Fact Check: ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ, ಈ ಫೋಟೋ ನಿಜವೇ?

ಡಿ.ಕೆ.ಶಿವಕುಮಾರ್, ಟಿಪ್ಪು ಸುಲ್ತಾನ್‌, ಸಮಾಧಿ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು

Fact
ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿದ್ದಾರೆ ಎಂದು ವೈರಲ್ ಆಗಿರುವ ಚಿತ್ರವು ಸುಮಾರು ಮೂರು ವರ್ಷಗಳಷ್ಟು ಹಳೆಯದು

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿದರು ಎಂದು ಹೇಳಲಾಗುತ್ತಿದೆ. ಈ ಕುರಿತ ಟ್ವೀಟ್‌ ಇಲ್ಲಿದೆ.

@shripushpendra1 ಟ್ವೀಟ್‌ನ ಸ್ಕ್ರೀನ್‌ ಗ್ರ್ಯಾಬ್

ಈ ಟ್ವೀಟ್‌ನ ಆರ್ಕೈವ್‌ ಲಿಂಕ್‌ ಇಲ್ಲಿದೆ.

ಮೇ 13 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 66 ಸ್ಥಾನಗಳನ್ನು ಗೆದ್ದಿದೆ. ಆ ಬಳಿಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಯದಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಅನೇಕ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು, ಅದರ ಫ್ಯಾಕ್ಟ್ ಚೆಕ್ ಅನ್ನು ಇಲ್ಲಿ ಓದಬಹುದು.

Also Read: ಕಾಂಗ್ರೆಸ್‌ ಸರ್ಕಾರದ ‘ಉಚಿತ ವಿದ್ಯುತ್‌’ ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

Fact Check/ Verification

ಹೇಳಿಕೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ನಾವು ಚಿತ್ರದ ಗೂಗಲ್ ರಿವರ್ಸ್ ಸರ್ಚ್ ನಡೆಸಿದ್ದೇವೆ. 2019 ರ ನವೆಂಬರ್ ನಲ್ಲಿ ‘ಟಿಪ್ಪು ಸುಲ್ತಾನ್’ ಎಂಬ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ ಪೋಸ್ಟ್ ಅನ್ನು ನಾವು ಗುರುತಿಸಿದ್ದೇವೆ. ವೈರಲ್ ಚಿತ್ರವನ್ನು ಹೊರತುಪಡಿಸಿ, ಅದರಲ್ಲಿ ಇನ್ನೂ ಅನೇಕ ಚಿತ್ರಗಳಿವೆ. ‘ಕರ್ನಾಟಕ ರಾಜಕೀಯದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಶ್ರೀರಂಗಪಟ್ಟಣದಲ್ಲಿ ‘ಮೈಸೂರಿನ ಹುಲಿ’ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿದರು” ಎಂದು ಹೇಳಲಾಗಿದೆ.

ಮಾಣ ವಚನ ಸ್ವೀಕರಿಸುವ ಮುನ್ನ ಡಿಕೆಶಿ ಟಿಪ್ಪು ಸಮಾಧಿಗೆ ಭೇಟಿ, ಈ ಫೋಟೋ ನಿಜವೇ?
ಟಿಪ್ಪು ಸುಲ್ತಾನ್‌ ಟೈಗರ್‌ ಆಫ್‌ ಮೈಸೂರು ಫೇಸ್‌ಬುಕ್‌ ಪೇಜ್‌ನಲ್ಲಿರುವ ಪೋಸ್ಟ್

ಡಿ.ಕೆ.ಶಿವಕುಮಾರ್ ಅವರ ಈ ಚಿತ್ರ ಕನಿಷ್ಠ ಮೂರು ವರ್ಷಗಳಿಂದ ಅಂತರ್ಜಾಲದಲ್ಲಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ತನಿಖೆಯ ವೇಳೆ ಮೂರು ವರ್ಷಗಳ ಹಿಂದೆ ‘ವಿಜಯಕರ್ನಾಟಕ’ದ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ದೊರಕಿದೆ. ಈ ವರದಿಯ ಪ್ರಕಾರ, ಕರ್ನಾಟಕದ ಅಂದಿನ ಬಿಜೆಪಿ ಸರ್ಕಾರವು ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿದ ಮತ್ತು ಟಿಪ್ಪುವಿನ ಇತಿಹಾಸವನ್ನು ಪಠ್ಯಕ್ರಮದಿಂದ ತೆಗೆದುಹಾಕಿದ ಮಧ್ಯೆ, ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿಗೆ ಭೇಟಿ ನೀಡಿದಾಗ ಪೇಟ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ಗೌರವ ಸಲ್ಲಿಸಿದರು. ಈ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಎಂದಿದೆ.

Also Read: ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?

ಇದಲ್ಲದೆ, ಏಷ್ಯಾನೆಟ್ ಸುವರ್ಣ ನ್ಯೂಸ್ ಯೂಟ್ಯೂಬ್ ಚಾನೆಲ್ನಲ್ಲಿ 2019 ರ ನವೆಂಬರ್ ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಅವರ ವೈರಲ್ ಚಿತ್ರವೂ ಇದೆ. ವೀಡಿಯೊದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿದ್ದರು.

ಸತ್ಯಶೋಧನೆ ವೇಳೆ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್‌ ಅವರು ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ನೀಡಿದರು ಎನ್ನುವುದಕ್ಕೆ ಯಾವುದೇ ಅಧಿಕೃತ ವರದಿಗಳು ಲಭ್ಯವಾಗಿಲ್ಲ.

Also Read: ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಬಿದ್ದ ಬಸ್‌, ವೈರಲ್‌ ವೀಡಿಯೋ ನಿಜವೇ?

Conclusion

ಈ ಸತ್ಯಶೋಧನೆಯ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರು ಟಿಪ್ಪು ಸುಲ್ತಾನ್‌ ಸಮಾಧಿಗೆ ಭೇಟಿ ನೀಡಿದ ಚಿತ್ರವನ್ನೇ ತಪ್ಪು ದಾರಿಗೆಳೆವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಎಂಬುದು ಸಾಬೀತಾಗಿದೆ.

Result: False

Our sources

Facebook post by page ‘Tipu Sultan uploaded in November 8, 2019

Report published by Vijaykarnataka in November 8, 2019

YouTube video by Asianet Suvarna News Dated November 8, 2019


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.