Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.


ಇಂತಹ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ನೋಡಬಹುದು.
ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್ ಲೈವ್ ಸುದ್ದಿಮಾಧ್ಯಮಗಳೂ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುದ್ದಿಯನ್ನು ಪ್ರಕಟಿಸಿವೆ. ಇವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.


ವೈರಲ್ ಕ್ಲಿಪ್ನ ಕೀಫ್ರೇಮ್ಗಳನ್ನು ತೆಗೆದು ಅವುಗಳನ್ನು ಗೂಗಲ್ ಲೆನ್ಸ್ ಮೂಲಕ ಶೋಧಿಸಿದ್ದೇವೆ. ಈ ವೇಳೆ ಮೇ 9, 2024 ರಂದು @Safyanalmashsheikh ಅವರು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ಲಭ್ಯವಾಗಿದೆ. ವೈರಲ್ ಆದ ಅದೇ ವೀಡಿಯೋ ಇಲ್ಲೂ ಕಂಡುಬಂದಿದೆ. ಇದರೊಂದಿಗಿನ ವಿವರಣೆಯಲ್ಲಿ “ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಅವಘಡ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ” ಎಂದಿದೆ.

ಈ ವೀಡಿಯೋವನ್ನು @tweakpakistan1 ಅವರು ಮೇ 9, 2024 ರಂದು ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿಯೂ ಕಂಡುಬಂದಿದೆ. ಈ ಮೂಲಕ ಈ ದೃಶ್ಯಾವಳಿ ಹಳೆಯದು ಎಂದು ದೃಢಪಟ್ಟಿದೆ.
ವೈರಲ್ ಕ್ಲಿಪ್ನ ತುಣುಕನ್ನು ಪಾಕಿಸ್ತಾನ ಮೂಲದ ಅರಬ್ ನ್ಯೂಸ್ ಪಿಕೆ , ಮೇ 9, 2024 ರಂದು ಪ್ರಕಟಿಸಿದ ವರದಿಯಲ್ಲಿಯೂ ನಾವು ಕಂಡಿದ್ದೇವೆ. ಇದರಲ್ಲಿ, ” ಲಾಹೋರ್ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡದ್ದು,ಗುರುವಾರ ಬೆಳಗ್ಗೆ ಹಾರಾಟ ನಡೆಸಬೇಕಿದ್ದ ನಾಲ್ಕು ಹಜ್ ವಿಮಾನಗಳು ಆ ಬಳಿಕ ಹಾರಾಟ ನಡೆಸಿದವು ಎಂದು ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಹೇಳಿದೆ.” ಎಂದಿದೆ.

ಲಾಹೋರ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಬೆಂಕಿಯ ಇದೇ ರೀತಿಯ ದೃಶ್ಯಗಳನ್ನು ಮೇ 2024 ರ ಆಜ್ ಟಿವಿ ಅಫೀಶಿಯಲ್ ವರದಿಯೂ ಒಳಗೊಂಡಿತ್ತು.
ಮೇ 9, 2024 ರ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, “ಲಾಹೋರ್ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿನ ವಿಮಾನ ಕಾರ್ಯಾಚರಣೆಗಳಲ್ಲಿ, ವಿಶೇಷವಾಗಿ ಜಾಗತಿಕ ವಿಮಾನ ಕಾರ್ಯಾಚರಣೆಗಳಲ್ಲಿ ಅಡಚಣೆ ಉಂಟಾಯಿತು. ಬೆಂಕಿಯನ್ನು ಬೇಗನೆ ನಂದಿಸಲಾಗಿದ್ದರೂ, ಇಮ್ರಿಗೇಶನ್ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿತು. ಪ್ರಾಥಮಿಕ ವರದಿಗಳ ಪ್ರಕಾರ, ಅವು ಅಂತರರಾಷ್ಟ್ರೀಯ ನಿರ್ಗಮನ ಲಾಂಜ್ನಲ್ಲಿರುವ ಕನ್ವೇಯರ್ ಬೆಲ್ಟ್ಗಳಲ್ಲಿ ಒಂದರಿಂದ ಬಂದಿದ್ದು, ಅದರ ಕೌಂಟರ್ಗಳನ್ನು ಬೇಗನೆ ಆವರಿಸಿಕೊಂಡಿವೆ.” ಎಂದಿದೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಲಾಹೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಎಂದು ಹೇಳಲು ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Sources
YouTube Video By @Safyanalmassheikh, Dated; May 9, 2024
YouTube Video By Arab News PK, Dated: May 9, 2024
YouTube Video By Aaj TV Official, Dated: May 9, 2024
Report By The Express Tribune, Dated: May 9, 2024
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025