Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಬಳ್ಳಾರಿಯಲ್ಲಿ ಕಲ್ಯಾಣ್ ಜ್ಯುವೆಲರಿಯಲ್ಲಿ ಬಾಂಬ್ ಸ್ಫೋಟ
Fact
ಬಳ್ಳಾರಿಯಲ್ಲಿ ಕಲ್ಯಾಣ್ ಜ್ಯುವೆಲರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿಲ್ಲ, ಏರ್ ಕಂಡೀಷನ್ ಯಂತ್ರದಲ್ಲಿ ಸ್ಫೋಟ ಸಂಭವಿಸಿದೆ
ಕರ್ನಾಟಕದಲ್ಲಿ ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಬಳ್ಳಾರಿಯಲ್ಲಿ ಕಲ್ಯಾಣ್ ಜ್ಯುವೆಲರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೋಸ್ಟ್ ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಇಸ್ಲಾಮಿಕ್ ಉಗ್ರರ ದಾಳಿ, ರಾಮೇಶ್ವರಂ ಕೆಫೆ ಬಳಿಕ ಇನ್ನೊಂದು ಐಇಡಿ ಸ್ಫೋಟ ಎಂಬಂತೆ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
Also Read: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಪೂರ್ಣ ವೀಡಿಯೋ ವೈರಲ್
ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಇದರ ಬಗ್ಗೆ ನಾವು ಸತ್ಯಶೋಧನೆ ಮಾಡಿದ್ದು, ಇದು ಸುಳ್ಳು, ಅಲ್ಲಿಸಂಭವಿಸಿದ್ದು ಎಸಿ ಸ್ಫೋಟ ಎಂಬುದನ್ನು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವರದಿಗಳು ಲಭ್ಯವಾಗಿವೆ.
ಮೇ 3 2024ರ ಸುವರ್ಣ ನ್ಯೂಸ್ ವರದಿಯಲ್ಲಿ, ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಬಳ್ಳಾರಿ ನಗರದ ರಥಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡಿದ್ದು, ಇದನ್ನು ದುರಸ್ತಿಗೊಳಿಸಲು ಬಂದಿದ್ದ ನಿಂಗಪ್ಪ, ಸೈಯದ್ ಝುಬೇರ್ ಎಂಬವರಿಗೆ ಗಂಭೀರ ಗಾಯವಾಗಿದೆ. ಮೂವರು ಸಿಬ್ಬಂದಿಗೆ ಸಣ್ಣ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ಯುವೆಲರ್ಸ್ ಮಳಿಗೆಯಲ್ಲಿ ಕಳೆದ ಕೆಲ ದಿನಗಳಿಂದ ಸೆಂಟ್ರಲೈಜ್ಡ್ ಎಸಿಯಲ್ಲಿ ಗ್ಯಾಸ್ ಖಾಲಿಯಾಗಿತ್ತು. ಗ್ಯಾಸ್ ಭರ್ತಿ ಮಾಡಲು ಇಬ್ಬರು ಕಾರ್ಮಿಕರು ಮಳಿಗೆಗೆ ಬಂದಿದ್ದರು. ಎಸಿಗೆ ಗ್ಯಾಸ್ ತುಂಬಿಸುವಾಗ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದಿದೆ.
Also Read: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಹಿಂದೂಗಳಿಗೆ ಆಹ್ವಾನ ಎನ್ನುವ ವೀಡಿಯೋ ಹಿಂದಿನ ಸತ್ಯ ಏನು?
ಮೇ 2, 2024ರ ಇಟಿವಿ ಭಾರತ್ ವರದಿಯಲ್ಲಿ ನಗರದ ತೇರು ಬೀದಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ಗುರುವಾರ ಸಂಜೆ ಎಸಿ ಬ್ಲಾಸ್ಟ್ ಆಗಿದ್ದು, ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಓರ್ವ ವ್ಯಕ್ತಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಜೋರಾದ ಶಬ್ದ ಹಾಗೂ ಹೊಗೆಯಿಂದಾಗಿ ಮಳಿಗೆಯಲ್ಲಿದ್ದ ಜನರು ಕೆಲಕಾಲ ಆತಂಕಗೊಂಡಿದ್ದರು. ಮಳಿಗೆಯ ಸಿಬ್ಬಂದಿಯೇ ಗಾಯಗೊಂಡವರನ್ನು ಹೊರಗಡೆ ಎತ್ತಿಕೊಂಡು ಬಂದಿರುವ ದೃಶ್ಯಗಳು ಘಟನೆಯ ತೀವ್ರತೆಗೆ ಸಾಕ್ಷಿಯಾಗಿವೆ. ಗಾಯಾಳುಗಳನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇದರೊಂದಿಗೆ ಮೇ 3, 2024ರಂದು ಕರ್ನಾಟಕ ರಾಜ್ಯ ಪೊಲೀಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ನೋಡಿದ್ದೇವೆ. ಅದರಲ್ಲಿ, ಕಲ್ಯಾಣ್ ಜ್ಯುವೆಲರಿಯಲ್ಲಿ ಸ್ಫೋಟ ಎಸಿ ಗ್ಯಾಸ್ ಸ್ಫೋಟದಿಂದಾಗಿದೆ. ಬಳ್ಳಾರಿ ಎಸ್‌ಪಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ ಎಂದಿದೆ.
ಇದೇ ವೇಳೆ ಬಳ್ಳಾರಿ ಎಸ್.ಪಿ. ಅವರ ಟ್ವೀಟ್ ಅನ್ನೂ ನಾವು ಗಮನಿಸಿದ್ದೇವೆ. ಇಲ್ಲೂ ಏರ್ ಕಂಡೀಷನರ್ ರಿಪೇರಿ ವೇಳೆ ಅಕಸ್ಮಾತ್ ಆಗಿ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಟ್ವೀಟ್ ಇಲ್ಲಿದೆ.
ಈ ಪುರಾವೆಗಳ ಪ್ರಕಾರ, ಕಲ್ಯಾಣ್ ಜ್ಯುವೆಲರಿಯಲ್ಲಿ ನಡೆದಿರುವುದು ಬಾಂಬ್ ಸ್ಫೋಟವಲ್ಲ, ಏರ್ ಕಂಡೀಷನರ್ ನಲ್ಲಾದ ಸ್ಫೋಟ ಎಂದು ತಿಳಿದುಬಂದಿದೆ.
Also Read: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್ ಗಳಲ್ಲಿ ಹಸುಗಳನ್ನು ಅರಬ್ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?
58/8Our Sources
Report By Suvarna News, Dated: May 3, 2024
Report By Etv Bharat, Dated: May 2, 2024
Tweet By Karnataka State Police, Dated May, 3, 2024
Tweet By SP Ballrary, Dated May 3, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.