Fact Check
ಸಿಎಂ ಸಿದ್ದರಾಮಯ್ಯ ನಿಧನ ಎಂದು ಫೇಸ್ಬುಕ್ ನಲ್ಲಿ ಮುಖ್ಯಮಂತ್ರಿ ಕಚೇರಿಯಿಂದಲೇ ಪೋಸ್ಟ್? ವೈರಲ್ ಪೋಸ್ಟ್ ನಿಜವೇ
Claim
ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಅವರ ನಿಧನದ ಬಗ್ಗೆಯೇ ಬರೆಯಲಾಗಿದೆ ಎಂಬಂತೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ‘ಸಿಎಂ ಕಚೇರಿಗೆ ಇಂಗ್ಲಿಷ್ ಅಧ್ಯಾಪಕರ ಅಗತ್ಯವಿದೆ’ ಎಂದಿದೆ. ಇದರೊಂದಿಗೆ ಲಗತ್ತಿಸಲಾದ ಸಿಎಂ ಖಾತೆಯ ಪೋಸ್ಟ್ ಸ್ಕ್ರೀನ್ ಶಾಟ್ ನಲ್ಲಿ “ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು. ಬಹುಭಾಷಾ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.”ಎಂದಿದೆ.


ಈ ಮೂಲಕ ವ್ಯಾಕರಣ ದೋಷದ ಬಗ್ಗೆ ಲೇವಡಿ ಮಾಡಲಾಗಿದೆ. ಇಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಫೇಸ್ಬುಕ್ ಟ್ರಾನ್ಸ್ ಲೇಶನ್ ನಿಂದಾದ ಪ್ರಮಾದವಾಗಿದ್ದು, ನೈಜ ಪೋಸ್ಟ್ ವ್ಯಾಕರಣ ಬದ್ಧವಾಗಿ ಸರಿಯಾದ ವಾಕ್ಯವನ್ನೇ ಹೊಂದಿದೆ ಎಂದು ಗೊತ್ತಾಗಿದೆ.
Also Read: ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ ಎಂದ ಪ್ರಕರಣದ ನಿಜಾಂಶವೇನು?
Fact
ಸತ್ಯಶೋಧನೆಗಾಗಿ ನಾವು ಫೇಸ್ಬುಕ್ ನಲ್ಲಿ “ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ” ಫೇಸ್ಬುಕ್ ಖಾತೆಯನ್ನು ಪರಿಶೀಲಿಸಿದ್ದೇವೆ.
ಜುಲೈ 15, 2025ರಂದು ಸಿದ್ದರಾಮಯ್ಯ ಅವರ ಅಧಿಕೃತ ಫೇಸ್ಬುಕ್ ಖಾತೆಯಿಂದ ಮಾಡಲಾದ ಪೋಸ್ಟ್ ಅಗಲಿದ ನಟಿ ಸರೋಜಾದೇವಿಯವರಿಗೆ ಸಲ್ಲಿಸಿದ ಅಂತಿಮ ನಮನದ ಬಗ್ಗೆ ಆಗಿದ್ದು ಅದು ಕನ್ನಡದಲ್ಲಿದೆ ಮತ್ತು ವಾಕ್ಯಗಳು ವ್ಯಾಕರಣ ಬದ್ಧವಾಗಿ ಸರಿಯಾಗಿವೆ ಎಂಬುದನ್ನು ನಾವು ಗಮನಿಸಿದ್ದೇವೆ.

ಆ ಬಳಿಕ ನಾವು ಪೋಸ್ಟ್ ಅನ್ನು ಫೇಸ್ಬುಕ್ ನಲ್ಲಿ ಇಂಗ್ಲಿಷ್ ಗೆ ಟ್ರಾನ್ಸ್ ಲೇಷನ್ ಮಾಡಿ ನೋಡಿದ್ದೇವೆ. ಈ ವೇಳೆ ವೈರಲ್ ಪೋಸ್ಟ್ ಗಳಲ್ಲಿರುವಂತೆ ಅನುವಾದ ತಪ್ಪಾಗಿರುವುದನ್ನು ಗಮನಿಸಿದ್ದೇವೆ. ಈ ಅನುವಾದದ ಪ್ರಕಾರ “Chief minister Siddaramaiah passed away yesterday multilingual star, senior actress B Took darshan of Sarojadevi’s earthly body and paid his last respects” ಎಂದಿದೆ. ಕನ್ನಡದ ಮೂಲಕ ವಾಕ್ಯವನ್ನು ಗಮನಿಸಿದಾಗ ಇದರಲ್ಲಿ ವಾಕ್ಯದ ಅನುವಾದದಲ್ಲಿ ತಪ್ಪು, ವಾಕ್ಯದ ರಚನೆಯಲ್ಲಿ ವ್ಯತ್ಯಾಸ ಇರುವುದು ಖಾತ್ರಿಯಾಗುತ್ತದೆ.

ಇನ್ನಷ್ಟು ಖಚಿತಪಡಿಸಲು ನಾವು ಸಿಎಂ ಸಿದ್ದರಾಮಯ್ಯ ಅವರ ಪೋಸ್ಟ್ ನ ಕನ್ನಡ ವಾಕ್ಯಗಳನ್ನು ಗೂಗಲ್ ಟ್ರಾನ್ಸ್ ಲೇಟ್ ಮೂಲಕ ಪರಿಶೀಲಿಸಿದ್ದೇವೆ.

ಇದರಲ್ಲಿ ಅನುವಾದ ಸರಿಯಾಗಿರುವುದನ್ನೂ ಗಮನಿಸಿದ್ದೇವೆ.
ಈ ಮೂಲಕ ಫೇಸ್ಬುಕ್ ನಲ್ಲಿ ಕನ್ನಡ-ಇಂಗ್ಲಿಷ್ ಅನುವಾದದಲ್ಲಿನ ತಪ್ಪಿನಿಂದಾಗಿ ಸಿದ್ದರಾಮಯ್ಯನವರು ಮೃತಪಟ್ಟರು ಎಂಬಂತೆ ವಾಕ್ಯವಾಗಿದೆ ಎಂದು ಗೊತ್ತಾಗಿದೆ.
ಈ ತನಿಖೆಯ ಪ್ರಕಾರ ಅನುವಾದದಲ್ಲಿನ ತಪ್ಪಿನಿಂದಾಗಿ ಸಿಎಂ ಪೋಸ್ಟ್ ನ ಬಗ್ಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಜಗನ್ನಾಥ ರಥಯಾತ್ರೆ ಯನ್ನು ರಾಹುಲ್ ಗಾಂಧಿ ನಾಟಕ ಎಂದು ಕರೆದಿದ್ದಾರೆಯೇ?
Our Sources
Facebook Post By Chief Minister of Karnataka, Dated: July 15, 2025
Google translate