Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಯುದ್ಧ ವಿಮಾನ ಚಾಲನೆ ಮಾಡುತ್ತಿರುವ ಕರ್ನಲ್ ಸೋಫಿಯಾ ಖುರೇಷಿ
ಯುದ್ಧ ವಿಮಾನ ಚಾಲನೆ ಮಾಡುತ್ತಿರುವವರು ಕರ್ನಲ್ ಸೋಫಿಯಾ ಖುರೇಷಿ ಅವರಲ್ಲ, ಇದು ಅಮೆರಿಕದ ಯುದ್ಧವಿಮಾನವಾಗಿದ್ದು ಅದರ ಪೈಲಟ್ ಕ್ರಿಸ್ಟಿನ್ ಬಿಯೋ ವೂಲ್ಫ್ ಅವರಾಗಿದ್ದಾರೆ
ಆಪರೇಷನ್ ಸಿಂದೂರ ಕಾರ್ಯಾಚರಣೆ ಬಗ್ಗೆ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಇಬ್ಬರು ಮಹಿಳಾ ಅಧಿಕಾರಿಗಳು ಮಾತನಾಡಿದ್ದು ಆ ಬೆನ್ನಲ್ಲೆ ಅವರಲ್ಲೊಬ್ಬರಾದ ಕರ್ನಲ್ ಸೋಫಿಯಾ ಖುರೇಷಿ ಕುರಿತು ವೀಡಿಯೋ ವೈರಲ್ ಆಗಿದೆ.
ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಕರ್ನಲ್ ಸೋಫಿಯಾ ಖುರೇಷಿ ಮಾತೃಭೂಮಿಗೆ ಪ್ರಾಣದ ಹಂಗುತೊರೆದು ಹೋರಾಡುತ್ತಿದ್ದಾರೆ ಎಂದು ಅವರು ಯುದ್ಧ ವಿಮಾನವನ್ನು ಏರುತ್ತಿರುವ ವೀಡಿಯೋವನ್ನುಹಂಚಿಕೊಳ್ಳಲಾಗುತ್ತಿದೆ.


ಇವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ವೀಡಿಯೋದಲ್ಲಿ ಕಂಡುಬರುವ ಮಹಿಳಾ ಅಧಿಕಾರಿ, ಅಮೆರಿಕ ವಾಯುಪಡೆಗೆ ಸೇರಿದವರು, ಕರ್ನಲ್ ಸೋಫಿಯಾ ಖುರೇಷಿ ಅವರಲ್ಲ ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಸೆಪ್ಟೆಂಬರ್ 20, 2021ರಂದು spencerhughes2255 ಎಂಬ ಯೂಟ್ಯೂಬ್ ಚಾನೆಲ್ ನಿಂದ ಅಪ್ ಲೋಡ್ ಆಗಿರುವ ವೀಡಿಯೋ ಕಂಡುಬಂದಿದೆ. ಇದರ ವಿವರಣೆಯಲ್ಲಿ, ಮೇಜರ್ ಕ್ರಿಸ್ಟಿನ್ “ಬಿಯೋ” ವೂಲ್ಫ್ ಏರ್ ಕಾಂಬ್ಯಾಟ್ ಕಮಾಂಡ್ F-35A ಲೈಟ್ನಿಂಗ್ ಪ್ರದರ್ಶನವನ್ನು ನಿರ್ವಹಿಸುವುದನ್ನು ವೀಕ್ಷಿಸಿ ಎಂದಿರುವುದನ್ನು ಗಮನಿಸಿದ್ದೇವೆ.

ಈ ವಿವರಣೆಯಲ್ಲಿ ನೀಡಿದಂತೆ ಎಫ್ – 35 ವಿಮಾನವನ್ನು ಚಲಾಯಿಸಿದವರು ಮೇಜರ್ ಕ್ರಿಸ್ಟಿನ್ ಬಿಯೋ ವೂಲ್ಫ್ ಅವರಾಗಿದ್ದಾರೆ. ಇವರ ಬಗ್ಗೆ ನಾವು ಅಮೆರಿಕ ಭೂದಳದ ಏರ್ ಫೋರ್ಸ್ ವೆಬ್ ಸೈಟ್ ನೋಡಿದ್ದು, ಹಿರಿಯ ಪೈಲಟ್ ಆಗಿದ್ದಾರೆ. ಮತ್ತು ಪ್ರಾತ್ಯಕ್ಷಿಕೆ ವಿಭಾಗದ ಮುಖ್ಯ ಪೈಲಟ್ ಆಗಿದ್ದಾರೆ.

ಅವರು 13-ಸಿಬ್ಬಂದಿ ತಂಡಕ್ಕೆ ಕಾರ್ಯಾಚರಣೆಯ ಮೇಲ್ವಿಚಾರಣೆ ಮತ್ತು ನಿರ್ದೇಶನ ಮಾಡುತ್ತಾರೆ. ಇದರಲ್ಲಿ ನಿರ್ವಹಣೆ, ಏರ್ಕ್ರೂ ಫ್ಲೈಟ್ ಉಪಕರಣಗಳು ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿವೆ. ಮೇಜರ್ ಕ್ರಿಸ್ಟಿನ್ ಬಿಯೋ ವೂಲ್ಫ್ ಅವರು 2011 ರಲ್ಲಿ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಅಮೆರಿಕ ಏರ್ ಫೋರ್ಸ್ ರಿಸರ್ವ್ ಆಫೀಸರ್ ತರಬೇತಿ ಕಾರ್ಯಕ್ರಮದಿಂದ ನಿಯೋಜನೆಗೊಂಡ ನಂತರ ವಾಯುಪಡೆ ಸೇರಿದರು. ಅವರು F-22A ರಾಪ್ಟರ್ ಮತ್ತು F-35A ಲೈಟ್ನಿಂಗ್ II ನಲ್ಲಿ 800 ಕ್ಕೂ ಹೆಚ್ಚು ಹಾರಾಟದ ಗಂಟೆಗಳ ಅನುಭವ ಹೊಂದಿರುವ ಅನುಭವಿ ಫೈಟರ್ ಪೈಲಟ್ ಆಗಿದ್ದಾರೆ ಎಂದು ವಿವರದಲ್ಲಿದೆ.
ಅದೇ ರೀತಿ ನವೆಂಬರ್ 30, 2022ರಲ್ಲಿ airforceheritageflight.org ನಲ್ಲಿ ಮೇಜರ್ ಕ್ರಿಸ್ಟಿನ್ ಅವರ ಕುರಿತಾದ ಸಂದರ್ಶನವನ್ನು ನೋಡಿದ್ದೇವೆ.
ಮೇಜರ್ ಕ್ರಿಸ್ಟಿನ್ ಅವರ ವಿವರಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಮೇಜರ್ ಕ್ರಿಸ್ಟಿನ್ ಅವರು ಎಫ್ 35 ಚಾಲನೆ ಮಾಡುವ ಇನ್ನೊಂದು ವೀಡಿಯೋ ಮಾರ್ಚ್ 11, 2022ರಂದು Airshowguy916 ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಅದನ್ನು ಇಲ್ಲಿ ನೋಡಬಹುದು.
ನಮ್ಮ ತನಿಖೆಯ ಪ್ರಕಾರ, ವೈರಲ್ ವೀಡಿಯೋದಲ್ಲಿರುವ ಮಹಿಳೆ ಮೇಜರ್ ಕ್ರಿಸ್ಟಿನ್ ವೂಲ್ಫ್, ಆಗಿದ್ದಾರೆ. ಅಮೆರಿಕದ ವಾಯುಪಡೆಯ ಎಫ್-35 ಯುದ್ಧವಿಮಾನ ಚಲಾಯಿಸುವ ಅವರು ಹಿರಿಯ ಪೈಲಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
Also Read: ಪಾಕಿಸ್ತಾನ ಮೇಲೆ ಭಾರತದ ಕ್ಷಿಪಣಿ ದಾಳಿ ಎಂದ ಈ ವೀಡಿಯೋ ಇಸ್ರೇಲ್ ವಿರುದ್ಧ ಇರಾನ್ ದಾಳಿಯದ್ದು!
Our Sources
YouTube Video By spencerhughes2255, Dated: September 20, 2021
388th Fighter Wing, Bio Of Major KRISTIN “BEO” WOLFE
Interview By airforceheritageflight.org, Dated: November 30, 2022
YouTube Video By Airshowguy916, Dated: March 11, 2022
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025