Sunday, March 16, 2025
ಕನ್ನಡ

Fact Check

Fact Check: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?

Written By Komal Singh, Translated By Ishwarachandra B G, Edited By Pankaj Menon
Dec 7, 2023
banner_image

Claim
ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆ

Fact
ಕರ್ನಾಟಕ ಸರ್ಕಾರ ರಾಜ್ಯದ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿಲ್ಲ. ವೈರಲ್‌ ಆಗಿರುವ ವೀಡಿಯೋ ಚೆನ್ನರಾಯಪಟ್ಟಣದ ಶಾಲೆಯೊಂದರದ್ದಾಗಿದೆ

‘ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ಕುರಾನ್ ಬೋಧನೆಯನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಎಲ್ಲ ಶಾಲೆಗಳಲ್ಲಿ ಕುರಾನ್‌ ಕಲಿಸುವುದನ್ನು ಕಡ್ಡಾಯ ಮಾಡಿದೆ. ಹಿಂದೂಗಳು ಬಿಜೆ ಸರ್ಕಾರದ ವಿರುದ್ಧ ಉಚಿತ ಬಸ್‌ ಟಿಕೆಟ್ ಮತ್ತು ಉಚಿತ ವಿದ್ಯುತ್‌ ಗಾಗಿ ಕಾಂಗ್ರೆಸ್‌ ಗೆ ಓಟು ಹಾಕಿದರು. ಈಗ ಹೇಗೆ ಅನುಭವಿಸುತ್ತಿದ್ದಾರೆ ನೋಡಿ, ಆದ್ದರಿಂದ ಸನಾತನಿಗಳು ಮುಕ್ತವಾಗಿ ತಿನ್ನುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ನೀವು ಕ್ರಮೇಣ ಅಳಿದುಹೋಗುತ್ತೀರಿ” ಎಂದಿದೆ.  

Also Read: ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ ಎಂದು ಕೇರಳದ ಹಳೆ ವೀಡಿಯೋ ವೈರಲ್‌

Fact Check: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?
ಎಕ್ಸ್ ನಲ್ಲಿ ಕಂಡುಬಂದ ಕ್ಲೇಮ್‌

ವೈರಲ್‌ ಆಗುತ್ತಿರುವ ಈ ವೀಡಿಯೋದಲ್ಲಿ ಶಾಲಾ ಪ್ರಾರ್ಥನೆಯಲ್ಲಿ ಬಕ್ರೀದ್‌ ಆಚರಿಸುತ್ತಿರುವುದು ಕಂಡುಬಂದಿದೆ. ಶಾಲಾ ಮಕ್ಕಳು ಕೈಮುಗಿದು ಕುಳಿತಿರುವ ವೇಳೆ ಕುರಾನ್ ಹೇಳುವುದನ್ನು ಕಾಣಬಹುದು. ಮತ್ತು ವಿದ್ಯಾರ್ಥಿಯೊಬ್ಬ ಬಕ್ರೀದ್ ಅರ್ಥ ವಿವರಿಸುವುದು ನಂತರ ಶಾಲಾ ಶಿಕ್ಷಕರು ಮಕ್ಕಳನ್ನು ಉದ್ದೇಶಿಸಿ ಬಕ್ರೀದ್‌ ಶುಭಾಶಗಳು ಎಂದು ಹಾರೈಸುವುದನ್ನು ಕಾಣಬಹುದು.  

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋದ ಕೀಫ್ರೇಂ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಆ ಪ್ರಕಾರ, ಜುಲೈ 1, 2023 ರಂದು ಮುನ್ಸಿಫ್ ಡೈಲಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ಲಭ್ಯವಾಗಿದೆ. ವೈರಲ್ ವೀಡಿಯೊದ ಆಯ್ದ ಭಾಗಗಳನ್ನು ವರದಿಯಲ್ಲಿ ಚಿತ್ರಗಳಾಗಿ ನೋಡಬಹುದು. ಈ ವರದಿಯಲ್ಲಿ, ಈ ವೀಡಿಯೋ ಕರ್ನಾಟಕದ ಚನ್ನರಾಯಪಟ್ಟಣದ ಜ್ಞಾನಸಾಗರ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ ನದ್ದು ಎಂದು ತಿಳಿದುಬಂದಿದೆ. ವರದಿ ಪ್ರಕಾರ, ಶಾಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸುವಾಗ ಕುರಾನ್ ನ ಶ್ಲೋಕಗಳನ್ನು ಪಠಿಸಲಾಯಿತು, ಅದರ ವೀಡಿಯೋ ಈಗ ವಿಭಿನ್ನ ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದೆ.

ಈ ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಯ ಸಮಯದಲ್ಲಿ ವಿದ್ಯಾರ್ಥಿಗಳು ಇಸ್ಲಾಮಿಕ್ ಶ್ಲೋಕಗಳನ್ನು ಪಠಿಸಿದ ನಂತರ ವಿವಾದ ಶುರುವಾಗಿದೆ ಎಂದು ನಾವು ತನಿಖೆ ವೇಳೆ ಕಂಡುಕೊಂಡಿದ್ದೇವೆ. ಜುಲೈ 1, 2023 ರಿಂದ ಹಲವಾರು ಮಾಧ್ಯಮ ವರದಿಗಳನ್ನು ಗಮನಿಸಿದ್ದು, ಅದರಲ್ಲಿ ಹಿಂದೂ ಸಂಘಟನೆಗೆ ಸಂಬಂಧಿಸಿದ 6-8 ಸಸ್ಥಳೀಯರು ಜ್ಞಾನಸಾಗರ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಗೆ ಹೋಗಿ ಆಕ್ಷೇಪಣೆಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಅವರು ಪೊಲೀಸರ ಸಮ್ಮುಖದಲ್ಲಿ ಶಾಲಾ ಅಧಿಕಾರಿಗಳನ್ನು ಭೇಟಿಯಾಗಿ ವಿವರಣೆ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ನೋಡಬಹುದು.

Also Read: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!

Fact Check: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?
ನ್ಯೂಸ್‌ 9 ವರದಿ

“ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕತೆಯನ್ನು ತುಂಬಲು ಮಾತ್ರ ನಾವು ಇದನ್ನು ಮಾಡಿದ್ದೇವೆ” ಎಂದು ಶಾಲೆಯ ಪ್ರಾಂಶುಪಾಲರಾದ ಸುಜಾ ಫಿಲಿಪ್ ಪೊಲೀಸರ ಸಮ್ಮುಖದಲ್ಲಿ ವೀಡಿಯೋ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನಮಗೆ ಬೇರೆ ಯಾವುದೇ ಉದ್ದೇಶಗಳಿರಲಿಲ್ಲ. ಅದು ತಪ್ಪಾಗಿದ್ದರೆ, ಅದನ್ನು ಮತ್ತೆ ಮಾಡದಂತೆ ನಾವು ಖಚಿತಪಡಿಸುತ್ತೇವೆ. ನಾವು ಇಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ. ಯಾವುದೇ ಮಗುವಿಗೆ ಕುರಾನ್ ಕಲಿಸಲಾಗಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಕೇವಲ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ಅದನ್ನು ಪಠಿಸಿದರು. ಅದೊಂದು ಜಾತ್ಯತೀತ ಶಾಲೆ. ” ಎಂದು ಅವರು ಹೇಳುತ್ತಾರೆ.

Fact Check: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?
ಡೈಲಿ ಸಲಾರ್ ವೀಡಿಯೋ

ಇನ್ನು ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್ ಕಡ್ಡಾಯಗೊಳಿಸಲು ಕರ್ನಾಟಕ ಸರ್ಕಾರ ಯಾವುದಾದರೂ ಆದೇಶ ಹೊರಡಿಸಿದೆಯೇ ಎಂದು ನಾವು ಹುಡುಕಿದ್ದೇವೆ. ಸರ್ಕಾರದ  ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲೂ ಹುಡುಕಿದ್ದೇವೆ. ಆದರೆ ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಇದಲ್ಲದೆ, ಶಾಲೆಗಳಲ್ಲಿ ಕುರಾನ್ ಬೋಧನೆಗೆ ಸಂಬಂಧಿಸಿದ ಯಾವುದೇ ಪತ್ರಿಕಾ ಪ್ರಕಟಣೆಯನ್ನು ಸಹ ಹೊರಡಿಸಲಾಗಿಲ್ಲ. ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ಮಾಧ್ಯಮ ವರದಿಯೂ ಪತ್ತೆಯಾಗಿಲ್ಲ. ಆದ್ದರಿಂದ ವೈರಲ್‌ ಹೇಳಿಕೆ ಸತ್ಯಾಂಶದಿಂದ ಕೂಡಿಲ್ಲ ಎಂದು ಕಂಡುಕೊಂಡಿದ್ದೇವೆ.

Also Read: ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ವೀಡಿಯೋ ನಿಜವೇ?

Conclusion

ಸತ್ಯಶೋಧನೆಯ ಪ್ರಕಾರ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕುರಾನ್‌ ಬೋಧನೆಯನ್ನು ಕಡ್ಡಾಯಗೊಳಿಸಿದೆ ಎಂಬ ಹೇಳಿಕೆಯು ಸುಳ್ಳಾಗಿದೆ.  

Result: False

Our Sources
Report by News nine, Dated: July 1, 2023

Statement by the school principal of Jnanasagara International Public School, Suja Philip in the video report by Daily Salar Digital, Dated: July 1, 2023

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,450

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.