Monday, December 22, 2025

Fact Check

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದರೇ?

Written By Ramkumar Kaliamurthy, Translated By Ishwarachandra B G, Edited By Pankaj Menon
May 1, 2025
banner_image

Claim

image

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದ್ದಾರೆ

Fact

image

ಸಿಂಧೂ ನದಿ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆ ಎಂದು ಹೇಳುವ ವಿಡಿಯೋ ಸುಳ್ಳು. ವೈರಲ್ ಆಗಿರುವ ಈ ವೀಡಿಯೋ 2016ರದ್ದಾಗಿದೆ.

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೇಲಿ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಸಿಂಧೂ ನಧಿ ನೀರಿಗಾಗಿ ಪಾಕಿಸ್ತಾನ ಅಮೇರಿಕಾದ ಹತ್ತಿರ ಬೇಡಿಕೊಂಡಿದ್ದನ್ನ ಟ್ರಾಂಪ್ ಹೇಗೆ ತೋರಿಸ್ತೀದ್ದಾರೆ ನೋಡಿ ಇದು ನಮ್ಮ ಮೋದಿಜಿ ತಾಕತ್ತು.” ಎಂದಿದೆ. ಈ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ಮಾಡಿದ್ದು, ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಗ್ಗೆ ಬೇಡಿಕೊಂಡಿದ್ದಕ್ಕೆ ಡೊನಾಲ್ಡ್ ಟ್ರಂಪ್ ಗೇಲಿ ಮಾಡಿದ್ದಲ್ಲ. ಪ್ರಸ್ತುತ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ರೊಬಿಯೋ ಅವರನ್ನು 2016ರಲ್ಲಿ ಅಣಕಿಸಿದ ವಿದ್ಯಮಾನ ಎಂದು ಗೊತ್ತಾಗಿದೆ.

Fact Check/Verification

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ನಾವು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ. ಈ ವೇಳೆ ನವೆಂಬರ್ 27, 2016 ರಂದು ಸಿಎನ್ಎನ್ ಪ್ರಕಟಿಸಿದ “ರುಬಿಯೊ ಅವರ SOTU ನೀರಿನ ಘಟನೆಯನ್ನು ಟ್ರಂಪ್ ಅಣಕಿಸುವುದು” ಎಂಬ ಶೀರ್ಷಿಕೆಯ ವೀಡಿಯೋವನ್ನು ನೋಡಿದ್ದೇವೆ. ಆ ವೀಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ಪ್ರಸ್ತುತ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ಮಾರ್ಕೊ ರೂಬಿಯೊ ಅವರನ್ನು ಅಣಕಿಸುವುದನ್ನು ಕಾಣಬಹುದು.

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದರೇ?

ಆ ಸಮಯದಲ್ಲಿ ಇತರ ಕೆಲವು ಮಾಧ್ಯಮಗಳು ಸಹ ಈ ಬಗ್ಗೆ ಸುದ್ದಿಗಳನ್ನು ಪ್ರಕಟಿಸಿದ್ದನ್ನು ಕಾಣಬಹುದು. ಆ ಕುರಿತ ವರದಿಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಕಾಣಬಹುದು.

2013 ರಲ್ಲಿ, ರೂಬಿಯೊ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಸ್ವಲ್ಪ ಹೊತ್ತು ನಿಂತು, ನೀರು ಕುಡಿದು, ನಂತರ ತಮ್ಮ ಭಾಷಣವನ್ನು ಮುಂದುವರಿಸಿದರು. ಟ್ರಂಪ್ ಈ ಘಟನೆಯನ್ನೇ ಅಪಹಾಸ್ಯ ಮಾಡಿದ್ದರು. ಇದನ್ನು ನೋಡಿದರೆ, ವೈರಲ್ ಆಗಿರುವ ವೀಡಿಯೊಗೂ ಪ್ರಸ್ತುತ ಸಿಂಧೂ ನದಿ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದರೇ?

ಇದರ ನಂತರ, ಸಿಂಧೂ ನದಿ ಸಮಸ್ಯೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ಅಮೆರಿಕದ ಸಹಾಯವನ್ನು ಕೋರಿದೆಯೇ ಎಂದು ನಾವು ಹುಡುಕಿದೆವು. ಪಾಕಿಸ್ತಾನವು ಅಮೆರಿಕದಿಂದ ಸಹಾಯ ಕೇಳಿರುವ ಬಗ್ಗೆ ಮಾಹಿತಿ ದೊರೆತಿಲ್ಲ.

Conclusion

ಸಿಂಧೂ ನದಿ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆ ಎಂದು ಹೇಳುವ ವೀಡಿಯೋ ಸುಳ್ಳು. ವೈರಲ್ ಆಗಿರುವ ಈ ವಿಡಿಯೋ 2016ರದ್ದಾಗಿದೆ. ಪ್ರಸ್ತುತ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ಮಾರ್ಕೊ ರೂಬಿಯೊ ಅವರನ್ನು ಅಂದು ಡೊನಾಲ್ಡ್  ಟ್ರಂಪ್ ಹೀಗೆ ಮಾಡಿದ್ದಾರೆ.

Our Sources

Report By CNN, Dated: February 27, 2016

Report By NBC News, Dated: February 27, 2016

Report By The new york times, Dated: February 26, 2016

Report By CBS News, Dated: February 27, 2016

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)

RESULT
imagePartly false
image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,641

Fact checks done

FOLLOW US
imageimageimageimageimageimageimage