Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟ
ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ ಎಂದು ಹೇಳಿರುವುದು ನಿಜವಲ್ಲ. ಇದು ರಷ್ಯಾಕ್ಕೆ ಸಂಬಂಧಿಸಿದ ದೃಶ್ಯವಾಗಿದೆ
ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ ಎಂದು ಹೇಳಿಕೆಯೊಂದನ್ನು ವೀಡಿಯೋ ಜೊತೆಗೆ ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಪಾಕಿಸ್ತಾನ ತನ್ನ M107 155mmನ ಕ್ಷಿಪಣಿಯಶಸ್ವಿಯಾಗಿ ಪರೀಕ್ಷಿಸಿದೆ ಈ ಕ್ಷಿಪಣಿ ಎಷ್ಟು ಶಕ್ತಿಶಾಲಿಯಾಗಿದೆಯೆಂದರೆ ಅದು ಉಡಾವಣೆಯಾದ ಸ್ಥಳದಲ್ಲೇ ಸ್ಫೋಟಗೊಳ್ಳುತ್ತದೆ. ಜಗತ್ತಿನ ಯಾವುದೇ ದೇಶವು ಅಂತಹ ತಂತ್ರಜ್ಞಾನವನ್ನು ಹೊಂದಿಲ್ಲ!” ಎಂದಿದೆ.


ಇದೇ ರೀತಿಯ ಹೇಳಿಕೆಯನ್ನು ಇಲ್ಲಿ ನೋಡಿ
ಈ ಕುರಿತು ಸತ್ಯಶೋಧನೆಯನ್ನು ನ್ಯೂಸ್ ಚೆಕರ್ ನಡೆಸಿದ್ದು, ಶಸ್ತ್ರಾಸ್ತ್ರ ಪರೀಕ್ಷೆ ವೇಳ ಸ್ಫೋಟ ನಡೆದ ವಿದ್ಯಮಾನ ಪಾಕಿಸ್ತಾನದ್ದಲ್ಲ ಇದು ರಷ್ಯಾ ಮೂಲದ್ದು ಎಂದು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ನಡೆಸಿದ್ದೇವೆ.
ಜುಲೈ 5, 2024ರ ಡಿಫೆನ್ಸ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ರಷ್ಯಾದ AZP S-60 ವಿಮಾನ ವಿರೋಧಿ ಗನ್ ತನ್ನದೇ ಆದ ಶೆಲ್ ಸ್ಫೋಟದಿಂದ ನಾಶವಾಯಿತು. ಇದನ್ನು ಆಪರೇಟಿವ್ನೋ ZSU ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ . “ರಷ್ಯಾದ S-60 ಸಿಬ್ಬಂದಿ ಬಂದೂಕಿನ ಬ್ಯಾರೆಲ್ನಲ್ಲಿ ಶೆಲ್ ಸ್ಫೋಟಗೊಂಡ ಪರಿಣಾಮವಾಗಿ ಸಿಲುಕಿಕೊಂಡರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಷ್ಯಾದ ಸೈನ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಸುರಕ್ಷತಾ ನಿಯಮಗಳ ಅಜ್ಞಾನ ಮತ್ತು ನಿರ್ಲಕ್ಷ್ಯದಿಂದಾಗಿ ಇದು ಹೆಚ್ಚಾಗಿ ಸಂಭವಿಸುತ್ತದೆ. ಈ ಬಾರಿ ಸ್ವಯಂ-ದಿವಾಳಿತನಕ್ಕೆ ಕಾರಣವೇನೆಂದು ತಿಳಿದಿಲ್ಲ. ಬಳಕೆಯಲ್ಲಿಲ್ಲದ ಅಥವಾ ಕಳಪೆ ಗುಣಮಟ್ಟದ ಶೆಲ್ಗಳಿಂದಾಗಿ ಇದು ಸಂಭವಿಸಿರಬಹುದು. ಎಂದು ವರದಿಯಲ್ಲಿದೆ.

ಜುಲೈ 5, 2024ರ ಕೀವ್ ಪೋಸ್ಟ್ ವರದಿಯಲ್ಲಿ, ಉಕ್ರೇನಿಯನ್ ಮಿಲ್ಬ್ಲಾಗರ್ Оперативний ЗСУ (ಆಪರೇಷನಲ್ ZSU) ಜುಲೈ 4 ರ ಗುರುವಾರದಂದು ರಷ್ಯಾದ ಪಡೆಗಳು ಉಕ್ರೇನ್ನ ಅನಾಮಧೇಯ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ AZP S-60 ಸೋವಿಯತ್ ಯುಗದ ಮಧ್ಯಮ-ಶ್ರೇಣಿಯ, ಸಿಂಗಲ್-ಬ್ಯಾರೆಲ್ ವಿಮಾನ ವಿರೋಧಿ ಬಂದೂಕು ಅದ್ಭುತವಾಗಿ ಸ್ಫೋಟಿಸಿದ ಕ್ಷಣದ ವೀಡಿಯೊವನ್ನು ಪೋಸ್ಟ್ ಮಾಡಿದೆ ಎಂದಿದೆ.

ಜುಲೈ 4, 2024ರ ಸೆನ್ಸರ್ ನೆಟ್ ವರದಿಯ ಪ್ರಕಾರ, ಎಸ್-60 ವಿಮಾನ ನಿರೋಧಕ ವ್ಯವಸ್ಥೆ ಚಾಲನೆ ವೇಳೆ ಶೆಲ್ ಸ್ಫೋಟಗೊಂಡಿದ್ದು, ಸ್ವಯಂ ಸ್ಫೋಟದಿಂದಾಗಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದಿದೆ. ಈ ವರದಿಯೊಂದಿಗೆ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವ ವೀಡಿಯೋವನ್ನು ನೋಡಿದ್ದೇವೆ.

ಈ ಸಾಕ್ಷ್ಯಾಧಾರಗಳ ಪ್ರಕಾರ, ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟಗೊಂಡಿದೆ ಎಂದು ಹೇಳಿರುವುದು ತಪ್ಪಾಗಿದೆ. ಇದು ರಷ್ಯಾಕ್ಕೆ ಸಂಬಂಧಿಸಿದ ದೃಶ್ಯವಾಗಿದೆ ವಿನಃ ಪಾಕಿಸ್ತಾನದ್ದಲ್ಲ ಎಂದು ಗೊತ್ತಾಗಿದೆ.
Also Read: ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದರೇ?
Our Sources
Report By Defence Express, Dated: July 5, 2024
Report By kyivpost, Dated: July 5, 2024
Report By censor.net, Dated: July 4, 2024
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025