Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಲೋಕಸಭಾ ಅಧಿವೇಶನದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ನಿಮಗೆ ತಿಳಿದಿದೆಯೇ ಎಂದು ವ್ಯಂಗ್ಯವಾಡಿದ್ದಾರೆ
Fact
ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ, ಮೂಲ ವೀಡಿಯೋದಲ್ಲಿ ಠಾಕೂರ್ ಅವರು ವಿರೋಧ ಪಕ್ಷದ ಬಣಕ್ಕೆ ಸೇರಿದ ಸಂಸದರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳುವುದನ್ನು ತೋರಿಸುತ್ತದೆ
ಲೋಕಸಭೆಯ ಅಧಿವೇಶನದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಸಂಸದ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯನ್ನು ಅಣಕಿಸುತ್ತಿರುವುದನ್ನು ತೋರಿಸುವಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಸಂವಿಧಾನದಲ್ಲಿ ಎಷ್ಟು ಫೇಜುಗಳಿವೆ ನಿನಗೆ ಗೊತ್ತಾ. ಅರೆ ನೀನು ಓದೋದೇ ಇಲ್ಲ. ಇಲ್ಲಿ ಬಂದು ಅಲ್ಲಾಡಿಸುತ್ತೀಯಾ. ಸಂವಿಧಾನಕ್ಕೆ ಬೀಗ ಜಡಿದು ತುರ್ತು ಪರಿಸ್ಥಿತಿ ಹೇರಿದ್ದು ನಿನ್ನ ಅಜ್ಜಿ ಅಲ್ಲವೇ? ಅನುರಾಗ್ ಠಾಕೂರ್ ರಾಕ್.. ಪಪ್ಪು ಶಾಕ್” ಎಂದಿದೆ.
Also Read: ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಧರಿಸಿದ್ದರೇ?
ಇದೇ ರೀತಿಯ ಹೇಳಿಕೆಗಳು ಇಲ್ಲಿ, ಇಲ್ಲಿ ಕಂಡುಬಂದಿದೆ.
ಇದರೊಂದಿಗೆ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಅನುರಾಗ್ ಠಾಕೂರ್ ಅವರು “ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಎಷ್ಟು? ಇದು ‘ಇದು’ (ತನ್ನ ಬೆರಳುಗಳಿಂದ ಸನ್ನೆ ಮಾಡಿ) ಇಷ್ಟಿದೆ ಎಂದು ಹೇಳಬೇಡಿ” ಎಂದು ಉದ್ದೇಶಪೂರ್ವಕವಾಗಿ ಗಾಂಧಿಯನ್ನು ಕೇಳುತ್ತಾರೆ, ಈ ಮೂಲಕ ಅವರನ್ನು ಮಾತಿನಲ್ಲಿ ಕಟ್ಟಿಹಾಕುತ್ತಾರೆ. “ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಪ್ರತಿದಿನ ಅದರೊಂದಿಗೆ ತಿರುಗಾಡುತ್ತಿದ್ದೀರಿ. ಒಮ್ಮೆಯೂ ಓದುವ ಮನಸ್ಸಾಗಲಿಲ್ಲವೇ? ನೀವು ಓದುವುದಿಲ್ಲ, ಜೇಬಿನಿಂದ ತೆಗೆದು ನೋಡಿ” ಎಂದು ಹೇಳುವಂತೆ ಇದೆ.
ಈ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಿರುಚಲಾದ ವೀಡಿಯೋ ಎಂದು ಕಂಡುಕೊಂಡಿದೆ.
ನ್ಯೂಸ್‌ಚೆಕರ್ ಮೊದಲು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಜುಲೈ 1, 2024 ರ ಎಎನ್‌ಐ ವರದಿ ಲಭ್ಯವಾಗಿದೆ. ಇದರಲ್ಲಿ “ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?” ಅನುರಾಗ್ ಠಾಕೂರ್ ಇಂಡಿ ಒಕ್ಕೂಟದ ಸಂಸದರನ್ನು ಪ್ರಶ್ನಿಸಿದ್ದಾರೆ ಎಂದಿದೆ.
“ಭಾರತೀಯ ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ಕೇಳುವ ಅವರು ಅದನ್ನು ಓದಲು ಸಹ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಅದನ್ನು ಹಿಡಿದುಕೊಂಡು ಅಲೆಯುತ್ತಾರೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ಸಂಸದರಿಗೆ ಸವಾಲು ಎಸೆದರು,” ಎಂದು ವರದಿಯಲ್ಲಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಹಮೀರ್‌ಪುರ ಸಂಸದರು ಭಾಷಣದ ವೇಳೆ ಹೀಗೆ ಹೇಳಿದರು ಎಂದಿದೆ. ಆದರೆ ಠಾಕೂರ್ ನೇರವಾಗಿ ಗಾಂಧಿಯವರ ಮೇಲೆ ಈ ಪ್ರಶ್ನೆಯನ್ನು ಕೇಳಿದ್ದಾರೆ ಎಂದು ವರದಿಯಲ್ಲಿಲ್ಲ ಎನ್ನುವುದನ್ನು ಗಮನಿಸಿದ್ದೇವೆ.
Also Read: ತಿರುಪತಿ ದೇಗುಲದಲ್ಲಿ ವಿಶೇಷ ದರ್ಶನ, ಲಡ್ಡು ಪ್ರಸಾದ ಬೆಲೆ ಇಳಿಸಲಾಗಿದೆಯೇ?
ಜುಲೈ 2, 2024 ರ ಇದೇ ರೀತಿಯ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಇಲ್ಲಿ ನೋಡಬಹುದು , ಠಾಕೂರ್ ಅವರು ವಿರೋಧ ಪಕ್ಷದ ಸಂಸದರಿಗೆ ಪ್ರಶ್ನೆಯನ್ನು ಹಾಕಿದ್ದಾರೆ ಎಂದು ಇದರಲ್ಲಿದೆ. ಠಾಕೂರ್ ಅವರು ಟೀಕಿಸಿದಾಗ, ರಾಹುಲ್ ಗಾಂಧಿಯವರು ಸದನದಲ್ಲಿರಲಿಲ್ಲ ಎಂದು ಇದರಲ್ಲಿದೆ.
ಹೆಚ್ಚಿನ ಕೀವರ್ಡ್ ಸರ್ಚ್ ವೇಳೆ ಜುಲೈ 1, 2024 ರ ಸಂಸತ್ತಿನ ಯುಟ್ಯೂಬ್ ಚಾನೆಲ್ ಸಂಸದ್ ಟಿವಿ ಯಲ್ಲಿ ಈ ವೀಡಿಯೋಗೆ ನಮಗೆ ಲಭ್ಯವಾಗಿದೆ. “ಅನುರಾಗ್ ಠಾಕೂರ್ ಅವರ ಹೇಳಿಕೆಗಳು, 18ನೇ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ” ಎಂದಿದೆ. ವೈರಲ್ ಆಗಿರುವ ಭಾಷಣದ ದೃಶ್ಯವನ್ನು 56:35 ಮಾರ್ಕ್‌ನಿಂದ ನೋಡಬಹುದು, ಅಲ್ಲಿ ಠಾಕೂರ್‌ರ ಭಾಷಣದ ಸಂದರ್ಭದ ವೇಳೆ ಕ್ಯಾಮೆರಾಗಳು ರಾಹುಲ್ ಗಾಂಧಿಯವರನ್ನು ಕೇಂದ್ರೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಗಮನಿಸಬಹುದು. ಮತ್ತು ವೈರಲ್ ವೀಡಿಯೋಕ್ಕೆ ಇದು ವಿರುದ್ಧವಾಗಿದೆ.
ಅದೇ ರೀತಿ ಠಾಕೂರ್ ಭಾಷಣದ ಟೈಮ್ಸ್ ನೌ ವರದಿಯನ್ನು ಇಲ್ಲಿ ನೋಡಬಹುದು. ಠಾಕೂರ್ ಅವರು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿದ್ದನ್ನು ನಾವು ನೋಡಿದ್ದೇವೆ, ಇದನ್ನು 57:54 ರ ಸಮಯದಿಂದ ನೋಡಬಹುದು.
ತುರ್ತು ಪರಿಸ್ಥಿತಿಗೆ ಸಂಬಂಧಿಸಿ ಕಲ್ಯಾಣ್ ಬ್ಯಾನರ್ಜಿಯವರ ಮೇಲೆ ಠಾಕೂರ್ ಅವರ ವಾಗ್ದಾಳಿಯ ಕುರಿತು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಈ ವೀಡಿಯೋವನ್ನು ರಾಹುಲ್ ಗಾಂಧಿಯವರ ವಿರುದ್ಧವಾಗಿ ಹೇಳಲಾಗಿದೆ ಎಂಬಂತೆ ಎಡಿಟ್ ಮಾಡಿ ಹಂಚಿಕೊಂಡಿರುವುದನ್ನು ಇದು ಖಚಿತಪಡಿಸುತ್ತದೆ.
ಇದರೊಂದಿಗೆ ಜುಲೈ 3, 2024 ರ ಔಟ್‌ಲುಕ್ ವರದಿಯನ್ನು ನಾವು ನೋಡಿದ್ದೇವೆ ಇದರಲ್ಲಿ ಅನುರಾಗ್ ಠಾಕೂರ್ ಅವರ ಟೀಕೆಗಳ ಕುರಿತ ತಿರುಚಲಾದ ಕ್ಲಿಪ್ ಗಳಲ್ಲಿ, ರಾಹುಲ್ ಅವರು ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ಹೇಳುವಂತಿದೆ. ಆದರೆ ಅನುರಾಗ್ ಠಾಕೂರ್ ಭಾಷಣದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಇರಲಿಲ್ಲ ಎಂದು ವರದಿ ಹೇಳುತ್ತದೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಲೋಕಸಭೆಯ ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಮಾತಿನಲ್ಲಿ ಕಟ್ಟಿ ಹಾಕಿದ್ದು, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ನಿಮಗೆ ತಿಳಿದಿದೆಯೇ ಎಂದು ಲೇವಡಿ ಮಾಡಿದ್ದಾರೆ ಎಂದ ವೀಡಿಯೋ ಎಡಿಟ್ ಮಾಡಿದ್ದಾಗಿದೆ.
Also Read: ಬಂಟ್ವಾಳ ನದಿಯಲ್ಲಿ ಚಿರತೆ ಮೊಸಳೆ ಹಿಡಿದ ದೃಶ್ಯ ಎಂದ ವೈರಲ್ ವೀಡಿಯೋ ದಕ್ಷಿಣ ಅಮೆರಿಕದ್ದು!
Our Sources
YouTube video, Sansad TV, Dated: July 1, 2024
Report By ANI, Dated: July 1, 2024
Report By Times of India report, Dated: July 2, 2024
Report By NDTV India, Dated: July 2, 2024
(ಈ ವರದಿಯನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 16, 2024
Vasudha Beri
November 12, 2024
Ishwarachandra B G
August 24, 2024