Sunday, April 27, 2025
ಕನ್ನಡ

Fact Check

Fact Check: ವಕ್ಫ್‌ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದರೇ, ನಿಜ ಏನು?

Written By Ishwarachandra B G, Edited By Pankaj Menon
Nov 11, 2024
banner_image

Claim
ವಕ್ಫ್‌ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದರು

Fact
ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದ ವೀಡಿಯೋ ಇದಲ್ಲ, 2020ರಲ್ಲಿ ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಅವರ ವಿರುದ್ಧ ಜಮೀರ್ ಅವರು ಪ್ರತಿಭಟನೆ ನಡೆಸಿದ ವೀಡಿಯೋ ಇದಾಗಿದೆ

ರೈತರು ಮತ್ತು ಇತರ ಆಸ್ತಿಗಳನ್ನು ವಕ್ಫ್‌ ಗೆ ಮ್ಯೂಟೇಶನ್ ಮಾಡುವ ಕುರಿತು ರಾಜ್ಯಾದ್ಯಂತ ವಿವಾದ ಭುಗಿಲೆದ್ದ ಬೆನ್ನಲ್ಲೇ, ರಾಜ್ಯದ ವಕ್ಫ್‌ ಸಚಿವ ಜಮೀರ್ ಅಹಮದ್ ಅವರಿಗೆ ರೈತರು ಘೇರಾವ್ ಹಾಕಿ, ಪ್ರತಿಭಟನೆಗಳನ್ನು ಸಲ್ಲಿಸಿದ್ದಾರೆ ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ರೈತರ ಏಟು ಹೇಗಿರುತ್ತೆ ಅಂತ ಜಮೀನು ಕಳ್ಳ ಜಮೀರಾನನಿಗೆ ಇವತ್ ಗೊತ್ತಾಯಿತು” ಎಂದಿದೆ. ಇದರೊಂದಿಗೆ 1.32 ನಿಮಿಷಗಳ ವೀಡಿಯೋ ಲಗತ್ತಿಸಲಾಗಿದ್ದು, ಜಮೀರ್ ಅಹಮದ್‌ ಅವರನ್ನು ತಳ್ಳಾಡುತ್ತಿರುವ ದೃಶ್ಯ, ಪೊಲೀಸರು ವಶಕ್ಕೆ ಪಡೆಯುವಂತೆ ಕಾಣುವ ದೃಶ್ಯವಿದೆ.

Also Read: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ

Fact Check: ವಕ್ಫ್‌ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದರೇ, ನಿಜ ಏನು?

ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಹೇಳಿಕೆ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಮೊದಲು ಜಮೀರ್ ಅಹಮದ್ ಅವರಿಗೆ ಘೇರಾವ್, ಪ್ರತಿಭಟನೆ ಎಂಬ ಕುರಿತ ಸುದ್ದಿಗಳನ್ನು ಹುಡುಕಾಡಿದೆ. ಆದರೆ ಯಾವುದೇ ಸುದ್ದಿಗಳು ಕಂಡುಬಂದಿಲ್ಲ. ಆ ಬಳಿಕ “ಜಮೀರ್ ಅಹ್ಮದ್ ಪೊಲೀಸ್ ವಶಕ್ಕೆ”  ಎಂಬ ಕೀವರ್ಡ್ ನ್ನು ಹಾಕಿ ಗೂಗಲ್ ನಲ್ಲಿ ಶೋಧಿಸಿದ್ದು, ವರದಿಗಳು ಲಭ್ಯವಾಗಿವೆ.

ಜನವರಿ 13, 2020ರಂದು ಪ್ರಜಾಪ್ರಗತಿ ವರದಿಯಲ್ಲಿ, “ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್  ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹಿಂದೆ ಮಾಡಿದ್ದ ಆಕ್ಷೇಪಾರ್ಹ ಭಾಷಣ ಖಂಡಿಸಿ‌ ಅವರ ಮನೆ‌ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ಜಮೀರ್ ಅಹ್ಮದ್ ಖಾನ್ ಅವರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು ವಶಕ್ಕೆ ಪಡೆದಿದ್ದಾರೆ.” ಎಂದಿದೆ.

ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಜನವರಿ 13, 2020ರಂದು ಟಿವಿ5 ಕನ್ನಡ ಯೂಟ್ಯೂಬ್‌ ಚಾನೆಲ್‌ ನಲ್ಲಿ ಪೊಲೀಸರ ವಶಕ್ಕೆ ಜಮೀರ್ ಅಹ್ಮದ್ ಶೀರ್ಷಿಕೆಯಲ್ಲಿ ವೀಡಿಯೋ ಪ್ರಕಟಿಸಲಾಗಿದ್ದು, ಸಿಎಎ ಕುರಿತಂತೆ ಮುಸ್ಲಿಮರ ವಿರುದ್ಧ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಯವರ ಆಕ್ಷೇಪಾರ್ಹ ಮಾತುಗಳನ್ನು ಖಂಡಿಸಿ ಜಮೀರ್ ಅವರು ಬಳ್ಳಾರಿಯಲ್ಲಿ ಅವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದು ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ. ಈ ವೀಡಿಯೋದಲ್ಲಿ ತೋರಿಸಲಾದ ದೃಶ್ಯಾವಳಿಗಳು ವೈರಲ್‌ ದೃಶ್ಯಕ್ಕೆ ಹೋಲಿಕೆಯಾಗುವುದನ್ನು ನಾವು ಗಮನಿಸಿದ್ದೇವೆ.

(84) ಪೊಲೀಸರ ವಶಕ್ಕೆ ಜಮೀರ್ ಅಹ್ಮದ್​ | Zameer Ahmed Khan | MLA Somashekar Reddy | Bellary | TV5 Kannada – YouTube

ಜನವರಿ 13, 2020ರ ಸುವರ್ಣ ನ್ಯೂಸ್‌ ಯೂಟ್ಯೂಬ್‌ ವೀಡಿಯೋದಲ್ಲಿ Zameer Ahmed Khan Detained By Ballari Cops For Trying To Stage Protest Against Somashekar Reddy ಶೀರ್ಷಿಕೆಯಡಿ, ಸೋಮಶೇಖರ ರೆಡ್ಡಿ ಅವರ ಬಳ್ಳಾರಿ ಮನೆ ಎದುರು ಜಮೀರ್ ಅವರು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ.

Zameer Ahmed Khan Detained By Ballari Cops For Trying To Stage Protest Against Somashekar Reddy

ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.

ಈ ವಿಚಾರಕ್ಕೆ ಸಂಬಂಧಿಸಿ ನಾವು ವಕ್ಫ್‌, ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಜಮೀರ್ ಅಹ್ಮದ್‌ ಅವರ ಮಾಧ್ಯಮ ಸಲಹೆಗಾರರಾದ
ಎಸ್. ಲಕ್ಷೀನಾರಾಯಣ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, ಸಚಿವ ಜಮೀರ್ ಅವರ ಈ ವೀಡಿಯೋ ಹಳೆಯದಾಗಿದ್ದು, 2020ರದ್ದಾಗಿದೆ. ಸಿಎಎ ಕುರಿತಾಗಿ ಮುಸ್ಲಿಮರ ಬಗ್ಗೆ ಸೋಮಶೇಖರ ರೆಡ್ಡಿ ಅವರ ಆಕ್ಷೇಪಾರ್ಹ ವಿರುದ್ಧ ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದ್ದು ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆ ಪ್ರಕಾರ, ರೈತರು ಜಮೀರ್ ಅಹ್ಮದ್‌ ಅವರಿಗೆ ಘೇರಾವ್ ಹಾಕಿದ್ದಾರೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ತಪ್ಪಾಗಿದ ಎಂದು ಗೊತ್ತಾಗಿದೆ.

Also Read: ಟ್ರಂಪ್‌ ವಿಜಯೋತ್ಸವ ಭಾಷಣದಲ್ಲಿ ಜನರು ‘ಮೋದಿ- ಮೋದಿ’ ಘೋಷಣೆ ಕೂಗಿದ್ದಾರೆಯೇ?

Result: False

Our Sources
Report By Prajapragathi, Dated: January 13, 2020

YouTube Video By Tv5 Kannada, Dated: January 13, 2020

YouTube Video By Suvarna News, Dated: January 13, 2020

Conversation with S.Lakshaminarayana, Media Advisor for Minister of Housing, Waqf and Minority Affairs B Z Zameer Ahmed Khan


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,944

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.