Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ಸಿರಗುಪ್ಪದಲ್ಲಿ ನಡೆದ ಘಟನೆ
Fact
ವೈರಲ್ ಚಿತ್ರವಿರುವ ಮೆಸೇಜ್ ಸುಮಾರು ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಈಗಿನ ಸಂದರ್ಭದ್ದಲ್ಲ
ತ್ರಿವರ್ಣ ಧ್ವಜ ಮಧ್ಯೆ ಮಸೀದಿ ಚಿತ್ರ. ಇಂತಹ ಬಾವುಟ ಹಾರಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತ ಪೋಸ್ಟ್ಗಳು ಫೇಸ್ಬುಕ್ ಮತ್ತು ವಾಟ್ಸಾಪ್ ಮೆಸೇಜ್ಗಳಲ್ಲಿ ಕಂಡುಬಂದಿದೆ. ಈ ಮೆಸೇಜ್ನಲ್ಲಿ ಹೀಗೆ ಹೇಳಲಾಗಿದೆ. “ಸಿರಗುಪ್ಪದಲ್ಲಿ ನಡೆದ ಘಟನೆ ಅಶೋಕ ಚಕ್ರದ ಬದಲು ಮಸೀದಿಯ ಚಿತ್ರ ಬಂದಾಯ್ತು ಇನ್ನು ಏನೇನು ಕಾದಿದೆಯೋ ಏನೋ ನೀವು ಮಾತ್ರ 2 ರು ಬೆಲೆಯೇರಿಕೆ ಅಂತ ಬೊಬ್ಬೆ ಹೊಡೀತಾ ಇರಿ ಅತ್ತ ಕಡೆ ಅವರ ಬಿರಿಯಾನಿ ಬೇಯಿಸಿಕೊಳ್ತಾ ಹೋಗ್ತಾರೆ. ಈ ಪೋಸ್ಟ್ ಸರ್ರಿಯಾಗಿ ಶೇರ್ ಆದ್ರೆ ಎರಡುಮುರು ದಿನದಲ್ಲಿ ಏನಾದ್ರು ಆಗಬಹುದು ಪ್ರಯತ್ನ ಮಾಡಿ. ನೋಡಿಯೂ ನೋಡದಂತೆ ಇರುವ ಸತ್ತಪ್ರಜೆಗಳು ತಮ್ಮ DNA ಟೆಸ್ಟ್ ಮಾಡಿಸಿಕೊಳ್ಳಿ” ಎಂದಿದೆ.
Also Read: ಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆಯೇ, ವೈರಲ್ ಕ್ಲೇಮ್ ನಿಜವೇ?
ಈ ಮೆಸೇಜ್ನ ಸತ್ಯಶೋಧನೆಗೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ (+91-9999499044) ಗೆ ದೂರು ಬಂದಿದ್ದು, ಇದೊಂದು ಹಳೆಯ ಪೋಸ್ಟ್ ಎಂದು ತಿಳಿದುಬಂದಿದೆ.
ನ್ಯೂಸ್ಚೆಕರ್ ಸತ್ಯಶೋಧನೆಗಾಗಿ ಮೊದಲಿಗೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು ಇದೇ ರೀತಿಯ ಹಳೆಯ ಪೋಸ್ಟ್ ಟ್ವಿಟರ್ನಲ್ಲೂ ಇರುವುದನ್ನು ಪತ್ತೆ ಮಾಡಿದೆ.
ಆ ಬಳಿಕ ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ ಇರುವುದರ ಬಗ್ಗೆ ಶೋಧ ನಡೆಸಿದೆ. ಈ ವೇಳೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ.
ಆ ಬಳಿಕ ಫೇಸ್ ಬುಕ್ ಸರ್ಚ್ ನಡೆಸಿದ್ದು, ಇತ್ತೀಚಿನ ಫೋಸ್ಟ್ ಸೇರಿದಂತೆ ಹಲವು ಪೋಸ್ಟ್ಗಳು ಕಂಡುಬಂದಿವೆ. ಇದರಲ್ಲಿ ಅತಿ ಹಳೇಯ ಪೋಸ್ಟ್ 2018ರ ನವೆಂಬರ್ ವರೆಗೆ ಕಂಡುಬಂದಿದೆ.
ಇದನ್ನು ಗಮನದಲ್ಲಿಟ್ಟು ವೈರಲ್ ಮೆಸೇಜ್ನಲ್ಲಿರುವ ಫೋಟೋವನ್ನು ಪರಿಶೀಲನೆ ನಡೆಸಿದಾಗ ಫೋಟೋ ಹಿಂದೆ ಭವಾನಿ ಸೂಪರ್ ಮಾರ್ಕೆಟ್ ಎಂದು ಬರೆದಿರುವುದು ಪತ್ತೆಯಾಗಿದೆ. ಅದನ್ನು ಗೂಗಲ್ ಲೊಕೇಶನ್ ಮೂಲಕ ಪತ್ತೆ ಮಾಡಿದಾಗ ಅದು ಸಿರಗುಪ್ಪದಲ್ಲಿರುವ ಒಂದು ಮಾರ್ಕೆಟ್ ಇರುವ ಕಟ್ಟಡ ಎಂದು ಎಂದು ತಿಳಿದುಬಂದಿದೆ. ಇದನ್ನು ಗೂಗಲ್ ಮ್ಯಾಪ್ನಲ್ಲಿ ನೋಡಬಹುದು.
ಇದನ್ನು ಆಧರಿಸಿ, ಕನ್ನಡಪ್ರಭ ದಿನಪತ್ರಿಕೆಯ ಸ್ಥಳೀಯ ವರದಿಗಾರ ಮಂಜು ಅವರನ್ನು ಸಂಪರ್ಕಿಸಿದ್ದು, ಅವರು “ಇದೊಂದು ಹಳೆಯ ಪ್ರಕರಣ” ಎಂದು ಹೇಳಿದ್ದಾರೆ. ಆ ಬಳಿಕ ಬಳ್ಳಾರಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಅನ್ನು ನ್ಯೂಸ್ಚೆಕರ್ ಸಂಪರ್ಕಿಸಿದ್ದು, ಸಿರಗುಪ್ಪದ ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿದೆ. ಈ ವೇಳೆ ಕಂಟ್ರೋಲ್ ರೂಮ್ ಪೊಲೀಸರು “ಅಂತಹ ಯಾವುದೇ ದಾಖಲೆ ಲಭ್ಯವಿಲ್ಲ” ಎಂದು ಹೇಳಿದ್ದಾರೆ.
ಬಳಿಕ ಸಿರಗುಪ್ಪ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್ ಚೆಕರ್ ಗೆ ಪ್ರತಿಕ್ರಿಯೆ ನೀಡಿ “ಈ ಮೆಸೇಜ್ ಸುಮಾರು 4 ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಮೆಸೇಜ್ ಬಗ್ಗೆ ಆಗಲಿ, ಧ್ವಜ ಹಾರಿಸಲಾಗಿದೆ ಎಂಬ ಬಗ್ಗೆ ಆಗಲಿ ಯಾವುದೇ ಕೇಸುಗಳು ದಾಖಲಾಗಿಲ್ಲ” ಎಂದು ತಿಳಿಸಿದ್ದಾರೆ.
Also Read: ಮಣಿಪುರದಲ್ಲಿ ಪ್ರಪಾತಕ್ಕೆ ಬಸ್ ಬಿದ್ದ ಬಸ್, ವೈರಲ್ ವೀಡಿಯೋ ನಿಜವೇ?
ಈ ಸತ್ಯಶೋಧನೆಯ ಪ್ರಕಾರ, ಸಿರಗುಪ್ಪದಲ್ಲಿ ನಡೆದ ಘಟನೆ ಎನ್ನುವುದು ಹಳೆಯ ಪ್ರಕರಣವಾಗಿದ್ದು ಈ ಬಗ್ಗೆ ಅಧಿಕೃತ ಪೊಲೀಸ್ ದಾಖಲೆಗಳು ಲಭ್ಯವಿಲ್ಲ. ಜೊತೆಗೆ ಅದನ್ನು ಈಗ ಹಂಚಿಕೊಳ್ಳುತ್ತಿರುವುದು ತಪ್ಪಾದ ಸಂದರ್ಭವಾಗಿದೆ.
Our Sources
Conversation with Kannadaprabha reporter Manju Bellary
Conversation with Bellary District Police Control Room
Conversation with Siraguppa Police Sub Inspector
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
May 25, 2024
Kushel Madhusoodan
May 21, 2024
Ishwarachandra B G
April 23, 2024