Authors
Claim
ಮುಸ್ಲಿಂ ಮಹಿಳೆಯೊಬ್ಬರು ಭಗವದ್ಗೀತೆ ಓದಿದ ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ, “ದುಬೈ ನ ಮುಸ್ಲಿಂ ಮಹಿಳೆ ಭಗವದ್ ಗೀತೆ ಓದಿದ ಮೇಲೆ ಹಿಂದೂ ಧರ್ಮ ಒಪ್ಪಿಕೊಂಡು ರಾಧೆ ಆದಳು” ಎಂದು ಹೇಳಿದೆ.
ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ಕಂಡುಕೊಂಡಿದೆ. ನಿಜದಲ್ಲಿ ಈಕೆ ಮುಸ್ಲಿಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲ, ಹಿಂದೂ ಆಗಿದ್ದಾಕೆ ಇಸ್ಲಾಂಗೆ ಮತಾಂತರವಾಗಿದ್ದರು ಎಂದು ತಿಳಿದುಬಂದಿದೆ.
Also Read: ಸರ್ಕಾರಿ ಬಸ್‌ಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Fact
ಸತ್ಯಶೋಧನೆಗಾಗಿ ನಾವು ಕ್ಲೇಮಿನಲ್ಲಿ ಕಂಡುಬಂದಿರುವ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಆಕೆಯ ಕುರಿತ ಮಾಹಿತಿಗಳು ಲಭ್ಯವಾಗಿವೆ.
ಉಮ್ಮಿದ್.ಕಾಮ್ ಎನ್ನುವ ವೆಬ್‌ಸೈಟ್ ನಲ್ಲಿ ಮೇ 4 2022ರಂದು ಪ್ರಕಟವಾದ ಲೇಖನದ ಪ್ರಕಾರ, “ಹಿಂದೂ ಬಾಲಕಿ ಮರ್ಯಾಮ್ ಎಂಬಾಕೆ ಯುಎಇಗೆ ಬಂದ ಬಳಿಕ ಮುಸ್ಲಿಮರ ಕುರಿತ ಆಕೆಯ ನಿಲುವುಗಳು ಬದಲಾಗಿವೆ. ಆಕೆ ಒಂದು ವರ್ಷ ಇಸ್ಲಾಂ ಅನ್ನು ಅಧ್ಯಯನ ಮಾಡಿದ್ದು ಬಳಿಕ ಆಕೆ ಮುಸ್ಲಿಂ ಆಗಲು ನಿರ್ಧರಿಸಿದ್ದಾಳೆ” ಎಂದಿದೆ.
ಈ ವರದಿಯ ಬಳಿಕ ನಾವು ಮರ್ಯಾಮ್ ಬಗ್ಗೆ ಇನ್ನಷ್ಟು ಶೋಧ ನಡೆಸಿದ್ದು ಯೂಟ್ಯೂಬ್‌ನಲ್ಲಿ ವೀಡಿಯೋ ಲಭ್ಯವಾಗಿದೆ.
ಏಪ್ರಿಲ್ 30 2016ರಂದು ಓವರ್ ಕಮ್ ಟಿವಿ ಯೂಟ್ಯೂಬ್ ಚಾನೆಲ್ “Religion Was Always a Confusion-New Muslim” ಶೀರ್ಷಿಕೆಯಡಿ ಪ್ರಕಟಿಸದ ವೀಡಿಯೋವನ್ನು ನೋಡಿದ್ದೇವೆ. 4.07 ನಿಮಿಷದ ಈ ವೀಡಿಯೋದಲ್ಲಿ ಆಕೆ ಮುಸ್ಲಿಂ ಆಗಲು ಆದ ಕಾರಣದ ಬಗ್ಗೆ ಹೇಳಿದ್ದನ್ನು ಗಮನಿಸಿದ್ದೇವೆ.
ಇದೇ ರೀತಿಯ ಪೋಸ್ಟ್ ಗಳನ್ನು ನಾವು ಮೀಶಾಟ್.ಇನ್ ನ ಲೇಖನ ಮತ್ತು ಇನ್‌ಸ್ಟಾಗ್ರಾಂನಲ್ಲಿ @sunnah.revive ನಲ್ಲೂ ಕಂಡುಕೊಂಡಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ವೈರಲ್ ಕ್ಲೇಮಿನಲ್ಲಿ ಹೇಳಿದಂತೆ ಆಕೆ ಮುಸ್ಲಿಂ ಆಗಿದ್ದಾಕೆ ಹಿಂದೂ ಆಗಿದ್ದಲ್ಲ. ಹಿಂದೂ ಧರ್ಮೀಯಳಾಗಿದ್ದ ಮಾರ್ಯಮ್ ಎಂಬಾಕೆ ಮುಸ್ಲಿಂ ಆದ ವಿದ್ಯಮಾನವಾಗಿದೆ. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ.
Also Read: ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?
Result: False
Our Sources
Article By Ummid.com, Dated: May 4, 2022
YouTube Video By Overcometv, Dated: April 30, 2016
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.