Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ
ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ ಎಂಬ ವರದಿ ನಿಜವಲ್ಲ, ಕೊಲೆಯಾದ ವ್ಯಕ್ತಿ ಮುಸ್ಲಿಂ ವ್ಯಾಪಾರಿಯಾಗಿದ್ದು ಘಟನೆಗೆ ಯಾವುದೇ ಕೋಮು ಕೋನವಿಲ್ಲ
ಕಳೆದ ವಾರ ಢಾಕಾದಲ್ಲಿ ಗುಜರಿ ವ್ಯಾಪಾರಿಯನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಿದ ಘಟನೆ ಬಾಂಗ್ಲಾದೇಶದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಮೃತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.
“ಬಾಂಗ್ಲಾದೇಶ ಹಿಂದೂಗಳ ಪರಿಸ್ಥಿತಿ ಎಚ್ಚರ ಹಿಂದುಗಳೇ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಸಂಬಂಧಿತ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ ಉದಯವಾಣಿ, ಸನಾತನ ಪ್ರಭಾತ, ಇಂಡಿಯಾ ಟಿವಿ,ಮಿರರ್ ನೌ,ವಿಯಾನ್,ರಿಪಬ್ಲಿಕ್ ವರ್ಲ್ಡ್,ಇಂಡಿಯಾ ಟುಡೇ, ನ್ಯೂಸ್ 24, ಪಂಜಾಬ್ ಕೇಸರಿ ಸೇರಿದಂತೆ ಅನೇಕ ಮಾಧ್ಯಮಗಳು ಮೃತನನ್ನು ಹಿಂದೂ ವ್ಯಾಪಾರಿ/ಗುಜರಿ ವ್ಯಾಪಾರಿ ‘ಲಾಲ್ ಚಂದ್ ಸೋಹಾಗ್’ ಎಂದು ಗುರುತಿಸಿವೆ.



ಕ್ರೂರ ಹತ್ಯೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ಈ ಘಟನೆಗೆ ಕೋಮು ಹಿನ್ನೆಲೆಯನ್ನು ನೀಡಿದ್ದಾರೆ. ಈ ಹತ್ಯೆಯು ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆದ ಇತ್ತೀಚಿನ ದಾಳಿಯ ಘಟನೆಯಾಗಿದೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ನ್ಯೂಸ್ಚೆಕರ್ ಈ ಹೇಳಿಕೆಗಳು ಸುಳ್ಳು ಎಂದು ಕಂಡುಕೊಂಡಿದೆ.
Also Read: ಜಗನ್ನಾಥ ರಥಯಾತ್ರೆ ಯನ್ನು ರಾಹುಲ್ ಗಾಂಧಿ ನಾಟಕ ಎಂದು ಕರೆದಿದ್ದಾರೆಯೇ?
ಬಂಗಾಳಿ ಭಾಷೆಯಲ್ಲಿ ‘ಲಾಲ್ ಚಂದ್’, ‘ಮರ್ಡರ್’ ಮತ್ತು ‘ಢಾಕಾ’ ಎಂದು ಗೂಗಲ್ಕೀವರ್ಡ್ ಸರ್ಚ್ ಮಾಡಿದಾಗ ಬಾಂಗ್ಲಾದೇಶ ಮೂಲದ ಪ್ರೊಥೋಮ್ ಅಲೋ ಅವರ ಜುಲೈ 12, 2025 ರ ವರದಿ ಲಭ್ಯವಾಗಿದೆ. ಢಾಕಾದ ಮಿಟ್ಫೋರ್ಡ್ ಆಸ್ಪತ್ರೆಯ ಮುಂದೆ 39 ವರ್ಷದ ಗುಜರಿ ಡೀಲರ್ ಲಾಲ್ ಚಂದ್ ಅಲಿಯಾಸ್ ಸೊಹಾಗ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಅದು ಹೇಳಿದೆ. ಈ ಸಂಬಂಧ ಮೃತನ ಸಹೋದರಿ ಮಂಜುರಾ ಬೇಗಂ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಮಹಮುದುಲ್ ಹಸನ್ ಅಲಿಯಾಸ್ ಮೊಹಿನ್ ಮತ್ತು ತಾರಿಕ್ ರೆಹಮಾನ್ ಅಲಿಯಾಸ್ ರಾಬಿನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮೊಹಮ್ಮದ್ ಮೊನಿರುಝಮಾನ್ ತಿಳಿಸಿದ್ದಾರೆ.

ವರದಿಯು ವೈರಲ್ ವೀಡಿಯೋದ ಸ್ಕ್ರೀನ್ ಶಾಟ್ ನ್ನು ಸಹ ಒಳಗೊಂಡಿದೆ. ಆದಾಗ್ಯೂ, ವರದಿಯಲ್ಲಿ ಕೋಮು ವಿಚಾರದ ಯಾವುದೇ ಉಲ್ಲೇಖವನ್ನು ನಾವು ಕಂಡಿಲ್ಲ.
ಮೃತರ ಫೋಟೋವನ್ನು ಹಾಕಿರುವಡೈಲಿ ಸ್ಟಾರ್, ತನ್ನ ವರದಿಯಲ್ಲಿ, ಪೊಲೀಸರು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರು “ಹಳೆ ಢಾಕಾದ ಮಿಟ್ಫೋರ್ಡ್ ಪ್ರದೇಶದಲ್ಲಿ ಗುಜರಿ ವ್ಯಾಪಾರದ ನಿಯಂತ್ರಣ ಮತ್ತು ಪ್ರಾದೇಶಿಕ ಪ್ರಾಬಲ್ಯದ ಕುರಿತಾದ ದೀರ್ಘಕಾಲದ ಜಗಳ” ಸೋಹಾಗ್ ಅವರ ಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ ಎಂದಿದೆ.
“ಆರೋಪಿಯು ನನ್ನ ಚಿಕ್ಕಪ್ಪನಿಗೆ ಅಂಗಡಿಯನ್ನು ಮುಚ್ಚುವಂತೆ ಅಥವಾ ಪ್ರತಿ ತಿಂಗಳು 2 ಲಕ್ಷ ಟಿಕೆ ಮತ್ತು ತನ್ನ ಆದಾಯದ ಒಂದು ಭಾಗವನ್ನು ನೀಡುವಂತೆ ಕೇಳಿದ್ದನು. ಚಿಕ್ಕಪ್ಪ ಒಪ್ಪಲಿಲ್ಲ, ಮತ್ತು ಇದಕ್ಕಾಗಿ ಅವರು ಆತನನ್ನು ಕ್ರೂರವಾಗಿ ಕೊಂದರು” ಎಂದು ಸೊಹಾಗ್ ಅವರ ಸೋದರ ಸೊಸೆ ಬಿಥಿ ಅಕ್ಟರ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮೃತನ ಪತ್ನಿಯನ್ನು ಲಕ್ಕಿ ಅಕ್ಟರ್ ಎಂದು ಗುರುತಿಸಲಾಗಿದೆ.

ಜುಲೈ 12, 2025 ರ ಅಲೋಕಿಟೊ ಬಾಂಗ್ಲಾದೇಶದ ವರದಿಯ ಪ್ರಕಾರ, ಸಂತ್ರಸ್ತನನ್ನು ಸ್ವ ಗ್ರಾಮದಲ್ಲಿ ತಾಯಿಯ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಗಿದೆ, ಇದು ಸೊಹಾಗ್ ಹಿಂದೂ ಅಲ್ಲ ಎಂದು ಸೂಚಿಸುತ್ತದೆ.
ಇದಲ್ಲದೆ, ಜುಲೈ 13, 2025 ರಿಂದ ಬಾಂಗ್ಲಾದೇಶದ ಮುಖ್ಯ ಸಲಹೆಗಾರರ ಪ್ರೆಸ್ ವಿಂಗ್ ಫ್ಯಾಕ್ಸ್ಟ್ ನಫೇಸ್ಬುಕ್ ಪೋಸ್ಟ್ ಅನ್ನು ಸಹ ನಾವು ನೋಡಿದ್ದೇವೆ. ಮೃತರು ಮುಸ್ಲಿಂ ಮತ್ತು ಹಲವುರು ಹೇಳಿಕೊಂಡಂತೆ ಹಿಂದೂ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮೊಹಮ್ಮದ್ ಸೊಹಾಗ್ ಅಲಿಯಾಸ್ ಲಾಲ್ ಚಂದ್ ಮುಸ್ಲಿಂ ಉದ್ಯಮಿಯಾಗಿದ್ದ. ಅವರ ತಂದೆಯ ಹೆಸರು ಮೊಹಮ್ಮದ್ ಅಯೂಬ್ ಅಲಿ, ತಾಯಿಯ ಹೆಸರು ಆಲಿಯಾ ಬೇಗಂ. ಮೃತರು ಪತ್ನಿ ಲಕ್ಕಿ ಬೇಗಂ, ಸಹೋದರಿ ಫತೇಮಾ ಮತ್ತು ಪುತ್ರ ಸೋಹನ್ ಅವರನ್ನು ಅಗಲಿದ್ದಾರೆ.
ತನಿಖೆಯ ಪ್ರಕಾರ, ಢಾಕಾದಲ್ಲಿ ಹಿಂದೂ ವ್ಯಾಪಾರಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.
Also Read: ಇಂಟರ್ ಮಿಲನ್ ಫುಟ್ಬಾಲ್ ಕ್ಲಬ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ವೈರಲ್ ಫೋಟೋ ನಿಜವೇ?
Our Sources
Report By Prothom Alo, Dated: July 12, 2025
Report By The Daily Star, Dated: July 12, 2025
Report By Alokito Bangladesh, Dated: July 12, 2025
Facebook Post By Bangladesh Chief Advisor’s Press Wing Facts, Dated: July 13, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
November 22, 2025
Tanujit Das
November 17, 2025
Ishwarachandra B G
November 3, 2025