Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡರು
ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ವಿರುದ್ಧ ಘೋಷಣೆಯುಳ್ಳ ಟಿ-ಶರ್ಟ್ ಗಳನ್ನು ಧರಿಸಿ ಡಿಎಂಕೆ ಸದಸ್ಯರು ಸದನಕ್ಕೆ ಬಂದಿದ್ದು, ಇದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಈ ಮನುಷ್ಯನಿಗೆ ಎಷ್ಟು ಕ್ಯಾಕರಿಸಿ ಉಗಿದ್ದರು ಅಷ್ಟೇ ಸದನದಲ್ಲಿ ಹೇಗೆ ಡ್ರೆಸ್ ಹಾಕಿಬರಬೇಕೆನ್ನುವ ಸಾಮಾನ್ಯ ಜ್ಞಾನ ವಿಲ್ಲದ ಮನುಷ್ಯ ಇವನು” ಎಂದು 0.32 ಸೆಕೆಂಡ್ ಗಳ ವೀಡಿಯೋವನ್ನು ಲಗತ್ತಿಸಲಾಗಿದೆ.

ಈ ವೀಡಿಯೋದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ನೀವು “ಟಿ-ಶರ್ಟ್ ಧರಿಸಿ ಬಂದರೆ, ಘೋಷಣೆ ಕೂಗಿ ಬಂದರೆ… ಸದನ ನಡೆಯುವುದಿಲ್ಲ. ನೀವು ಟಿ-ಶರ್ಟ್ ತೆಗೆದು ಬಂದರೆ, ಸದನ ನಡೆಯುತ್ತದೆ… ಯಾವುದೇ ಲೀಡರ್ ಅಗಿರಲಿ, ನೇತಾರ ಅಗಿರಲಿ, ಸದನದ ಘನತೆ ಗೌರವಗಳನ್ನು ಉಲ್ಲಂಘಿಸುವಂತಿಲ್ಲ” ಎಂದು ಹೇಳುವುದು ಕೇಳಿಸುತ್ತದೆ. ಓಂ ಬಿರ್ಲಾ ಅವರ ಈ ಹೇಳಿಕೆಯ ಮಧ್ಯೆ ರಾಹುಲ್ ಗಾಂಧಿ ಅವರು ಟಿ-ಶರ್ಟ್ ಹಾಕಿಕೊಂಡಿದ್ದು ಮಾತನಾಡಲು ಯತ್ನಿಸುವುದು ಕಾಣಿಸುತ್ತದೆ.
Also Read: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಎಂದು ಫ್ರಾನ್ಸ್ ಫೋಟೋ ವೈರಲ್!
ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಎಡಿಟ್ ಮಾಡಿದ ವೀಡಿಯೋ ಆಗಿದೆ ಎಂದು ಕಂಡುಬಂದಿದೆ ಮತ್ತು ರಾಹುಲ್ ಗಾಂಧಿಯವರನ್ನು ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ನೋಡಿದ್ದೇವೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ಟಿ-ಶರ್ಟ್ ನಲ್ಲಿ ಏನೋ ಬರೆದುಕೊಂಡು ಬಂದಿದ್ದಕ್ಕಾಗಿ, ಅದನ್ನು ತೆಗೆದು ಸದನಕ್ಕೆ ಬರಬೇಕು. ಇದು ಸದನದ ಗೌರವವಲ್ಲ ಎಂಬರ್ಥದಲ್ಲಿ ಹೇಳುವುದು ಕಂಡುಬಂದಿದೆ. ಇದೇ ವೇಳೆ ಒಂದು ಕೀಫ್ರೇಂನಲ್ಲಿ ರಾಹುಲ್ ಗಾಂಧಿಯವರು ಟಿ-ಶರ್ಟ್ ನಲ್ಲಿ ಕಂಡುಬಂದರೂ ಅವರ ಟಿ-ಶರ್ಟ್ ನಲ್ಲಿ ಏನೂ ಬರೆದಿಲ್ಲ ಎಂಬುದನ್ನು ಗಮನಿಸಬಹುದು.

ಇದನ್ನು ಪರಿಗಣಿಸಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಕಂಡುಬಂದಿದ್ದು, ಓಂ ಬಿರ್ಲಾ ಅವರು ಡಿಎಂಕೆ ಸಂಸದರು ಘೋಷಣೆಗಳಿದ್ದ ಟಿ-ಶರ್ಟ್ ಬಳಸಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಕಂಡುಬಂದಿದೆ.
ಮಾರ್ಚ್ 20, 2025ರ ದಿ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಹೊಂದಿರುವ ಟೀ ಶರ್ಟ್ಗಳನ್ನು ಧರಿಸದಂತೆ ಕೇಳಿಕೊಂಡರು ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಸದನವನ್ನು ಮುಂದೂಡಿದರು ಎಂದು ಪಿಟಿಐ ವರದಿ ಮಾಡಿದೆ. ಡಿಎಂಕೆ ಸದಸ್ಯರು ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗೆ ಕರೆ ನೀಡುವ ಹ್ಯಾಶ್ಟ್ಯಾಗ್ಗಳು ಮತ್ತು “ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ” ಎಂಬ ಘೋಷಣೆಗಳನ್ನು ಹೊಂದಿರುವ ಬಿಳಿ ಟಿ-ಶರ್ಟ್ಗಳನ್ನು ಧರಿಸಿದ್ದರು. ಅಂತಹ ಬಟ್ಟೆಗಳನ್ನು ಧರಿಸಿದ ಸದಸ್ಯರು ಸದನದ ಹೊರಗೆ ಹೋಗಿ ಸಂಸದೀಯ ನಿಯಮಗಳ ಪ್ರಕಾರ ಸರಿಯಾದ ಬಟ್ಟೆಗಳನ್ನು ಧರಿಸಿ ಹಿಂತಿರುಗಬೇಕೆಂದು ಓಂ ಬಿರ್ಲಾ ಆದೇಶಿಸಿದರು.” ಎಂದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿ ಮಾರ್ಚ್ 20, 2025ರಂದು ಪಿಟಿಐ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಅನ್ನು ಗಮನಿಸಿದ್ದೇವೆ. ಈ ಪೋಸ್ಟ್ ನಲ್ಲಿ “ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಬರೆದ ಟಿ-ಶರ್ಟ್ಗಳೊಂದಿಗೆ ಬರದಂತೆ ಕೇಳಿಕೊಂಡರು.” ಎಂಬ ಶೀರ್ಷಿಕೆಯಿದ್ದು, ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಇಲ್ಲಿ ನೋಡಬಹುದು. ಇಲ್ಲಿ ಸ್ಪೀಕರ್ ಅವರು “ಒಂದು ವೇಳೆ ನೀವು ಟಿ-ಶರ್ಟ್ ನಲ್ಲಿ ಬರೆದುಕೊಂಡು ಬಂದಿದ್ದರೆ, ಈ ಸದನವು ನಡೆಯುವುದಿಲ್ಲ, ಟಿ-ಶರ್ಟ್ ಅನ್ನು ನೀವು ತೆಗೆದು ಬರಬೇಕು. ಈ ರೀತಿ ಸದನವು ನಡೆಯುವುದಿಲ್ಲ. ಯಾವುದೇ ಲೀಡರ್ ಅಗಿರಲಿ, ನೇತಾರ ಅಗಿರಲಿ, ಸದನದ ಘನತೆ ಗೌರವಗಳನ್ನು ಉಲ್ಲಂಘಿಸುವಂತಿಲ್ಲ” ಎಂದು ಹೇಳುತ್ತಾರೆ.
ಗಮನಿಸಬೇಕಾದ ಅಂಶವೆಂದರೆ, ಈ ವೀಡಿಯೋದಲ್ಲಿ ಮಧ್ಯೆ ಎಲ್ಲಿಯೂ, ಸ್ಪೀಕರ್ ಅವರ ಮಾತುಗಳ ಮಧ್ಯೆ ಟಿ-ಶರ್ಟ್ ಧರಿಸಿದ ರಾಹುಲ್ ಗಾಂಧಿಯವರು ಕಂಡುಬಂದಿಲ್ಲ. ಕ್ಯಾಮೆರಾ ಸ್ಪೀಕರ್ ಅವರತ್ತ ಮಾತ್ರ ಫೋಕಸ್ ಆಗಿರುವುದು ಕಂಡುಬರುತ್ತದೆ.
ಮಾರ್ಚ್ 20, 2025ರಂದು ದಿ ಹಿಂದೂ ಯೂಟ್ಯೂಬ್ ನಲ್ಲಿ ಪ್ರಕಟಿಸಿದ ಶಾರ್ಟ್ ಅನ್ನೂ ನೋಡಿದ್ದೇವೆ. ಇದರಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ವಿಪಕ್ಷದ ಸಂಸದರಿಂಗೆ ಸ್ಲೋಗನ್ ಬರೆದ ಟೀಶರ್ಟ್ ಹಾಕಿ ಬಾರದಂತೆ ಹೇಳುತ್ತಿರುವುದು ಕಂಡುಬಂದಿದೆ. ಜೊತೆಗೆ ಇಲ್ಲೂ ಇದು ರಾಹುಲ್ ಗಾಂಧಿಯವರಿಗೆ ಹೇಳಿದ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಗಳು ಕಂಡುಬಂದಿಲ್ಲ.
ಮಾರ್ಚ್ 20, 2019ರ ಇಂಡಿಯಾ ಟುಡೇ ವರದಿಯಲ್ಲೂ, ಗುರುವಾರ ಲೋಕಸಭೆಯು ಹಲವಾರು ಬಾರಿ ಮುಂದೂಡಿಕೆಗೆ ಸಾಕ್ಷಿಯಾಯಿತು, ಏಕೆಂದರೆ ಅನೇಕ ವಿರೋಧ ಪಕ್ಷದ ಸದಸ್ಯರು ಕೇಂದ್ರ ಸರ್ಕಾರವನ್ನು ಟೀಕಿಸುವ ಘೋಷಣೆಗಳನ್ನು ಬರೆದ ಟಿ-ಶರ್ಟ್ಗಳನ್ನು ಧರಿಸಿ ಸದನಕ್ಕೆ ಪ್ರವೇಶಿಸಿದರು. ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರನ್ನು ಖಂಡಿಸಿದರು, ಸದನವು ಸರಿಯಾಗಿ ಕಾರ್ಯನಿರ್ವಹಿಸಲು ನೀವು ಸಿದ್ಧರಿದ್ದರೆ ಟಿ-ಶರ್ಟ್ಗಳನ್ನು ತೆಗೆದುಹಾಕುವಂತೆ ಕೇಳಿದರು.” ಇದೇ ವರದಿಯಲ್ಲಿ, ವಿರೋಧ ಪಕ್ಷದ ಹೆಚ್ಚಿನ ಸಂಸದರು ಡಿಎಂಕೆಯವರಾಗಿದ್ದು, ಅವರ ಟಿ-ಶರ್ಟ್ಗಳಲ್ಲಿ ಮುದ್ರಿಸಲಾದ ಘೋಷಣೆಗಳು ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ವಿಷಯದ ಕುರಿತಾಗಿದ್ದವು.” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಈ ಸಾಕ್ಷ್ಯಾಧಾರಗಳ ಪ್ರಕಾರ, ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನುವುದು ಸುಳ್ಳಾಗಿದೆ. ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ವಿರುದ್ಧ ಘೋಷಣೆಯುಳ್ಳ ಟಿ-ಶರ್ಟ್ ಗಳನ್ನು ಧರಿಸಿ ಡಿಎಂಕೆ ಸದಸ್ಯರು ಸದನಕ್ಕೆ ಬಂದಿದ್ದು, ಇದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಭಾರತದ ಸಂಸತ್ತಿನಲ್ಲಿ ನಮ್ಮ ಜನ ಕುಳಿತಿದ್ದಾರೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರಾ?
Our Sources
Report by Hindustan Times, Dated: March 20, 2025
Report by India Today, Dated: March 20, 2025
X Post by PTI, Dated: March 20, 2025
YouTube Shorts by The Hindu, Dated: March 20, 2025
Ishwarachandra B G
August 30, 2025
Kushel Madhusoodan
August 26, 2025
Ishwarachandra B G
August 16, 2025