Fact Check
ಕೃತಕ ಗುಡಿಸಲಿನಲ್ಲಿ ಬಡ ಮಹಿಳೆಯನ್ನು ಭೇಟಿ ಮಾಡಿದಂತೆ ನಟಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ? ವೈರಲ್ ಫೋಟೋ ಹಿಂದಿನ ಸತ್ಯವೇನು?
Claim
ಕೃತಕ ಗುಡಿಸಲಿನಲ್ಲಿ ಬಡ ಮಹಿಳೆಯನ್ನು ಭೇಟಿ ಮಾಡಿದಂತೆ ನಟಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
Fact
ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆಯ ಸಂದರ್ಭದಲ್ಲಿ ಮಹಿಳೆಯೊಬ್ಬರನ್ನು ದೆಹಲಿ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಫೋಟೋ ಇದಾಗಿದೆ
ಕೃತಕ ಗುಡಿಸಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಡ ಮಹಿಳೆಯನ್ನು ಭೇಟಿಯಾಗುವಂತೆ ನಟಿಸುತ್ತಿದ್ದಾರೆ ಎಂಬ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದಾಗ್ಯೂ, ಸೆಪ್ಟೆಂಬರ್ 17, 2023 ರಂದು ದ್ವಾರಕಾದ ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಪ್ರದರ್ಶನದ ಸಮಯದಲ್ಲಿ ಕುಶಲಕರ್ಮಿಗಳೊಂದಿಗೆ ಮೋದಿ ಭೇಟಿಯ ಸಮಯದಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ನಾವು ನಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದೇವೆ.
ವೈರಲ್ ಆಗಿರುವ ಫೋಟೋದಲ್ಲಿ ಪ್ರಧಾನಿ ಮೋದಿ ಗುಡಿಸಲಿನಲ್ಲಿ ಮಹಿಳೆಯೊಬ್ಬರೊಂದಿಗೆ ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ, ಮಹಿಳೆಯ ಬಳಿ ಹೊಲಿಗೆ ಯಂತ್ರವೂ ಇದೆ. ಇದಲ್ಲದೆ, ಮಹಿಳೆಯ ಕುತ್ತಿಗೆಯಲ್ಲಿ ಗುರುತಿನ ಚೀಟಿ ಕೂಡ ನೇತಾಡುವುದು ಕಾಣಿಸುತ್ತಿದೆ.
ವೈರಲ್ ಪೋಸ್ಟ್ ನಲ್ಲಿರುವ ಹೇಳಿಕೆಯಲ್ಲಿ “ಓರ್ವ ಬಡ ಮಹಿಳೆಯ ಗುಡಿಸಲಿನಲ್ಲಿ ಪ್ಲಾಸ್ಟಿಕ್ ಪೈಂಟ್ ಹಚ್ಚಿರುವ ಗೋಡೆಗಳು! ಹೊಚ್ಚಹೊಸ ಹೊಲಿಗೆ ಯಂತ್ರ! ಹೊಲಿಗೆ ಯಂತ್ರದ ಕೆಂಪು ರಿಬ್ಬನ್ ಇನ್ನೂ ಕೂಡಾ ಕಾಣುತ್ತಾ ಇದೆ! ಬೆಲೆಬಾಳುವ ಕಾರ್ಪೆಟ್! ಹೊಸ ತಲೆದಿಂಬು ಕವರ್ ಗಳು! ಆ ಬಡ ಮಹಿಳೆ ಮನೆಯಲ್ಲಿ ಕೂಡಾ ಐಡಿ ಕಾರ್ಡ್ ಧರಿಸಿ ಕೂತಿದ್ದಾಳೆ! ಅಷ್ಟೊಂದು ನೀಟಾಗಿರುವ ಮನೆಯಲ್ಲಿ ನೆಲದಲ್ಲಿ ಚದುರಿ ಬಿದ್ದಿರುವ ಒಂದೇ ಬಣ್ಣದ ಏಳೆಂಟು ಬಟ್ಟೆಯ ತುಂಡುಗಳು! ಓರ್ವ ಬಡ ಮಹಿಳೆಯ ಗುಡಿಸಲು ಮನೆಯಲ್ಲಿ ಸಾವಿರಾರು ರೂಪಾಯಿ ಬೆಲೆಯ ಕಣ್ಣು ಕುಕ್ಕುವ ಹೈಮಾಸ್ಕ್ ಎಲ್ ಈ ಡಿ ಲೈಟ್! ಇದು ಫೋಟೋ ಶೂಟ್ ಗಾಗಿ ಸೃಷ್ಟಿಸಿದ ಸ್ಟುಡಿಯೋ ಅಲ್ಲ ಎಂದು ಇನ್ನೂ ನಿಮಗೆ ಅನಿಸುವುದಾದರೆ ನಿಮ್ಮನ್ನು “ಅಂಧ ಭಕ್ತ” ಎಂದು ಘೋಷಿಸಲಾಗುವುದು” ಎಂದಿದೆ.

Also Read: ಮುಸ್ಲಿಂ ಲೀಗ್ ಧ್ವಜ ಕಿತ್ತರು ಎಂದು ಮೂಡಬಿದ್ರೆಯ ಹಳೆಯ ವೀಡಿಯೋ ಕೇರಳದಲ್ಲಿ ವೈರಲ್
Fact Check/Verification
ಸತ್ಯಶೋಧನೆಯ ವೇಳೆ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು 17 ಸೆಪ್ಟೆಂಬರ್ 2023 ರಂದು ಪ್ರಧಾನಿ ಮೋದಿಯವರ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿದ ಫೋಟೊ ಗಮನಿಸಿದ್ದೇವೆ. ಇದರಲ್ಲಿ ವೈರಲ್ ಫೋಟೋ ಕೂಡ ಇದೆ.

ಇದಲ್ಲದೆ, ಪ್ರಧಾನಿ ಮೋದಿಯವರ ಯೂಟ್ಯೂಬ್ ಖಾತೆಯಿಂದ 17 ಸೆಪ್ಟೆಂಬರ್ 2023 ರಂದು ಲೈವ್ ಮಾಡಿದ ವೀಡಿಯೋದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕರ್ಮ ದೇವರಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ ಎಂದು ವಿವರಣೆಯಲ್ಲಿದೆ. ಜೊತೆಗೆ ಪ್ರಧಾನಿಯವರು ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದು, ದೇಶದ ವಿವಿಧೆಡೆಯಿಂದ ಬಂದ ಕುಶಲಕರ್ಮಿಗಳನ್ನು ವಸ್ತು ಪ್ರದರ್ಶನದಲ್ಲಿ ಭೇಟಿ ಮಾಡಿದರು ಎಂದಿದೆ.

ಪಿಎಂ ಇಂಡಿಯಾದ ವೆಬ್ಸೈಟ್ನಲ್ಲಿಯೂ ನಾವು ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಚಿತ್ರದ ಜೊತೆಗಿನ ಶೀರ್ಷಿಕೆಯು ಹೀಗಿದೆ, “ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ‘ಪಿಎಂ ವಿಶ್ವಕರ್ಮ’ ಯೋಜನೆಯನ್ನು ಪ್ರಾರಂಭಿಸುವ ಮೊದಲು 17 ಸೆಪ್ಟೆಂಬರ್ 2023 ರಂದು ನವದೆಹಲಿಯ ದ್ವಾರಕಾದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (ಯಶೋಭೂಮಿ) ನಲ್ಲಿ ನಡೆದ ಪ್ರದರ್ಶನಕ್ಕೆ ಪ್ರಧಾನಿ ಭೇಟಿ ನೀಡಿದರು.

ಅಕ್ಟೋಬರ್ 2023 ರಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಬಿಡುಗಡೆ ಮಾಡಿದ ನಿಯತಕಾಲಿಕದಲ್ಲಿಯೂ ನಾವು ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಯಶೋಭೂಮಿ ತಲುಪಿದ ನಂತರ ಪ್ರಧಾನಿ ಮೋದಿ ಅವರು ಪ್ರದರ್ಶನಕ್ಕೆ ಹೋದರು ಎಂದು ಈ ನಿಯತಕಾಲಿಕದಲ್ಲಿ ವರದಿಯಾಗಿದೆ.

17 ಸೆಪ್ಟೆಂಬರ್ 2023 ರಂದು ಪಿಐಬಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಧಾನಿ ಮೋದಿ ಅವರು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗಾಗಿ ‘ಪಿಎಂ ವಿಶ್ವಕರ್ಮ’ ಯೋಜನೆಯನ್ನು ಪ್ರಾರಂಭಿಸಿದ್ದರು ಮತ್ತು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ ಯಶೋಭೂಮಿಯ ಮೊದಲ ಹಂತದಲ್ಲಿ, ಅವರು ಸ್ಥಳಕ್ಕೆ ತಲುಪಿದ ನಂತರ ‘ಗುರು-ಶಿಷ್ಯ ಪರಂಪರೆ’ ಮತ್ತು ‘ಹೊಸ ತಂತ್ರಜ್ಞಾನ’ ಪ್ರದರ್ಶನಗಳಿಗೆ ಭೇಟಿ ನೀಡಿದರು ಎಂದಿದೆ.

Conclusion
ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ವೈರಲ್ ಚಿತ್ರವು ಎರಡು ವರ್ಷಗಳಷ್ಟು ಹಳೆಯದು ಮತ್ತು ಕೃತಕ ಗುಡಿಸಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಡ ಮಹಿಳೆಯನ್ನು ಭೇಟಿಯಾಗುವಂತೆ ನಟಿಸುತ್ತಿದ್ದಾರೆ ಎನ್ನುವುದು ತಪ್ಪಾಗಿದೆ. ವಿಶ್ವಕರ್ಮ ಯೋಜನೆಗೆ ಚಾಲನೆಯ ಭಾಗವಾಗಿ ಕುಶಲಕರ್ಮಿಗಳ ಭೇಟಿ ಇದು ಎಂದು ಕಂಡುಬಂದಿದೆ.
Also Read: ವಿಶ್ವದ ಅತ್ಯಂತ ಭ್ರಷ್ಟ 10 ಪಕ್ಷಗಳಲ್ಲಿ ಕಾಂಗ್ರೆಸ್ಗೆ ಪ್ರಥಮ ಸ್ಥಾನ ಎಂದ ಬಿಬಿಸಿ, ಇದು ನಿಜವೇ?
Our Sources
X post by Narendra Modi Dated: September 17, 2023
YouTube video by Narendra Modi, Dated: September 17, 2023
Image By PM India Website
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)