Friday, December 5, 2025

Fact Check

ಜಗನ್ನಾಥ ರಥಯಾತ್ರೆ ಯನ್ನು ರಾಹುಲ್ ಗಾಂಧಿ ನಾಟಕ ಎಂದು ಕರೆದಿದ್ದಾರೆಯೇ?

Written By Salman, Translated By Ishwarachandra B G, Edited By Pankaj Menon
Jul 15, 2025
banner_image

Claim

image

ರಾಹುಲ್ ಗಾಂಧಿ ಜಗನ್ನಾಥ ರಥಯಾತ್ರೆಯನ್ನು ನಾಟಕ ಎಂದು ಕರೆದಿದ್ದಾರೆ

Fact

image

ರಾಹುಲ್‌ ಗಾಂಧಿಯವರ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಅರ್ಥ ಬರುವಂತೆ ವೈರಲ್ ಮಾಡಲಾಗುತ್ತಿದೆ

ಭಗವಾನ್ ಜಗನ್ನಾಥನ ರಥಯಾತ್ರೆಯನ್ನು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರು ‘ನಾಟಕ’ ಎಂದು ಬಣ್ಣಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಬಳಕೆದಾರರು ರಾಹುಲ್ ಗಾಂಧಿಯನ್ನು ಟೀಕಿಸುತ್ತಿದ್ದಾರೆ ಮತ್ತು ಭಗವಾನ್ ಜಗನ್ನಾಥನನ್ನು ಅವಮಾನಿಸುವ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ವೀಡಿಯೋದಲ್ಲಿ ರಾಹುಲ್ ಗಾಂಧಿ ಅವರು “ಒಡಿಶಾದಲ್ಲಿ ಜಗನ್ನಾಥ ಯಾತ್ರೆ ನಡೆದಾಗ, ಊಹಿಸಿಕೊಳ್ಳಿ, ರಥ ಹೊರಬರುತ್ತದೆ, ಜಗನ್ನಾಥ ಯಾತ್ರೆಯ ರಥ ಹೊರಬರುತ್ತದೆ. ಲಕ್ಷಾಂತರ ಜನರು, ಲಕ್ಷಾಂತರ ಜನರು ಅದನ್ನು ವೀಕ್ಷಿಸುತ್ತಾರೆ, ಅನುಸರಿಸುತ್ತಾರೆ. ಮತ್ತು ನಂತರ ಒಂದು ನಾಟಕ ನಡೆಯುತ್ತದೆ.” ಎಂದು ಹೇಳುವುದು ಕಾಣಿಸುತ್ತದೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಳಕೆದಾರರೊಬ್ಬರು, “ಒಡಿಶಾದ ಮಣ್ಣಿನ ಮೇಲೆ ನಿಂತಿರುವ ರಾಹುಲ್ ಗಾಂಧಿ, ಭಗವಾನ್ ಜಗನ್ನಾಥನ ರಥಯಾತ್ರೆಯನ್ನು ‘ನಾಟಕ’ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಅಂತಿಮವಾಗಿ ವೋಟ್ ಬ್ಯಾಂಕ್‌ ಗಾಗಿ ಮಹಾಪ್ರಭುವನ್ನು ಅವಮಾನಿಸಿದೆ, ಕಾಂಗ್ರೆಸ್ ಅಸಂಖ್ಯಾತ ಭಕ್ತರು ಮತ್ತು ಒಡಿಶಾದ ಜನರ ಭಾವನೆಗಳನ್ನು ನೋಯಿಸಿದೆ” ಎಂದು ಹೇಳುತ್ತಾರೆ.

ಜಗನ್ನಾಥ ರಥಯಾತ್ರೆ ಯನ್ನು ರಾಹುಲ್ ಗಾಂಧಿ ನಾಟಕ ಎಂದು ಕರೆದಿದ್ದಾರೆಯೇ?

ಇದೇ ರೀತಿಯ ಹೇಳಿಕೆಗಳಿರುವ ಪೋಸ್ಟ್ ಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

Also Read: ಇಂಟರ್ ಮಿಲನ್ ಫುಟ್ಬಾಲ್ ಕ್ಲಬ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ವೈರಲ್ ಫೋಟೋ ನಿಜವೇ?

Fact Check/Verification

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಗನ್ನಾಥ ರಥಯಾತ್ರೆಯನ್ನು “ನಾಟಕ” ಎಂದು ಹೇಳಿದ ನಂತರ ವೈರಲ್ ಆದ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಹುಡುಕಿದ್ದೇವೆ. ಜುಲೈ 11 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಲೈವ್ ಸ್ಟ್ರೀಮ್ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.

ವೀಡಿಯೋದೊಂದಿಗೆ ನೀಡಲಾದ ಮಾಹಿತಿಯ ಪ್ರಕಾರ, ಈ ವೀಡಿಯೋ ಒಡಿಶಾದ ಭುವನೇಶ್ವರದಲ್ಲಿ ಆಯೋಜಿಸಲಾದ ‘ಸಂವಿಧಾನವನ್ನು ಉಳಿಸಿ, ಒಳಗೊಳ್ಳುವಿಕೆ’ ಕಾರ್ಯಕ್ರಮದ್ದಾಗಿದೆ.

ವೀಡಿಯೋದಲ್ಲಿ, ರಾಹುಲ್ ಗಾಂಧಿ 25 ನಿಮಿಷಗಳ ಅವಧಿಯಲ್ಲಿ ಕೈಗಾರಿಕೋದ್ಯಮಿ ಅದಾನಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಹೇಳುತ್ತಾರೆ, “… ನಾವು ಎಲ್ಲಿ ನೋಡಿದರೂ, ಅದು ಒಡಿಶಾ, ಛತ್ತೀಸ್‌ಘಢವಾಗಿರಲಿ, ನಾವು ಎಲ್ಲಿ ನೋಡಿದರೂ, ಒಂದೇ ಹೆಸರು ಇದೆ – ಅದಾನಿ, ಅದಾನಿ, ಅದಾನಿ. ಇದರರ್ಥ ಅದಾನಿ ಒಡಿಶಾ ಸರ್ಕಾರವನ್ನು ನಡೆಸುತ್ತಿದ್ದಾರೆ, ಅದಾನಿ ನರೇಂದ್ರ ಮೋದಿಯವರನ್ನು ನಡೆಸುತ್ತಿದ್ದಾರೆ.

ಇದರ ನಂತರ, ವೈರಲ್ ಕ್ಲಿಪ್ ಭಾಗವು 26:05 ನಿಮಿಷಗಳಲ್ಲಿ ಪ್ರಾರಂಭವಾಗುತ್ತದೆ. “ಒಡಿಶಾದಲ್ಲಿ ಜಗನ್ನಾಥ ಯಾತ್ರೆ ನಡೆದಾಗ. ಸ್ವಲ್ಪ ಊಹಿಸಿ, ಒಂದು ರಥ ಹೊರಬರುತ್ತದೆ. ಲಕ್ಷಾಂತರ ಜನರು, ಲಕ್ಷಾಂತರ ಜನರು ಅವನನ್ನು ನೋಡುತ್ತಾರೆ, ಅವನನ್ನು ಅನುಸರಿಸುತ್ತಾರೆ. ತದನಂತರ ಒಂದು ನಾಟಕವಿದೆ. ಅದಾನಿ ಜಿ ಮತ್ತು ಅವರ ಕುಟುಂಬಕ್ಕಾಗಿ ರಥವನ್ನು ನಿಲ್ಲಿಸಲಾಗುತ್ತದೆ. ಇದು ಒಡಿಶಾ ಸರ್ಕಾರದ ಬಗ್ಗೆ ಎಲ್ಲದರ ಬಗ್ಗೆ ನಿಮಗೆ ತಿಳುವಳಿಕೆಯನ್ನು ನೀಡುತ್ತದೆ. ಇದು ಒಡಿಶಾ ಸರ್ಕಾರವಲ್ಲ, ಇದು ನಿಮ್ಮ ಸರ್ಕಾರವಲ್ಲ, ಇದು ಅದಾನಿಯಂತಹ 5-6 ಶತಕೋಟ್ಯಾಧಿಪತಿಗಳ ಸರ್ಕಾರ” ಎಂದು ಅವರು ಹೇಳುವುದು ಕಾಣುತ್ತದೆ.

ಅದಾನಿ ಮತ್ತು ಅವರ ಕುಟುಂಬಕ್ಕಾಗಿ ನಾಟಕೀಯವಾಗಿ ಜಗನ್ನಾಥ ರಥವನ್ನು ನಿಲ್ಲಿಸಲಾಗಿದೆ ಎಂದು ರಾಹುಲ್ ಗಾಂಧಿ ವೀಡಿಯೋದಲ್ಲಿ ಆರೋಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ವೈರಲ್ ವೀಡಿಯೋದಲ್ಲಿ, ಗೊಂದಲ ಸೃಷ್ಟಿಸಲು ಅದಾನಿ ಭಾಗವನ್ನು ಕತ್ತರಿಸಲಾಗಿದೆ.

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಸಂಬಂಧಿಸಿದ ಹಲವಾರು ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಜುಲೈ 11 ರಂದು ಪ್ರಕಟವಾದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ, ಒಡಿಶಾದಲ್ಲಿ ಬಿಜೆಪಿ ಸರ್ಕಾರವನ್ನು 5-6 ದೊಡ್ಡ ಕೈಗಾರಿಕೋದ್ಯಮಿಗಳು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ ಮತ್ತು ಅದರ ಪರಿಣಾಮವು ಪುರಿಯಲ್ಲಿನ ರಥಯಾತ್ರೆಯ ಸಮಯದಲ್ಲಿ ಕಂಡುಬಂದಿದೆ ಎಂದಿದೆ.

ಜಗನ್ನಾಥ ರಥಯಾತ್ರೆ ಯನ್ನು ರಾಹುಲ್ ಗಾಂಧಿ ನಾಟಕ ಎಂದು ಕರೆದಿದ್ದಾರೆಯೇ?
ನ್ಯೂ ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ

ಜುಲೈ 11ರ ಔಟ್ ಲುಕ್ ವರದಿಯ ಶೀರ್ಷಿಕೆಯಲ್ಲಿ, ಒಡಿಶಾ ಸರ್ಕಾರವು ಅದಾನಿಗೆ ಲಾಭ ಮಾಡಿಕೊಟ್ಟಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ ಮತ್ತು ಅವರಿಗಾಗಿ ರಥಯಾತ್ರೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ ಎಂದು ಬರೆಯಲಾಗಿದೆ. ವರದಿಗಳ ಪ್ರಕಾರ, ಅದಾನಿ ಮತ್ತು ಅವರ ಕುಟುಂಬವು ರಥಯಾತ್ರೆ ಉತ್ಸವದಲ್ಲಿ ಭಾಗವಹಿಸಲು ಜೂನ್ 28 ರಂದು ಪುರಿಗೆ ಪ್ರಯಾಣಿಸಿತು.

ಆದರೆ, ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು “ಸುಳ್ಳು ಮತ್ತು ಆಧಾರ ರಹಿತ” ಎಂದು ಕರೆದಿದ್ದಾರೆ.

ಜೂನ್‌ ನಲ್ಲಿ ನಡೆದ ಉತ್ಸವದ ಸಂದರ್ಭ ಒಡಿಶಾದ ಬಿಜೆಪಿ ಸರ್ಕಾರವು ಅದಾನಿಗಾಗಿ ಜಗನ್ನಾಥ ಯಾತ್ರಾ ರಥವನ್ನು ತಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅದೇ ಸಮಯದಲ್ಲಿ, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ರಥಯಾತ್ರೆಯ ದುರಾಡಳಿತದ ಬಗ್ಗೆ ಸರ್ಕಾರವನ್ನು ಟೀಕಿಸಿದ್ದರು.

ಪುರಿಯ ಗ್ರ್ಯಾಂಡ್ ರಸ್ತೆಯಲ್ಲಿ ರಥಯಾತ್ರೆಯ ‘ರಥ ಎಳೆಯುವ’ ಮಾರಂಭದಲ್ಲಿ ಜನದಟ್ಟಣೆಯಿಂದಾಗಿ 500 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದರು. ಇದರ ನಂತರ, ಪ್ರತಿಪಕ್ಷಗಳು ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದವು.

Conclusion

ವೈರಲ್ ವೀಡಿಯೋ ಅಪೂರ್ಣವಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಯಲ್ಲಿ, ಜಗನ್ನಾಥ ರಥಯಾತ್ರೆಯನ್ನು ‘ನಾಟಕ’ ಎಂದು ಕರೆಯಲಿಲ್ಲ ಆದರೆ ಕೈಗಾರಿಕೋದ್ಯಮಿ ಅದಾನಿ ಮತ್ತು ಅವರ ಕುಟುಂಬಕ್ಕೆ “ನಾಟಕ” ಎಂದು ಕರೆದರು ಎಂದು ತಿಳಿದುಬಂದಿದೆ.

Also Read: ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ವಿತರಿಸುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ ರಾಹುಲ್ ಗಾಂಧಿ ಫೋಟೋ

Our Sources

YouTube Video By Indian National Congress, Dated: July 11, 2025

Report By The New Indian Express Dated: July 11, 2025

Report By Outlook , July 11, 2025

X post By Naveen Patnaik, June 28, 2025

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)

RESULT
imageMisleading
image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,439

Fact checks done

FOLLOW US
imageimageimageimageimageimageimage