Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಳ್ಳಾರಿಯ ಕಲ್ಯಾಣ್ ಜ್ಯುವೆಲರಿಯಲ್ಲಿ ಬಾಂಬ್ ಸ್ಫೋಟಮ ಮೋದಿ ವಿರೋಧಿ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಲುಂಗಿಗೆ ಬೆಂಕಿ ಬಿದ್ದಿದೆ, ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್ ಆಫ್ ಸುನ್ನಿ ಮುಸ್ಲಿಂ ಸಂಘಟನೆ ನೆರವು ನೀಡಿದೆ, ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂಬ ವಿಚಾರಗಳು ಈ ವಾರ ವೈರಲ್ ಆಗಿದ್ದವು. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಪೂರ್ಣ ವೀಡಿಯೋ ಕೂಡ ವ್ಯಾಪಕವಾಗಿ ಹರಿದಾಡಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಹಿನ್ನೆಲೆಯ ಹೇಳಿಕೆಗಳು ಹೆಚ್ಚಿದ್ದು, ಇತರ ಹೇಳಿಕೆಗಳೂ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಸತ್ಯಾಂಶವನ್ನು ತೆರೆದಿಟ್ಟಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಮುಸ್ಲಿಂ ಧರ್ಮಗುರುಗಳಿಂದ ಹಿಂದೂಗಳಿಗೆ ಆಹ್ವಾನ ಎಂದು ಮುಸ್ಲಿಂ ಧರ್ಮಗುರುವೊಬ್ಬರು ಮಾತನಾಡುವ ವೀಡಿಯೋ ವೈರಲ್ ಆಗಿದೆ. ಸತ್ಯಶೋಧನೆ ವೇಳೆ ಇದು ನಿಜವಲ್ಲ, ವೀಡಿಯೋ ಬಾಂಗ್ಲಾದೇಶದ್ದಾಗಿದ್ದು, ಸ್ವಾಮಿ ನರಸಿಂಹಾನಂದ ಅವರ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವೀಡಿಯೋ ಒಂದು ವೈರಲ್ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂಬುದನ್ನು ಅವರೇ ಹೇಳಿದ್ದಾರೆ ಎಂಬಂತೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಡೀ ವೀಡಿಯೋವನ್ನು ನಾವು ನೋಡಿದಾಗ, ವೈರಲ್ ವೀಡಿಯೋವನ್ನು ಕತ್ತರಿಸಿ ಅಷ್ಟು ಮಾತ್ರವನ್ನು ಮಾತ್ರ ಬಳಕೆ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇದನ್ನು ಕೋಮು ಭಾವನೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಕರ್ನಾಟಕದಲ್ಲಿ ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಬಳ್ಳಾರಿಯಲ್ಲಿ ಕಲ್ಯಾಣ್ ಜ್ಯುವೆಲರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೋಸ್ಟ್ ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಸತ್ಯಶೋಧನೆಯಲ್ಲಿ, ಬಳ್ಳಾರಿಯಲ್ಲಿ ಕಲ್ಯಾಣ್ ಜ್ಯುವೆಲರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿಲ್ಲ, ಏರ್ ಕಂಡೀಷನ್ ಯಂತ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸುವಾಗ ಕಾಂಗ್ರೆಸ್ಸಿಗರ ಲುಂಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವೀಡಿಯೋದೊಂದಿಗೆ ಹೇಳಿಕೆಯೊಂದು ವೈರಲ್ ಆಗಿದೆ. ತನಿಖೆಯಲ್ಲಿ ಕಂಡುಬಂದಂತೆ ಇದು 2012ರ ವೀಡಿಯೋ ಆಗಿದ್ದು ಕೇರಳದಲ್ಲಿ ಎಂಜಿ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಕೆಎಸ್ ಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ನಡೆದ ಘಟನೆಯಾಗಿದೆ. ಆದರೆ ಇದನ್ನು ಕಾಂಗ್ರೆಸ್ಸಿಗರು ಮೋದಿ ವಿರುದ್ಧ ನಡೆಸಿದ ಪ್ರತಿಭಟನೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ದುಬೈ ಮೂಲದ ಮುಸ್ಲಿಂ ಸಂಘಟನೆಯೊಂದು ಲೋಕಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪುನರುಸ್ಥಾಪನೆಗಾಗಿ’ ಕರ್ನಾಟಕಕ್ಕೆ ತೆರಳುವ ಮುಸ್ಲಿಮರಿಗೆ ಆರ್ಥಿಕ ನೆರವು ಘೋಷಿಸಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ದುಬೈನ ಅಸೋಸಿಯೇಷನ್ ಆಫ್ ಸುನ್ನಿ ಮುಸ್ಲಿಂ ಸಂಘಟನೆ ಹೆಸರಲ್ಲಿ ಹೊರಡಿಸಲಾಗಿದೆ ಎನ್ನುವ ಪತ್ರವು ನಕಲಿಯಾಗಿದೆ. ಇಂತಹ ಸಂಘಟನೆ ಅಸ್ತಿತ್ವದಲ್ಲಿರುವ ಬಗ್ಗ ಸಾಕ್ಷ್ಯವಿಲ್ಲ. ಪತ್ರದಲ್ಲಿ ನೀಡಲಾದ ಸಂಪರ್ಕ ಸಂಖ್ಯೆಯೂ ನಿಜವಲ್ಲ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಒಂದು ಕಾಲ್ಪನಿಕ ವೀಡಿಯೋವಾಗಿದೆ. ಇದು ನಿಜವಲ್ಲ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 22, 2025
Ishwarachandra B G
November 21, 2025
Ishwarachandra B G
November 18, 2025