಕಿ.ಮೀ. ಕಲಶ ಯಾತ್ರೆ ನಡೆಯಿತು” ಎಂದಿದೆ.
ಈ ವರದಿಯಲ್ಲಿರುವ ಚಿತ್ರಗಳು ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ.
Also Read: ಕರಡಿಗಳ ಹಿಂಡು ಅಯೋಧ್ಯೆ ತಲುಪಿದೆ ಎಂದ ವೈರಲ್ ವೀಡಿಯೋ ಮಧ್ಯಪ್ರದೇಶದ್ದು!
Conclusion
ಈ ಸತ್ಯಶೋಧನೆಯ ಪ್ರಕಾರ, ಇದು ಸೀತಾದೇವಿಯ ಊರು ನೇಪಾಳದ ಜನಕಪುರಿಯಿಂದ ಅಯೋಧ್ಯೆಗೆ ಬಂದ ಯಾತ್ರೆಯಲ್ಲ ಬಲದಾಗಿ ಕಳೆದ ವರ್ಷ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಲಶ ಯಾತ್ರೆ ಎಂದು ತಿಳಿದುಬಂದಿದೆ.
Result: False
Our Sources
YouTube shorts By Navadeep Vlogs, Dated: July 9, 2023
Report By Etv Bharat, Dated: July 9, 2023
Report By Dainik Bhaskar, Dated: July 9, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.