Fact Check: ಡಾರ್ಕ್ ಚಾಕಲೆಟ್ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತಾ?

ಚಾಕಲೆಟ್‌ ತಿಂದರೆ ಮಕ್ಕಳಾಗುತ್ತವೆ ಎನ್ನುವುದು ಸತ್ಯವೇ

Claim

ಡಾರ್ಕ್‌ ಚಾಕಲೆಟ್‌ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ಹರಿದಾಡಿದೆ.

ಈ ಕುರಿತ ಕ್ಲೇಮ್‌ ಹೀಗಿದೆ. “ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆಯಂತೆ!” ಎಂದು ಹೇಳಲಾಗಿದೆ.

ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ತಿಳಿದುಬಂದಿದೆ.

Fact

ಚಾಕಲೆಟ್‌ನಿಂದ ಗರ್ಭಧಾರಣೆಗೆ ಸಹಾಯವಾಗುತ್ತೆ. ಅದನ್ನು ತಿಂದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎಂಬುದಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ಆದರೆ ಗರ್ಭಧಾರಣೆಯಾಗಿದ್ದಾಗ ಮಿತವಾದ ಪ್ರಮಾಣದಲ್ಲಿ ಚಾಕಲೆಟ್‌ ತಿನ್ನುವುದಕ್ಕೆ ಅಡ್ಡಿಯಿಲ್ಲ ಎಂದಿದೆ.

2010ರ ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ ಚಾಕಲೆಟ್‌ ತಿನ್ನುವುದರಿಂದ ಪ್ರಿಎಕ್ಲಾಂಪ್ಸಿಯ ಮತ್ತು ಗರ್ಭಧಾರಣೆ ಸಂದರ್ಭದ ಬಿಪಿಯ ಅಪಾಯವನ್ನು ಕಡಿಮೆ ಮಾಡುತ್ತದೆ. 2018ರ ಒಂದು ಅಧ್ಯಯನದ ಪ್ರಕಾರ, 8 ದಿನಗಳ ಕಾಲ ನಿತ್ಯ ಡಾರ್ಕ್ ಚಾಕೊಲೆಟ್‌ ಸೇವನೆಯು ಪ್ಲಸಿಬೊ ಗುಂಪುಗಳಿಗೆ ಹೋಲಿಸಿದರೆ, ಮೆದುಳಿನ ಕ್ರಿಯೆಯಲ್ಲಿ ಕೆಲವೊಂದಷ್ಟು ಸುಧಾರಣೆಗೆ ಕಾರಣವಾಗಿದ್ದನ್ನು ಕಂಡುಹಿಡಿಯಲಾಗಿದೆ. 2016ರ ಇನ್ನೊಂದು ಅಧ್ಯಯನದ ಪ್ರಕಾರ ಚಾಕೊಲೆಟ್‌ಗಳಲ್ಲಿರುವ ಫ್ಲೇವನಾಲ್ಸ್‌ಗಳು ಭ್ರೂಣಕ್ಕೆ ರಕ್ತಸಂಚಾರದವನ್ನು ಹೆಚ್ಚಿಸಿ, ಒಟ್ಟಾರೆಯಾಗಿ ಗರ್ಭಾವಸ್ಥೆಯ ಅನುಭವನ್ನು ಉತ್ತಮಗೊಳಿಸುತ್ತದೆ.

Also Read: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆಯೇ?

ಒಂದು ಹಳೆಯ ಅಧ್ಯಯನದ ಪ್ರಕಾರ, ಚಾಕಲೆಟ್‌ ತಿನ್ನುವುದು ಶಿಶುಗಳಲ್ಲಿ ಧನಾತ್ಮಕ ಪ್ರಭಾವವನ್ನು ಉಂಟುಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ 2014ರ ಇನ್ನೊಂದು ಅಧ್ಯಯನವು ಮೂರನೇ ತ್ರೈಮಾಸಿಕದಲ್ಲಿ ಚಾಕಲೆಟ್‌ ತಿನ್ನುವುದು ಗರ್ಭಾವಸ್ಥೆಯ ಕೊನೆಯಲ್ಲಿ ಮಗುವಿನ ಡಕ್ಟಸ್‌ ಆರ್ಟೆರಿಯುಸಸ್‌ (ಡಿಎ) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಡಿಎ ಮಗುವಿನ ಬೆಳವಣಿಗೆಗೆ ಪ್ರಮುಖವಾದ ಭ್ರೂಣದ ರಕ್ತನಾಳವಾಗಿದೆ. ಗರ್ಭಾವಸ್ಥೆಯ ಈ ಸಂದರ್ಭದಲ್ಲಿ ಮಹಿಳೆಯರು ಚಾಕೊಲೇಟ್ ಸೇವಿಸುವಾಗ ಜಾಗರೂಕರಾಗಿರಬೇಕು ಎಂದು ಈ ಲೇಖನವು ಸೂಚಿಸುತ್ತದೆ.

ಈ ಸತ್ಯಶೋಧನೆಯ ಪ್ರಕಾರ, ಚಾಕೊಲೆಟ್‌ ತಿಂದರೆ ಗರ್ಭಧಾರಣೆಗೆ ಸಹಾಯಮಾಡುತ್ತದೆ, ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆ ಎನ್ನುವುದು ತಪ್ಪಾಗಿದೆ.

Result: False

Our Sources
Does Chocolate Intake During Pregnancy Reduce the Risks of Preeclampsia and Gestational Hypertension? – ScienceDirect

Effects of Dark Chocolate Intake on Brain Electrical Oscillations in Healthy People – PMC (nih.gov)

32: High-flavanol chocolate to improve placental function and to decrease the risk of preeclampsia: a double blind randomized clinical trial – American Journal of Obstetrics & Gynecology (ajog.org)

Sweet babies: chocolate consumption during pregnancy and infant temperament at six months – ScienceDirect

Frontiers | Deleterious effects of maternal ingestion of cocoa upon fetal ductus arteriosus in late pregnancy (frontiersin.org)

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.