Fact Check: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?

ಸಿಎಂ ಸಿದ್ದರಾಮಯ್ಯ, ದುರಹಂಕಾರ, ಸನ್ಮಾನ ತಿರಸ್ಕಾರ

Authors

Claim

ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ಕುರಿತು ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಧರ್ಮಸ್ಥಳದ ಸಂಸ್ಥೆಗಳ ಪರವಾಗಿ ಸನ್ಮಾನ ಮಾಡಲು ಬಂದ ಸುರೇಂದ್ರ ಕುಮಾರ್ ಅವರನ್ನು ವಾಪಸ್‌ ಕಳುಹಿಸಿದ ದುರಂಹಕಾರಿ ಸಿಎಂ ಸಿದ್ದರಾಮಯ್ಯ ಅದೇ ಮುಸ್ಲಿಂ ಸನ್ಮಾನ ಮಾಡಿದ್ದರೆ ಟೋಪಿ ಹಾಕಿಸಿ ಕೊಳ್ಳುತ್ತಿದ್ದ ದುರಹಂಕಾರಕ್ಕೂ ಒಂದು ಮಿತಿ ಇರಬೇಕು ಕರ್ಮ ಇವನನ್ನು ಸುಮ್ಮನೆ ಬಿಡದು..” ಎಂದಿದೆ.

Also Read: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?

Fact Check: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ, ಎಂಬುದು ನಿಜವೇ?

ಈ ಕುರಿತು ನ್ಯೂಸ್ ಚೆಕರ್‌ ಸತ್ಯಶೋಧನೆಗೆ ಮುಂದಾಗಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact

ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ ಈ ವೇಳೆ ಹಲವು ಮಾಧ್ಯಮ ವರದಿಗಳು ಕಂಡುಬಂದಿವೆ.

ಜೂನ್‌ 26, 2023ರ ಟಿವಿ 9 ಕನ್ನಡ ವರದಿಯಲ್ಲಿ “ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಸತ್ಕಾರವನ್ನು ನಯವಾಗಿ ತಿರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!” ಎಂದಿದೆ. ಈ ವರದಿಯಲ್ಲಿ “sಭೆ ಸಮಾರಂಭಗಳಲ್ಲಿ ನನಗೆ ಸನ್ಮಾನಗಳು ಬೇಡ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಂತರ ಹೇಳಿದ್ದರು ಮತ್ತು ಅದರಂತೆ ನಡೆದುಕೊಂಡಿದ್ದರು” ಎಂದಿದೆ.

Also Read: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?

Fact Check: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ, ಎಂಬುದು ನಿಜವೇ?

ಜುಲೈ 11, 2023ರ ಪ್ರಜಾ ಪ್ರಕಾಶ ಯೂಟ್ಯೂಬ್‌ ಚಾನೆಲ್‌ ವೀಡಿಯೋವೊಂದರಲ್ಲಿ “ಧರ್ಮಸ್ಥಳದಲ್ಲಿ ಸನ್ಮಾನ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ..!? ಸುರೇಂದ್ರ ಕುಮಾರ್‌ರಿಂದ ಸ್ಪಷ್ಟನೆ” ಎಂಬ ಶೀರ್ಷಿಕೆ ನೀಡಲಾಗಿದ್ದು, ಇದರಲ್ಲಿ ಸಿಎಂ ಅವರು ಸನ್ಮಾನವನ್ನು ತಿರಸ್ಕರಿಸಿದ ಬಗ್ಗೆ ಧರ್ಮಸ್ಥಳದ ಸುರೇಂದ್ರ ಕುಮಾರ್ ಅವರು ನೀಡಿದ ಸ್ಪಷ್ಟನೆ ಇದೆ. ‘ಯಾವುದೇ ಹಾರ ತುರಾಯಿಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಣೆ ಮಾಡಿದ್ದೆ ಅದರಂತೆ ಇದನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಗೌರವ ಪೂರ್ವಕವಾಗಿ ಅದನ್ನು ಮುಟ್ಟುವುದಾಗಿ ಹೇಳಿದ್ದರು’ ಎಂದು ಸಿಎಂ ಸನ್ಮಾನಕ್ಕೆ ಮುಂದಾದ ಸಂದರ್ಭದಲ್ಲಿ ಹೇಳಿದ್ದಾಗಿ ಸುರೇಂದ್ರ ಕುಮಾರ್‌ ಹೇಳಿರುವ ವೀಡಿಯೋ ಇದರಲ್ಲಿದೆ.

ಜುಲೈ 9, 2023ರ ವಿಸ್ತಾರ ನ್ಯೂಸ್‌ ವರದಿಯೂ ನಮಗೆ ಲಭ್ಯವಾಗಿದ್ದು, ಇದರಲ್ಲಿ “ಧರ್ಮಸ್ಥಳದ ಸನ್ಮಾನ ತಿರಸ್ಕರಿಸಿದ್ರಾ ಸಿದ್ದರಾಮಯ್ಯ” ಎಂದಿದೆ. ವರದಿಯಲ್ಲಿ “ ಸಿದ್ದರಾಮಯ್ಯ ಅವರು ತಾವು ಕಾರ್ಯಕ್ರಮಗಳಲ್ಲಿ ಸನ್ಮಾನಗಳನ್ನು ಸ್ವೀಕರಿಸುವುದಿಲ್ಲ ಎಂದು ಹಿಂದೆಯೇ ಘೋಷಿಸಿರುವುದನ್ನು ಹೇಳಿದರು. ಆದಾಗ್ಯೂ ಸಂಸ್ಥೆಯ ಗೌರವಾರ್ಥ ಅದನ್ನು ಮುಟ್ಟುತ್ತೇನೆ ಎಂದಿದ್ದರು. ಅಂತೆಯೇ ಅವರು ಮುಟ್ಟಿ ನನ್ನ ಬೆನ್ನು ತಟ್ಟಿ ಕಳುಹಿಸಿದ್ದಾರೆ.” ಎಂದು ಧರ್ಮಸ್ಥಳದ ಸುರೇಂದ್ರ ಕುಮಾರ್ ಅವರು ಮಾಡಿದ್ದ ವೀಡಿಯೋವನ್ನು ಉಲ್ಲೇಖಿಸಲಾಗಿದೆ.

Also Read: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ?

ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಸಿಎಂ ಸನ್ಮಾನ ಸ್ವೀಕರಿಸಿ ಅಹಂಕಾರ ಮೆರೆದಿದ್ದಾರೆ ಎಂದು ಹೇಳುವುದು ತಪ್ಪಾದ ಸಂದರ್ಭವಾಗಿದೆ.

Result: Missing Context

Our Sources
Report By Tv9 Kannada, Dated: July 26, 2023

Report By Vistara News, Dated: July 9, 2023

YouTube Video By Praja Prakasha, Dated: July 11, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors