Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನಲ್ಲ, ಬಿಹಾರದ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ, ಧರ್ಮಸ್ಥಳ ಪ್ರಕರಣದ ಯೂಟ್ಯೂಬರ್ ಸಮೀರ್ ಜೊತೆಗೆ ಸಂಸದ ಸಸಿಕಾಂತ್ ಸೆಂಥಿಲ್, ಅಕ್ರಮ ಬಾಂಗ್ಲಾದೇಶಿ, ಪಾಕಿಸ್ತಾನಿ ವಲಸಿಗರನ್ನು ಲಿಬಿಯಾದಿಂದಲೂ ಹೊರಹಾಕಲಾಗುತ್ತಿದೆ, ವಿಮಲ್ ಪಾನ್ ಮಸಾಲಾ ಟೀಮ್ ಇಂಡಿಯಾದ ಹೊಸ ಪ್ರಾಯೋಜಕರಾಗಲಿದ್ದಾರೆ, ದಿನಕ್ಕೆ 4-5 ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು ಎಂಬ ಹೇಳಿಕೆಗಳು ಈ ವಾರ ಹರಿದಾಡಿವೆ. ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ನಿಜವಲ್ಲ ಎಂದು ಸಾಬೀತು ಪಡಿಸಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನಲ್ಲ ಎಂದು ಅಮೆರಿಕದ ಡಿಎನ್ಎ ತಜ್ಞ ಡಾ.ಮಾರ್ಟಿನ್ ಸಿಜೊ ಅವರು ಹೇಳಿದ್ದಾರೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಬಿಹಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಬಿಹಾರದ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿಲ್ಲ. ಯಾತ್ರೆ ಆರಂಭದ ವೀಡಿಯೋ ಕ್ಲಿಪ್ ಗಳನ್ನು ಹಂಚಿಕೊಂಡು ತಪ್ಪು ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸಂಚು ರೂಪಿಸಲು ಯೂಟ್ಯೂಬರ್ ಸಮೀರ್ ಅವರೊಂದಿಗೆ ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಅವರಿದ್ದಾರೆ ಎಂದು ಫೋಟೋ ಒಂದು ವೈರಲ್ ಆಗಿದೆ. ಈ ಬಗ್ಗೆ ಸತ್ಯಶೋಧನೆ ಮಾಡಿದಾಗ, ಫೋಟೋದಲ್ಲಿ ಸೆಂಥಿಲ್ ಅವರಿಲ್ಲ ಇದು ತಪ್ಪು ಹೇಳಿಕೆ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಅಕ್ರಮ ಬಾಂಗ್ಲಾದೇಶಿ, ಪಾಕಿಸ್ತಾನಿ ವಲಸಿಗರನ್ನು ಲಿಬಿಯಾದಿಂದಲೂ ಹೊರಹಾಕಲಾಗುತ್ತಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತ ಪರಿಶೀಲನೆಯಲ್ಲಿ, ಬಾಂಗ್ಲಾದೇಶಿ ವಲಸಿಗರಿದ್ದ ದೋಣಿ ಗ್ರೀಸ್ ಸಾಗರ ತೀರದಲ್ಲಿ ತಾಂತ್ರಿಕ ವೈಫಲ್ಯಕ್ಕೊಳಗಾಗಿ ನಿಂತಿದ್ದು, ಅವರನ್ನು ಗ್ರೀಸ್ ಕರಾವಳಿ ಕಾವಲು ಪಡೆ ವಶಕ್ಕೆ ಪಡೆದ ವಿದ್ಯಮಾನ ಇದಾಗಿದೆ. ಇವರು ಗ್ರೀಸ್ ಅಥವಾ ಇಟೆಲಿಯ ಗಮ್ಯ ಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವರದಿ ಇಲ್ಲಿ ಓದಿ

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಜೊತೆ ನಟ ಅಜಯ್ ದೇವಗನ್ ಇರುವ ವೈರಲ್ ಫೋಟೋವೊಂದು, ವಿಮಲ್ ಪಾನ್ ಮಸಾಲ 2028 ರವರೆಗೆ ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಪ್ರಾಯೋಜಕರಾಗಲಿದ್ದಾರೆ ಎಂದು ಹೇಳುತ್ತದೆ. ಆದರೆ ಈ ಹೇಳಿಕೆ ಸುಳ್ಳು. ವಿಮಲ್ ಪಾನ್ ಮಸಾಲ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ವರದಿಗಳು, ಬಿಸಿಸಿಐ ಪ್ರಕಟಣೆಗಳು ಅಥವಾ ಅಧಿಕೃತ ಪಟ್ಟಿಗಳು ಇಲ್ಲ. ವೈರಲ್ ಆಗಿರುವ ಈ ಫೋಟೋ ಎಐ ಮೂಲಕ ರಚಿತವಾಗಿದೆ ಎಂದು ನ್ಯೂಸ್ಚೆಕರ್ ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ದಿನಕ್ಕೆ 4-5 ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದರಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ಸಂಶೋಧನೆ ಪ್ರಕಾರ, ಬೆಳ್ಳುಳ್ಳಿ ರಕ್ತದೊತ್ತಡ ಕಡಿಮೆ ಮಾಡುವ ಸಂಯುಕ್ತವನ್ನು ಹೊಂದಿದೆ. ಆದರೆ ಇದರ ಪರಿಣಾಮ ಅತ್ಯಲ್ಪ. ರಕ್ತದೊತ್ತಡ ಇರುವವರಿಗೆ ಔಷಧದ ಹೊರತು ಬೆಳ್ಳುಳ್ಳಿ ತಿನ್ನುವುದು ಪರ್ಯಾಯವಲ್ಲ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ
Newschecker and THIP Media
August 29, 2025
Ishwarachandra B G
August 29, 2025
Kushel Madhusoodan
August 26, 2025