Authors
Claim
ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ಕೆತ್ತಲಾಗಿದೆ
Fact
ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ಸೌದಿಯಲ್ಲಿಡಲಾಗಿಲ್ಲ. ಇದನ್ನು ಸೂರತ್ ಆಭರಣ ವ್ಯಾಪಾರಿಯೊಬ್ಬರು 2022ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ 156 ಸ್ಥಾನದಲ್ಲಿ ಗೆದ್ದ ನಿಮಿತ್ತ ಕೆತ್ತಿಸಿದ್ದಾರೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಸಾರ ಮಾಡುತ್ತಿದ್ದಾರೆ, ಇದು ಸೌದಿ ಅರೇಬಿಯಾದಲ್ಲಿ ಕೆತ್ತಿಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ನವದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅಧಿಕೃತ ಭಾರತ ಭೇಟಿ ನಿಮಿತ್ತ ಇಲ್ಲಿಯೇ ಉಳಿದುಕೊಂಡಿದ್ದು, ಈ ವೇಳೆ ಎರಡೂ ದೇಶಗಳು ಇಂಧನ, ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಳಗೊಳಿಸುವತ್ತ ಗಮನ ಹರಿಸಿದ್ದರು. ಈ ಭೇಟಿಯ ಹಿನ್ನೆಲೆಯಲ್ಲಿ ಚಿತ್ರ ವೈರಲ್ ಆಗುತ್ತಿದೆ.
Also Read: ಬೆಂಗಳೂರಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ?
Fact Check/Verification
ಸತ್ಯಶೋಧನೆಗಾಗಿ, ನ್ಯೂಸ್ ಚೆಕರ್ ” Narendra Modi statue gold Saudi Arabia” ಎಂದು ಕೀವರ್ಡ್ ಹುಡುಕಾಟವನ್ನು ನಡೆಸಿದೆ. ಅದು ಯಾವುದೇ ಫಲಿತಾಂಶಗಳನ್ನು ನಮಗೆ ನೀಡಲಿಲ್ಲ.
ನಂತರ ನಾವು ವೈರಲ್ ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಜನವರಿ 11, 2023 ರಂದು ಈ ಯೂಟ್ಯೂಬ್ ವೀಡಿಯೋ ಗೆ ನಮ್ಮನ್ನು ಕರೆದೊಯ್ಯಿತು, ಇದರಲ್ಲಿ “ನರೇಂದ್ರ ಮೋದಿಯವರ 156 ಗ್ರಾಂ ಮೇಣದ ಚಿನ್ನದ ಪ್ರತಿಮೆ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋ ಇದೆ.
ಬಳಿಕ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಜನವರಿ 21, 2023 ರ ಎಎನ್ಐ ಸುದ್ದಿ ವರದಿ ಲಭ್ಯವಾಗಿದೆ. ಇದರಲ್ಲಿ ಕಂಡುಬಂದಂತೆ “ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಂಡ ವಿಜಯದ ನೆನಪಿಗಾಗಿ, ಸೂರತ್ ನಗರದ ಆಭರಣ ಉತ್ಪಾದನಾ ಕಂಪನಿಯು ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ವಿಗ್ರಹವನ್ನು ಕೆತ್ತಿದೆ. 156 ಸ್ಥಾನಗಳಲ್ಲಿ ಬಿಜೆಪಿ 182 ಸ್ಥಾನಗಳನ್ನು ಗೆದ್ದಿದ್ದರಿಂದ, ವಿಗ್ರಹದ ತೂಕವನ್ನು 156 ಗ್ರಾಂ ಚಿನ್ನದಲ್ಲಿ ಮಾಡಲಾಗಿದೆ” ಎಂದಿದೆ.
ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ಕೆತ್ತಿದ ಸೂರತ್ ಆಭರಣ ವ್ಯಾಪಾರಿಯ ಬಗ್ಗೆ ಅನೇಕ ಸುದ್ದಿ ವರದಿಗಳು ನಮಗೆ ಲಭ್ಯವಾಗಿವೆ. ಇವುಗಳಲ್ಲೂ 156 ಗ್ರಾಂ ಪ್ರತಿಮೆಯನ್ನು 18 ಕ್ಯಾರೆಟ್ ಚಿನ್ನದಲ್ಲಿ ಕೆತ್ತಲಾಗಿದೆ ಎಂದು ಹೇಳಲಾಗಿದೆ.
Also Read: ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?
ರಾಜಸ್ಥಾನ ಮೂಲದ ಬಸಂತ್ ಬೋಹ್ರಾ ಕಳೆದ 20 ವರ್ಷಗಳಿಂದ ಸೂರತ್ ನಲ್ಲಿ ನೆಲೆಸಿದ್ದು, ವೇಲಿ ಬೇಲಿ ಬ್ರಾಂಡ್ ನ ರಾಧಿಕಾ ಚೈನ್ಸ್ ನ ಮಾಲೀಕರಾಗಿದ್ದಾರೆ. 4.5 ಇಂಚು ಉದ್ದ ಮತ್ತು 3 ಇಂಚು ಅಗಲವಿರುವ ಈ ಪ್ರತಿಮೆಯು 156 ಗ್ರಾಂ ತೂಕವಿದೆ, ಬೋಹ್ರಾ ಅವರ ಪ್ರಕಾರ, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ 156 ಸ್ಥಾನಗಳನ್ನು ಉಲ್ಲೇಖಿಸುತ್ತದೆ” ಎಂದು ಜನವರಿ 20, 2023 ರ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ. ವೈರಲ್ ವೀಡಿಯೋದಲ್ಲಿ ನಾವು ಬ್ರಾಂಡ್ ನ ಹೆಸರನ್ನು ನೋಡಬಹುದು.
ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯನ್ನು ಸೂರತ್ ಆಭರಣ ವ್ಯಾಪಾರಿ ತಯಾರಿಸಿದ್ದಾರೆಯೇ ಹೊರತು ಸೌದಿ ಅರೇಬಿಯಾದಲ್ಲಿ ಅಲ್ಲ ಎಂದು ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವರದಿಗಳ ಪ್ರಕಾರ, ಡಿಸೆಂಬರ್ ವೇಳೆಗೆ (ವಿಧಾನಸಭಾ ಚುನಾವಣೆ ನಡೆದಾಗ) ಪ್ರತಿಮೆ ಸಿದ್ಧವಾಗಿದ್ದರೂ, ಅದು 156 ಗ್ರಾಂಗಿಂತ ಸ್ವಲ್ಪ ಹೆಚ್ಚು ತೂಕವಿತ್ತು, ಆದರೆ ಬಿಜೆಪಿ 156 ಸ್ಥಾನಗಳನ್ನು ಗಳಿಸಿದೆ ಎಂದು ತಿಳಿದ ನಂತರ, ಕುಶಲಕರ್ಮಿಗಳು ತೂಕವನ್ನು ಕಡಿಮೆ ಮಾಡಲು ಕೆಲವು ಬದಲಾವಣೆಗಳನ್ನು ಮಾಡಿದ್ದರು.
Also Read: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Conclusion
ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪ್ರತಿಮೆಯನ್ನು ಕೆತ್ತಲಾಗಿಲ್ಲ. ಅದನ್ನು 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಸೂರತ್ ಆಭರಣ ವ್ಯಾಪಾರಿಯೊಬ್ಬರು ಕೆತ್ತಿಸಿದ್ದಾರೆ. ಆದ್ದರಿಂದ ಈ ಕ್ಲೇಮ್ ಭಾಗಶಃ ತಪ್ಪಾಗಿದೆ.
Result: Partly False
Our Sources
Report By Indian Express, Dated: January 20, 2023
Report By ANI News, Dated: January 21, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.