Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ದಾಳಿ
ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ದಾಳಿ ಎಂದು ವೈರಲ್ ಆಗುತ್ತಿರುವ ವೀಡಿಯೋ 2024ರಲ್ಲಿ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯದ್ದಾಗಿದೆ
ಆಪರೇಷನ್ ಸಿಂದೂರದ ಭಾಗವಾಗಿ ಭಾರತ ಸೇನೆ ಪಾಕಿಸ್ತಾನದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
13 ಸೆಕೆಂಡ್ ಗಳ ಈ ವೀಡಿಯೋದಲ್ಲಿ ಬಾಂಬ್ ದಾಳಿಯಾದಾಗ ಕಟ್ಟಡವೊಂದು ಸಂಪೂರ್ಣ ಛಿದ್ರಗೊಳ್ಳುವುದನ್ನು ಕಾಣಬಹುದು. ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ “ಆಪರೇಷನ್ ಸಿಂಧೂರ ಬಾಗ 2 ಮುಂದುವರೆದ ಭಾಗವಾಗಿ ಲಾಹೋರ್, ರಾವಲ್ಪಿಂಡಿ,ಕರಾಚಿ ಹಾಗೂ ಇನ್ನೂ ಹಲವು ನಗರಗಳ ಮೇಲೆ ಡ್ರೋಣ್ ದಾಳಿ” ಎಂದಿದೆ.

ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಹೇಳಿಕೆ ಎಂದು ಕಂಡುಬಂದಿದೆ. ಮತ್ತು ವೀಡಿಯೋ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದ ಸಂದರ್ಭದ್ದಾಗಿದೆ.
Also Read: ಯುದ್ಧ ವಿಮಾನ ಚಾಲನೆ ಮಾಡುತ್ತಿರುವವರು ಕರ್ನಲ್ ಸೋಫಿಯಾ ಖುರೇಷಿ ಅಲ್ಲ!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ. ಈ ವೇಳೆ ಇದು ಇಸ್ರೇಲ್ ದಾಳಿಯ ದೃಶ್ಯ ಎಂಬುದು ಗೊತ್ತಾಗಿದೆ.
ನವೆಂಬರ್ 22, 2024ರ ಐಎಚ್ಎ ನ್ಯೂಸ್ ವರದಿಯಲ್ಲಿ, ಇಸ್ರೇಲಿ ಪಡೆಗಳು ಬುರ್ಜ್ ಶೆಮಾಲಿ ಜಿಲ್ಲೆ, ಡೇರ್ ಮಿಮಾಸ್ ಪಟ್ಟಣ, ರಾಜಧಾನಿ ಬೈರುತ್ನ ದಕ್ಷಿಣ, ಕೊಟ್ರಾನಿ ಪಟ್ಟಣ ಮತ್ತು ಲೆಬನಾನ್ನ ಡೇರ್ ಕನೌನ್ ರಾಸ್ ಅಲ್-ಐನ್ ಪಟ್ಟಣದ ಮೇಲೆ ದಾಳಿ ನಡೆಸಿವೆ. ಲೆಬನಾನಿನ ಆರೋಗ್ಯ ಸಚಿವಾಲಯದ ಪ್ರಕಾರ, ಈ ದಾಳಿಗಳಲ್ಲಿ ಕೊಟ್ರಾನಿ ಪಟ್ಟಣದಲ್ಲಿ ಮೂವರು ಆರೋಗ್ಯ ಕಾರ್ಯಕರ್ತರು ಮತ್ತು ಡೀರ್ ಕನೌನ್ ರಾಸ್ ಅಲ್-ಐನ್ ಪಟ್ಟಣದಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು ಎಂದಿದೆ.

ನವೆಂಬರ್ 22, 2024ರ ಅಲ್ ಜಝೀರಾ ವರದಿಯಲ್ಲಿ, ದಕ್ಷಿಣ ಲೆಬನಾನ್ ಮತ್ತು ಬೈರುತ್ನ ಉಪನಗರಗಳ ಮೇಲೆ ಇಸ್ರೇಲಿ ಪಡೆಗಳು ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ ಐದು ಮಂದಿ ವೈದ್ಯಕೀಯ ಸಿಬ್ಬಂದಿ ಜೀವ ಕಳೆದುಕೊಂಡಿದ್ದು, ಬಹುಮಹಡಿ ಕಟ್ಟಡವನ್ನು ಧ್ವಂಸಗೊಳಿಸಿವೆ. ಇದರೊಂದಿಗೆ ದಕ್ಷಿಣದಲ್ಲಿ ಕಾಲಾಳು ಪಡೆಗಳು ಹೆಜ್ಬೊಲ್ಲಾ ಹೋರಾಟಗಾರರೊಂದಿಗೆ ಘರ್ಷಣೆ ನಡೆಸಿವೆ.
ಬೈರುತ್ನ ದಕ್ಷಿಣ ಉಪನಗರಗಳ ಒಳಗಿನ ಎರಡು ಕಟ್ಟಡಗಳ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಶುಕ್ರವಾರ ದಾಳಿ ನಡೆಸಿವೆ ಎಂದು ಲೆಬನಾನ್ನ ರಾಷ್ಟ್ರೀಯ ಸುದ್ದಿ ಸಂಸ್ಥೆ (ಎನ್ಎನ್ಎ) ವರದಿ ಮಾಡಿದೆ. ಜನನಿಬಿಡ ಬೀದಿಯಲ್ಲಿರುವ ಅಂಗಡಿಗಳು, ಜಿಮ್ ಮತ್ತು ಅಪಾರ್ಟ್ಮೆಂಟ್ಗಳಿರುವ 11 ಅಂತಸ್ತಿನ ಕಟ್ಟಡದ ಮಧ್ಯಭಾಗಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಪರಿಣಾಮದ ಬೆಂಕಿಯ ಉಂಡೆಯೊಂದು ಭುಗಿಲೆದ್ದಿತು ಮತ್ತು ರಚನೆಯು ಕುಸಿದುಬಿದ್ದು, ರಸ್ತೆಯಾದ್ಯಂತ ಅವಶೇಷಗಳು ಹರಡಿಕೊಂಡವು ಎಂದಿದೆ.

ನವೆಂಬರ್ 22, 2024ರ ದಿ ಗಾರ್ಡಿಯನ್ ವರದಿಯ ಪ್ರಕಾರ, ನವೆಂಬರ್ 22 ರಂದು ಬೈರುತ್ನ ದಕ್ಷಿಣ ಉಪನಗರಗಳ ಚಿಯಾ ಪ್ರದೇಶದಲ್ಲಿ ಇಸ್ರೇಲಿ ದಾಳಿಯು ಕಟ್ಟಡವನ್ನು ನೆಲಸಮಗೊಳಿಸಿದ ಕ್ಷಣವನ್ನು ದೃಶ್ಯಗಳು ತೋರಿಸಿವೆ. ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲಿ ಪಡೆಗಳು ಮತ್ತು ಹೆಜ್ಬೊಲ್ಲಾ ನಡುವೆ ಭಾರೀ ಘರ್ಷಣೆಗಳು ನಡೆದಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ ಎಂದಿದೆ.

ಈ ಸತ್ಯಶೋಧನೆಯ ಪ್ರಕಾರ, ವೈರಲ್ ವೀಡಿಯೋ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದಾಗಿನದ್ದಾಗಿದ್ದು, ಇದು 2024 ನವೆಂಬರ್ ನಲ್ಲಿ ನಡೆದಿದೆ ಎಂದು ಗೊತ್ತಾಗಿದೆ.
Our Sources
Report By IHA News, Dated: November 22, 2024
Report by Aljazeera, Dated: November 22, 2024
Report By The Guardian, Dated: November 22, 2024
Vasudha Beri
November 20, 2025
Ishwarachandra B G
November 7, 2025
Ishwarachandra B G
October 18, 2025